“ಮಹಾನಾಯಕ” ಧಾರವಾಹಿ ಪ್ರಸಾರ ನಿಲ್ಲಿಸುವಂತೆ ಬೆದರಿಕೆ: ರಾಘವೇಂದ್ರ ಹುಣಸೂರು

ವಿಶೇಷ ಮತ್ತು ವಿಭಿನ್ನ ರೀತಿಯ ಪ್ರಯೋಗಗಳ ಮೂಲಕ ಎಲ್ಲಾ ರೀತಿಯ ಪ್ರೇಕ್ಷಕ ವರ್ಗವನ್ನೂ ತನ್ನತ್ತ ಸೆಳೆದಿಟ್ಟರುವ ಜೀ ಕನ್ನಡ ವಾಹಿನಿಯು ಮಹಾನಾಯಕ ಧಾರಾವಾಹಿಯ ಮೂಲಕ ಕನ್ನಡಿಗರರ ಮನೆ-ಮನಗಳಿಗೆ ಅಂಬೇಡ್ಕರರ ಜೀವನವನ್ನು ಕೊಂಡೊಯ್ಯವ ಪ್ರಯತ್ನ ಮಾಡುತ್ತಿದೆ.

ಆದರೆ, ಜೀ ಟಿವಿ ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿರುವ ಮಹಾನಾಯಕ ಧಾರವಾಹಿಯ ಪ್ರಸಾರವನ್ನು ಸ್ಥಗಿತಗೊಳಿಸಬೇಕು, ಧಾರವಾಹಿಯನ್ನು ಪ್ರಸಾರ ಮಾಡಬಾರದು ಎಂದು ಬೆದರಿಕೆಗಳು ಬರುತ್ತಿವೆ ಎಂದು ಜೀ ವಾಹಿನಯ ಮುಖ್ಯ ನಿರ್ವಾಹಕರಾಗಿರುವ ರಾಘವೇಂದ್ರ ಹುಣಸೂರು ಅವರು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಮಹಾನಾಯಕ ಧಾರಾವಾಹಿಯ ಪ್ರಸಾರವನ್ನು ನಿಲ್ಲಿಸುವಂತೆ ಮಧ್ಯರಾತ್ರಿಯಲ್ಲಿ ತುಂಬಾ ಕರೆಗಳು ಮತ್ತು ಸಂದೇಶಗಳು ಬರುತ್ತಿವೆ. ಇದು ಬೆದರಿಕೆಯಂತೆ ಕಾಣುತ್ತಿದೆ. ಆದರೆ ವೈಯಕ್ತಿಕವಾಗಿ ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮಹಾನಾಯಕ ಮುಂದುವರೆಯುತ್ತದೆ. ಜೊತೆಗೆ ಇದು ನಮ್ಮ ಹೆಮ್ಮೆಯಾಗಿದ್ದು, ಇದರಲ್ಲಿ ವೈಯಕ್ತಿಕ ಪ್ರೀತಿಯೂ ಸೇರಿದೆ. ಇದನ್ನು ಒಂದು ಸಮಸ್ಯೆ ಎಂದು ನೀವು ಪರಿಗಣಿಸಿದರೆ, ವಾಸ್ತವದಲ್ಲಿ ಸಮಾಜಕ್ಕೆ ನೀವೇ ಒಂದು ಸಮಸ್ಯೆ! ಜೈ ಭೀಮ್” ಎಂದು ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಅಂಬೇಡ್ಕರರ ಜೀವನಾಧಾರಿತ ಧಾರಾವಾಹಿ ‘ಮಹಾನಾಯಕ’ ರಾಜ್ಯಾದ್ಯಂತ ಜನಪ್ರಿಯತೆ ಪಡೆದುಕೊಂಡಿದ್ದು, ಜನರು ಹಲವಾರು ಹಳ್ಳಿಗಳಲ್ಲಿ ಧಾರಾವಾಹಿಯ ಬ್ಯಾನರ್ ಹಾಕಿ, ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.


Read Also: ಯುಪಿಯಲ್ಲಿ 3ರ ಬಾಲಕಿ ಮೇಲೆ ಅತ್ಯಾಚಾರ, ಕೊಲೆ : 20 ದಿನಗಳಲ್ಲಿ ಜಿಲ್ಲೆಯಲ್ಲಿ ಮೂರನೇ ಘಟನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights