ಇಂದು ಜ್ಯೂ.ಚಿರುಗೆ ತೊಟ್ಟಿಲ ಶಾಸ್ತ್ರ : ಸರ್ಜಾ ಕುಟುಂಬದಲ್ಲಿ ಹೆಚ್ಚಿದ ಸಂತಸ..!

ಸರ್ಜಾ ಮನೆಯಲ್ಲಿ ಜ್ಯೂನಿಯರ್ ಚಿರು ಆಗಮನದಿಂದ ಸಂತಸ ಇಮ್ಮಡಿಸಿದೆ. ಮೇಘನಾ ರಾಜ್ ಸರ್ಜಾ 2017ರ ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜ್ಯೂ,ಚಿರು ಹುಟ್ಟಿದ 20 ದಿನಗಳ ಬಳಿಕ ಇಂದು ಮೇಘನಾ ತೊಟ್ಟಿಲ ಶಾಸ್ತ್ರ ಇಟ್ಟುಕೊಂಡಿದ್ದಾರೆ.

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮಗು ಜನಿಸಿರುವುದು ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸುವಂತೆ ಮಾಡಿದೆ. ನಮ್ಮ ಚಿರು ಅಣ್ಣ ಎಲ್ಲೂ ಹೋಗಿಲ್ಲ, ಎಲ್ಲರ ಜೊತೆಯಲ್ಲಿದ್ದಾರೆ, ಮಗುವಿನ ರೂಪದಲ್ಲಿ ಮತ್ತೆ ಬಂದಿದ್ದಾರೆ ಎಂದು ಸಂಭ್ರಮದಿಂದ ಆಸ್ಪತ್ರೆಯ ಹೊರಗೆ ಪಟಾಕಿ ಹಚ್ಚಿ ಸಿಹಿ ಹಂಚಿ ಸಂಭ್ರಮವನ್ನು ವ್ಯಕ್ತಪಡಿಸಿದ್ದರು. ಸದ್ಯ ಜ್ಯೂ. ಚಿರುಗೆ ಎಲ್ಲರೂ ಪ್ರೀತಿಯಿಂದ ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಆದರೆ ತೊಟ್ಟಿಲ ಶಾಸ್ತ್ರದಂದು ಯಾವ ಹೆಸರು ಇಡುತ್ತಾರೆಂಬುದು ಭಾರೀ ಕುತೂಹಲ ಕೆರಳಿಸಿದೆ.

2017ರ ಅಕ್ಟೋಬರ್ 22ರಂದು ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಮದುವೆ ನಿಶ್ಚಿತಾರ್ಥ ನೆರವೇರಿತ್ತು. ಇದೀಗ ಅದೇ ದಿನಾಂಕದಂದು ಅವರ ಪ್ರೇಮದ ಕಾಣಿಕೆ ಮಗು ಜನನವಾಗಿದ್ದು ಕಾಕತಾಳೀಯ ಎನ್ನಬಹುದು. ಮೊನ್ನೆ 17ನೇ ತಾರೀಖು ಚಿರಂಜೀವಿ ಸರ್ಜಾ ಹುಟ್ಟುಹಬ್ಬವಾಗಿತ್ತು.ಅಂದು ಮಗು ಜನನವಾಗಲಿದೆ, ಅವಳಿ ಮಗುವಾಗಲಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಿತ್ತು. ಆದರೆ ಜ್ಯೂ. ಚಿರು ನವರಾತ್ರಿಯ ಉತ್ತಮ ಗಳಿಗೆಯಲ್ಲಿ ಹುಟ್ಟಿದೆ.

ಮಗು ಹುಟ್ಟುವ ಮುನ್ನ ಚಿಕ್ಕಪ್ಪ ಧ್ರುವ 10 ಲಕ್ಷದ ಬೆಳ್ಳಿ ತೊಟ್ಟಿಲು ಮಾಡಿಸಿದ್ದಾರೆ. ಮೇಘನಾ ಮನೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕೇವಲ ಕುಟುಂಬಸ್ಥರು ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ.

ಕಳೆದ ಜೂನ್ 7ರಂದು ಚಿರಂಜೀವಿ ಸರ್ಜಾ ಹಠಾತ್ತಾಗಿ ಹೃದಯಾಘಾತದಿಂದ ನಿಧನ ಹೊಂದಿ ಕುಟುಂಬ ವರ್ಗ, ಅಪಾರ ಬಂಧು-ಮಿತ್ರರು, ಅಭಿಮಾನಿಗಳು ದುಃಖ ಸಾಗರದಲ್ಲಿ ಮುಳುಗುವಂತೆ ಮಾಡಿದ್ದರು. ಆಗ ಮೇಘನಾ ರಾಜ್ 4 ತಿಂಗಳ ಗರ್ಭಿಣಿ. 5 ತಿಂಗಳ ನಂತರ ಇದೀಗ ಜೂನಿಯರ್ ಚಿರು ಆಗಮನ ಎಲ್ಲ ದುಃಖವನ್ನು ಮರೆಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights