‘ಈ ರೀತಿಯಾಗಿ ಮನೆಗಳಲ್ಲಿ ಹೊಸ ವರ್ಷವನ್ನು ಆಚರಿಸಿ’ : ಮಹಾರಾಷ್ಟ್ರ ಸರ್ಕಾರ ಮನವಿ

ಹೊಸ ವರ್ಷದ ಆಚರಣೆಗೆ ಇನ್ನೇನು ಎರಡೇ ದಿನ ಬಾಕಿ ಇದೆ. ರೂಪಾಂತರಿ ಕೊರೊನಾ ವೈರಸ್ ಹರಡುವ ಆತಂಕದಲ್ಲಿ ವಿವಿಧ ರಾಜ್ಯಗಳಲ್ಲಿ ಹೊಸ ನಿಯಮಗಳನ್ನು ತರಲಾಗುತ್ತಿದೆ. ಈ ಮಧ್ಯೆ ಕೋವಿಡ್ -19 ಸಾಂಕ್ರಾಮಿಕದಲ್ಲಿ ಹೊಸ ವರ್ಷವನ್ನು ಆಚರಿಸಲು ಮಹಾರಾಷ್ಟ್ರ ಸರ್ಕಾರ ಸೋಮವಾರ ಮನೆಯಿಂದ ಹೊರಗೆ ಹೋಗದಂತೆ ಜನರಿಗೆ ಮನವಿ ಮಾಡಿದೆ. ‘ರಾಜ್ಯದ ದೊಡ್ಡ ನಗರಗಳಲ್ಲಿ ಜನವರಿ 5 ರವರೆಗೆ ರಾತ್ರಿ ಕರ್ಫ್ಯೂ ಮುಂದುವರಿಯುತ್ತದೆ’ ಎಂದೂ ಹೇಳಿದೆ. ಕೊರೊನಾವೈರಸ್ನ ಹೊಸ ಪ್ರಬೇಧ ಯುಕೆ ಯಲ್ಲಿ ಹೊರಹೊಮ್ಮಿದ್ದು ಇಡೀ ವಿಶ್ವದಲ್ಲೇ ಮತ್ತಮ್ಮೆ ಆತಂಕ ಸೃಷ್ಟಿಸಿದೆ.

ಹೀಗಾಗಿ ಕಾರ್ಪೊರೇಟ್ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಬೆಳಿಗ್ಗೆ 11 ರಿಂದ ಸಂಜೆ 6 ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ಪ್ರಸ್ತುತ ರಾಜ್ಯ ಸರ್ಕಾರದ ಸುತ್ತೋಲೆಯಲ್ಲಿ ಜನರು ‘ತಮ್ಮ ಸ್ವಂತ ಮನೆಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸಬೇಕು’ ಮತ್ತು ‘ಬೀಚ್, ಉದ್ಯಾನಗಳು, ರಸ್ತೆಗಳಿಗೆ ಹೋಗುವುದನ್ನು ತಪ್ಪಿಸಿ, ಕಾರ್ಪೊರೇಟ್ ವ್ಯಾಪ್ತಿಗೆ ಬರುವ ಪ್ರದೇಶಗಳು ಹೊರತುಪಡಿಸಿ ಇನ್ನುಳಿದ ಸ್ಥಳಗಳಲ್ಲಿ ಡಿಸೆಂಬರ್ 31 ರಂದು ಯಾವುದೇ ಕರ್ಫ್ಯೂ ಇರುವುದಿಲ್ಲ’ ಎಂದು ಮನವಿ ಮಾಡಿದೆ. ಇದಲ್ಲದೆ ಈ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೊಸ ವರ್ಷವನ್ನು ಆಚರಿಸಲು ನಿರ್ದಿಷ್ಟವಾಗಿ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ಮನೆಯಿಂದ ಹೊರಗೆ ಹೋಗಬಾರದು ಎಂದು ಸುತ್ತೋಲೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಪ್ರತಿ ವರ್ಷ ಜನವರಿ 1 ರಂದು ಮುಂಬೈನಲ್ಲಿ ಜನರು ಮೆರೈನ್ ಡ್ರೈವ್, ಗೇಟ್‌ವೇ ಆಫ್ ಇಂಡಿಯಾ, ಗಿರ್ಗಾಂವ್ ಮತ್ತು ಜುಹು ಮುಂತಾದ ಸ್ಥಳಗಳಿಗೆ ಗುಂಪು ಗುಂಪಾಗಿ ತಲುಪುತ್ತಾರೆ ಮತ್ತು ಸಂಭ್ರಮಿಸುತ್ತಾರೆ. ಪ್ರಸ್ತುತ ಬಂದಿರುವ ಸರ್ಕಾರದ ಆದೇಶದಲ್ಲಿ ಯಾವುದೇ ಸಾಂಸ್ಕೃತಿಕ ಅಥವಾ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಬಾರದು, ಜನರು 2021 ರ ಮೊದಲ ದಿನ ಧಾರ್ಮಿಕ ಸ್ಥಳಗಳಿಗೆ ಹೋಗುವುದರಿಂದ ಜನದಟ್ಟಣೆ ತಪ್ಪಿಸಬೇಕು. ಪಟಾಕಿ ಸಿಡಿಸುವುದನ್ನು ಸಹ ನಿಷೇಧಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights