ಉಪ ಚುನಾವಣೆ; ಗೆಲುವಿನ ಖಾತೆ ತೆರೆದ ಬಿಜೆಪಿ: ಮಣಿಪುರದ ಸಿಂಗಾಟ್‌ನಲ್ಲಿ BJP ಗೆಲುವು!
ದೇಶದ 11 ರಾಜ್ಯಗಳಲ್ಲಿ ನಡೆದ ಉಪಚುನಾವಣೆ ಮತ್ತು ಬಿಹಾರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. 58 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಮೊದಲಿಗೆ ಗೆಲುವಿನ ಖಾತೆ ತೆರೆದಿದ್ದು, ಮಣಿಪುರದ ಸಿಂಗಾಟ್ ಕ್ಷೇತ್ರದ ಅಭ್ಯರ್ಥಿ ಗೆಲವು ಸಾಧಿಸಿದ್ಧಾರೆ.
ಮಣಿಪುರ ರಾಜ್ಯದಲ್ಲಿ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣಾ ನಡೆದಿದ್ದು, ಈ ಪೈಕಿ ಸಿಂಗಾಟ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಜಿನ್ಸುವಾನ್ಹೌ ಜಯಗಳಿಸಿದ್ದಾರೆ ಎಂದು ತಿಳಿದುಬಂದಿದೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಬಿಜೆಪಿ ಅಭ್ಯರ್ಥಿ ಗಿನ್ಸುವಾನ್ಹೌ ಅವರನ್ನು ಸಿಂಗಾಟ್‌ನಿಂದ ವಿಜೇತರೆಂದು ಘೋಷಿಸಲಾಗಿದೆ.
ನವೆಂಬರ್ 7 ರಂದು ರಾಜ್ಯದ ಲಿಲಾಂಗ್, ವಾಂಗ್‌ಜಿಂಗ್ ಟೆಂಥಾ ಮತ್ತು ಸೈತು ಸೇರಿದಂತೆ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು.
ಇದನ್ನೂ ಓದಿ: ಶಿರಾ ಉಪ ಚುನಾವಣೆ ಮತ ಎಣಿಕೆ : ಕಾಂಗ್ರೆಸ್ – ಬಿಜೆಪಿ ನಡುವೆ ತೀವ್ರ ಪೈಪೋಟಿ!

