ಕರ್ನಾಟಕ ಉಪಚುನಾವಣೆ: ಮೊದಲ ಸುತ್ತಿನಲ್ಲಿ ಬಿಜೆಪಿಗೆ 3,000 ಮತಗಳ ಮುನ್ನಡೆ!

ಕರ್ನಾಟಕದ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಮೊದಲ ಸುತ್ತಿನಲ್ಲಿ ಅಂಚೆ ಮೂಲಕ ಬಂದಿರುವ ಮತಗಳ ಎಣಿಕೆ ನಡೆಯುತ್ತಿದ್ದು, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಆರ್‌ಆರ್‌ ನಗರ ಕ್ಷೇತ್ರದಲ್ಲಿ ಬಿಜೆಪಿಯ ಮುನಿರತ್ನ ಅವರಿಗೆ 3000 ಮತಗಳ ಮುನ್ನಡೆಯಿದೆ.

ಇನ್ನು ಸಿರಾದಲ್ಲಿಯೂ ಬಿಜೆಪಿಯ ರಾಜೇಶ್‌ಗೌಡ ಅವರು 3324 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಮುನಿರತ್ನ 6164 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 2915 ಮತಗಳನ್ನು ಪಡೆದುಕೊಂಡಿದ್ದಾರೆ.

ಅಂಚೆ ಮತಗಳಲ್ಲಿಯೂ ಮುನಿರತ್ನ ಅವರಿಗೆ ಮುನ್ನಡೆಯಿದೆ. ಮುನಿರತ್ನ (ಬಿಜೆಪಿ)– 253, ಕುಸುಮಾ (ಕಾಂಗ್ರೆಸ್)– 112, ಕೃಷ್ಣಮೂರ್ತಿ (ಜೆಡಿಎಸ್‌)– 6.

ನವೆಂಬರ್ 3ರಂದು ಆರ್‌.ಆರ್‌. ನಗರ ಮತ್ತು ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು, ಹಾಗೂ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಂದ ಅಕ್ಟೋಬರ್ 28ರಂದು ಚುನಾವಣೆ ನಡೆದಿತ್ತು. ಈ ಎರಡೂ ಚುನಾವಣೆಗಳ ಮತ ಎಣಿಕೆ ಕಾರ್ಯ ಈಗಾಗಲೇ ಆರಣಭವಾಗಿದ್ದು, ಕ್ಷೇತ್ರದ ಮತದಾರರು, ಕೈ ಹಿಡಿಯಲಿದ್ದಾರಾ, ತೆನೆ ಹೊರಲಿದ್ದಾರಾ ಅಥವಾ ಕಮಲ ಮುಡಿಯಲಿದ್ದಾರಾ ಎಂಬುದು ಇನ್ನೇನು ಕೆಲವೇ ಕ್ಷಣಗಳಿಂದ ತಿಳಿಯುತ್ತಾ ಹೋಗುತ್ತದೆ. ಮಧ್ಯಾಹ್ನದ ವೇಳೆಗೆ ಗೆಲುವು ಯಾರಿಗೆಂದು ಬಹುಪಾಲು ತಿಳಿಯಲಿದೆ.


ಇದನ್ನೂ ಓದಿ: ಕಾಂಗ್ರೆಸ್‌ ಭದ್ರಕೋಟೆ ಭೇದಿಸುತ್ತಿದೆ ಬಿಜೆಪಿ: ಸಿದ್ದರಾಮಯ್ಯ ತವರಲ್ಲಿ ಅರಳುತ್ತಿದೆ ಕಮಲ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights