ಇಂದು ಮಧ್ಯರಾತ್ರಿಯಿಂದ ನ.30 ರವರೆಗೆ ದೆಹಲಿಯಲ್ಲಿ ಪಟಾಕಿ ನಿಷೇಧ…!

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನವೆಂಬರ್ 9 ಮಧ್ಯರಾತ್ರಿಯಿಂದ ನವೆಂಬರ್ 30 ರವರೆಗೆ ದೆಹಲಿಯಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಗಾಳಿಯ ಗುಣಮಟ್ಟ ಹದಗೆಡದಂತೆ ತಡೆಯಲು ದೀಪಾವಳಿಯ ಮುನ್ನ ಪಟಾಕಿ ನಿಷೇಧ ಹೇರಲಾಗಿದೆ.

ಈ ಆದೇಶ ಕಳೆದ ವರ್ಷ ನವೆಂಬರ್‌ನಲ್ಲಿ ರಾಷ್ಟ್ರವ್ಯಾಪಿ ಸುತ್ತುವರಿದ ಕಳಪೆ ಗಾಳಿಯ ಗುಣಮಟ್ಟ ಕೆಟ್ಟ ನಗರಗಳು ಮತ್ತು ಪಟ್ಟಣಗಳಿಗೆ ಅನ್ವಯಿಸುತ್ತದೆ ಎಂದು ಹಸಿರು ನ್ಯಾಯಮಂಡಳಿ ಹೇಳಿದೆ.

ಕಡಿಮೆ ಮಾಲಿನ್ಯವೆಂದು ಪರಿಗಣಿಸಲಾದ ಹಸಿರು ಕ್ರ್ಯಾಕರ್‌ಗಳನ್ನು ಮಾತ್ರ ನಗರಗಳು ಮತ್ತು ಪಟ್ಟಣಗಳಲ್ಲಿ ಮಾರಾಟ ಮಾಡಲಾಗುವುದು. ಅಲ್ಲಿ ಗಾಳಿಯ ಗುಣಮಟ್ಟ ಮಧ್ಯಮ ಆಗಿರುತ್ತದೆ. ಕೋವಿಡ್ ಕಾರಣ ರಾಜ್ಯ ನಿರ್ದಿಷ್ಟಪಡಿಸಿದಂತೆ ಬಳಕೆಯ ಸಮಯವನ್ನು ಎರಡು ಗಂಟೆಗಳವರೆಗೆ ನಿರ್ಬಂಧಿಸಲು ನ್ಯಾಯಮಂಡಳಿ ಆದೇಶಿಸಿದೆ. ಕರ್ನಾಟಕ ಸೇರಿ ವಾಯುಮಾಲಿನ್ಯ ಹೆಚ್ಚಾಗಿ ಇರದ ಭಾಗಗಳಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಹಸಿರು ಪಟಾಕಿ ಸಿಡಿಸಲು ಅವಕಾಶ ನೀಡಲಾಗುವುದು ಎಂದು ಕೂಡ ತನ್ನ ಆದೇಶದಲ್ಲಿ ತಿಳಿಸಿದೆ.

ಕಳೆದ ಮೂರು ದಿನಗಳಿಂದ, ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿನ ಗಾಳಿಯ ಗುಣಮಟ್ಟವು  ಅತ್ಯಂತ ಕಳಪೆ ವರ್ಗದಲ್ಲಿ ಸೇರಿದೆ. ವಾರಗಳ ನಂತರ ಇದು ತೀವ್ರವಾಗಲಿದೆ. ತೀವ್ರವಾದ ವಾಯುಮಾಲಿನ್ಯ ಆರೋಗ್ಯವಂತ ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಸ್ತಿತ್ವದಲ್ಲಿರುವ ಕಾಯಿಲೆಗಳನ್ನು ಹೊಂದಿರುವವರ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಮಾತ್ರವಲ್ಲದೇ ಭಾರತೀಯ ವೈದ್ಯಕೀಯ ಸಂಘ ಅಕ್ಟೋಬರ್ ಅಂತ್ಯದಿಂದ ದೆಹಲಿಯ ಕೋವಿಡ್ ಪ್ರಕರಣಗಳಲ್ಲಿ ಕನಿಷ್ಠ 17.5 ರಷ್ಟು ವಾಯುಮಾಲಿನ್ಯಕ್ಕೆ ಸಂಬಂಧಿಸಿದೆ ಎಂದಿದೆ.

ಹೀಗಾಗಿ ಮುಂಬೈನ ಮುನ್ಸಿಪಲ್ ಬಾಡಿ ಬಿಎಂಸಿ ನವೆಂಬರ್ 14 ರಂದು ಲಕ್ಷ್ಮಿ ಪೂಜೆ ದಿನವನ್ನು ಹೊರತುಪಡಿಸಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights