ಬಂಗಾಳ ಚುನಾವಣೆ: ಗೆಲ್ಲುವ ಹುಮಸ್ಸಿನಲ್ಲಿದ್ದ ಮಮತಾ ಬ್ಯಾನರ್ಜಿಗೆ ಎದುರಾಗಿವೆ ನಾಲ್ಕು ಸವಾಲುಗಳು! ಡೀಟೇಲ್ಸ್‌

ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ದಿನಾಂಕವನ್ನು ಪ್ರಕಟಿಸಲು ಕೆಲವೇ ದಿನಗಳು ಬಾಕಿ ಇವೆ. ಎಲ್ಲಾ ಪಕ್ಷಗಳು ಭಾರೀ ಕಸರತ್ತು ನಡೆಸುತ್ತಿವೆ. ಈ ನಡುವೆ ಬಿಜೆಪಿ ಪಕ್ಷದ ತಂಡವು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ಬಂಗಾಳ ಚುನಾವಣೆಯ ಭದ್ರತೆಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ಮಾತ್ರ ನಿಯೋಜಿಸಬೇಕು ಎಂದು ಒತ್ತಾಯಿಸಿದೆ.

ಅಲ್ಲದೆ, ಕಳೆದ 10 ದಿನಗಳಲ್ಲಿ ರಾಜ್ಯದಲ್ಲಿ ನಾಲ್ಕು ಮಹತ್ವದ ರಾಜಕೀಯ ನಡೆಗಳು ನಡೆದಿವೆ. ಇವುಗಳ ಟಿಎಂಸಿಯ ಮತಗಳನ್ನು ವಿಭಜಿಸಬಹುದು ಎಂದು ಹೇಳಲಾಗುತ್ತಿದೆ.

ಮೊದಲನೆಯದಾಗಿ, ನೆರೆಯ ರಾಜ್ಯ ಜಾರ್ಖಂಡ್‌ನ ಪ್ರಾದೇಶಿಕ ಪಕ್ಷ, ಕಾಂಗ್ರೆಸ್ಸಿನ ಪ್ರಮುಖ ಮಿತ್ರಪಕ್ಷವೂ ಆದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷವು ಪಶ್ಚಿಮ ಬಂಗಾಳದ ಬುಡಕಟ್ಟು ಜನರಿರುವ ಪ್ರದೇಶಗಳಲ್ಲಿ, ವಿಶೇಷವಾಗಿ ಜಂಗಲ್ ಮಹಲ್ ಪ್ರದೇಶದಲ್ಲಿ ಚುನಾವಣಾ ಕಣಕ್ಕಿಳಿಯುವುದಾಗಿ ಘೋಷಿಸಿದೆ.

ಎರಡನೆಯದಾಗಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) – ಎಡಪಂಥೀಯ ಮೈತ್ರಿಕೂಟದಲ್ಲಿ ಸ್ಥಾನ ಹಂಚಿಕೆಯ ವಿಚಾರವಾಗಿ ಮೈತ್ರಿಯಿಂದ ಹೊರಗುಳಿದಿದ್ದು, ಸ್ವತಂತ್ರವಾಗಿ ಸ್ಪರ್ಧಿಸುವ ಪ್ರಯತ್ನದಲ್ಲಿದೆ. ಇದಲ್ಲದೆ, ಸಿಪಿಐ (ಎಂ-ಎಲ್) ಎಡಪಂಥೀಯರಿಗೆ ‘ಪ್ರಸ್ತಾಪ’ ನೀಡಿದ್ದು, ಸ್ಥಾನ ಹಂಚಿಕೆಯಲ್ಲಿ ಹೆಚ್ಚಿನ ಸಮಹಯ ಬೇಕಾಗಬಹುದು ಎಂದು ಹೇಳಿದೆ. ಈಗಾಗಲೇ, ಮೈತ್ರಿ ಮಾಡಿಕೊಂಡಿರುವ ಎಡರಂಗ ಮತ್ತು ಕಾಂಗ್ರೆಸ್ ತಮ್ಮ ಸ್ಥಾನ ಹಂಚಿಕೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿವೆ.

ಮೂರನೆಯದಾಗಿ, ಫರ್ಫುರಾ ಷರೀಫ್ ಧರ್ಮಗುರು ಅಬ್ಬಾಸ್ ಸಿದ್ದಿಕಿ ಅವರ ಭಾರತೀಯ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಪಕ್ಷದೊಂದಿಗೆ ಔಪಚಾರಿಕವಾಗಿ ದೃಢ ಹೆಜ್ಜೆ ಇಡಲು ರಾಜ್ಯ ಕಾಂಗ್ರೆಸ್‌ ತನ್ನ ಹೈಕಮಾಂಡ್‌ನಿಂದ ಅನುಮತಿ ಕೋರಿದೆ.

ನಾಲ್ಕನೆಯದಾಗಿ, ಆದಿಬಸಿ (ಆದಿವಾಸಿ) ಕುಡ್ಮಿ ಸಮಾಜ (ಎಕೆಎಸ್)ವು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಯಲ್ಲಿ ಸೇರ್ಪಡೆಗೊಳ್ಳಬೇಕೆಂಬ ತನ್ನ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸದಿರುವ ಬಗ್ಗೆ ತನ್ನ ಅಸಹನೆ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಿದೆ. ಇದು ಟಿಎಂಸಿ ವಿರುದ್ದ ಮತ ಚಲಾವಣೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: BJP ಭ್ರಷ್ಟರನ್ನು ಖರೀದಿಸಬಹುದು; ನಿಷ್ಟರನ್ನಲ್ಲ: ಕೇಸರಿ ಪಡೆಗೆ ಮಮತಾ ಟಾಂಗ್‌

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights