ಪೇಜಾವರ ಶ್ರೀಗಳ ಆರೋಗ್ಯ ವೃದ್ದಿಗೆ ಪಾರಾಯಣ : ಅಭಿಮಾನಿಗಳಿಂದ ಪೂಜೆ

ಉಡುಪಿಯ ಪೇಜಾವರ ಸ್ವಾಮಿಗಳ ಅನಾರೋಗ್ಯದಿಂದ ಆಸ್ಪತ್ರೆಯ ದಾಖಲಾದ ಹಿನ್ನೆಲೆಯಲ್ಲಿ ಅವರು ಬೇಗ ಗುಣಮುಖರಾಗಲಿ ಎಂದು ಅವರ ಶಿಷ್ಯ ಬಳಗ ರಾಯಚೂರಿನಲ್ಲಿ ವಿಶೇಷ ಪೂಜೆ ಮಾಡಿಸಿದರು.

ರಾಯಚೂರು ನಗರದ ಕೋಟೆ ಪ್ರದೇಶದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಪ್ರ ಯುವಕ ಸಂಘ ಹಾಗು ರಾಘವೇಂದ್ರ ವಿದ್ಯಾರ್ಥಿ ವಸತಿ ನಿಲಯದ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು.

 

ಹಿಂದು‌ಧರ್ಮದ ಉನ್ನತಿಗೆ ಶ್ರಮಿಸಿ ಹಿಂದು ಧರ್ಮದ ಪ್ರಮುಖರಾಗಿರುವ ಶ್ರೀವಿಶ್ವೇಶತೀರ್ಥ ಸ್ವಾಮಿಗಳು ಬೇಗ ಗುಣಮುಖರಾಗಲಿ ಇನ್ನಷ್ಟು ದಿನ ಭಕ್ತರಿಗೆ ಶಿಷ್ಯರಿಗೆ ಮಾರ್ಗದರ್ಶನ ನೀಡಲಿ ಎಂದು ಪ್ರಾರ್ಥಿಸಿದರು.

ನೂರಾರು ಜನರು ವಿಷ್ಣು ಸಹಸ್ರ ಪರಾಯಣ, ಮನ್ನಿಸೋತ್ರು, ಸುಂದರಕಾಂಡ, ಗುರುಸ್ತ್ರೋತ್ರು ಪಾರಾಯಣ ಮಾಡಿದರು. ಪೂಜೆ ಸ್ವಾಮಿಗಳ ಆರೋಗ್ಯ ವೃದ್ದಿಯಾಗಲಿ ಎಂದು ಶ್ರೀರಾಘವೇಂದ್ರ ಸ್ವಾಮಿಗಳು ಹಾಗು ಟೀಕಾರಾಯರ ಸನ್ನಿದಿಯಲ್ಲಿ ಪ್ರಾರ್ಥಿಸಿದರು.

ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಗೆ ಅನಾರೋಗ್ಯ ಹಿನ್ನೆಲೆ ಮೈಸೂರಿನಲ್ಲೂ ಕೃಷ್ಣಧಾಮದಲ್ಲಿ ವಿಶೇಷ ಪೂಜೆ ಮಾಡಲಾಗಿದೆ. ಶ್ರೀ ಗಳ ಅರೋಗ್ಯ ಚೇತರಿಕೆಗಾಗಿ ಭಕ್ತಾಧಿಗಳಿಂದ ವಿಶೇಷ ಪ್ರಾರ್ಥಿಸಿದ್ದಾರೆ. ಕೃಷ್ಣಧಾಮದ ಗರ್ಭಗುಡಿಯ ಮುಂದೆ ಶ್ರೀಗಳ ಭಾವಚಿತ್ರ ಇಟ್ಟು ಶ್ರೀ ಕೃಷ್ಣನ ಶ್ಲೋಕ ಪಠಸಿ ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights