2ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾಕ್ಕೆ ಭರ್ಜರಿ ಜಯ; ಚಾಂಪಿಯನ್‌ಶಿಪ್‌ ಪಟ್ಟಿಯಲ್ಲಿ 2ನೇ ಸ್ಥಾನ!

ಭಾರತ ಮತ್ತು ಇಂಗ್ಲೆಂಡ್‌ ನಡುವಿನ 2ನೇ ಕ್ರಿಕೆಟ್‌ ಟೆಸ್ಟ್‌ ಮ್ಯಾಚ್‌ನಲ್ಲಿ ಭಾರತ ತಂಡ 317 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದು, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTA) ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ.

ಇಂದು (ಮಂಗಳವಾರ) ಅಂತ್ಯಗೊಂಡ 2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ತಂಡಕ್ಕೆ 482 ರನ್‌ಗಳ ಗುರಿ ನೀಡಿದ್ದ ಭಾರತ ತಂಡವು ಇಂಗ್ಲೆಂಡ್‌ ತಂಡವನ್ನು 164 ರನ್‌ಗಳಿಗೇ ಆಲ್‌ಔಟ್‌ ಮಾಡಿತು. ಇದರಿಂದಾಗಿ ಟೆಸ್ಟ್‌ ಸರಣಿಯಲ್ಲಿ 1-1 ಪಾಯಿಂಟ್‌ಗಳಿದ್ದು, ಎರಡು ತಂಡಗಳು ಸಮಬಲದಲ್ಲಿವೆ.

2ನೇ ಟೆಸ್ಟ್‌ನ ಗೆಲುವು ಸಾಧಿಸಿರುವ ಭಾರತ ತಂಡ 69.7 ಶೇಕಡಾ ಅಂಕಗಳನ್ನು ಗಳಿಸಿದ್ದು 460 ಸರಾಸರಿ ಅಂಕಗಳನ್ನು ಗಳಿಸಿದೆ. ಅಲ್ಲದೆ, ಐಸಿಸಿ ಬಿಡುಗಡೆಗೊಳಿಸಿರುವ WTAನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದು, ಫೈನಲ್‌ಗೆ ಪ್ರವೇಶ ಪಡೆಯುವ ಹುಮ್ಮಸ್ಸಿನಲ್ಲಿ ಮುನ್ನುಗುತ್ತಿದೆ. ಈಗಗಲೇ, ನ್ಯೂಜಿಲೆಂಡ್‌ ಫೈನಲ್‍ಗೆ ಅರ್ಹತೆ ಪಡೆದುಕೊಂಡಿದ್ದು, ಮೊದಲ ಸ್ಥಾನದಲ್ಲಿದೆ. ನ್ಯೂಝಿಲ್ಯಾಂಡ್ 70 ಪಿಸಿಟಿ ಹೊಂದಿದ್ದು, 420 ಸರಾಸರಿ ಅಂಕ ಪಡೆದುಕೊಂಡಿದೆ.

ಭಾರತವು ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 227 ರನ್ ಗಳಿಂದ ಸೋತಿತ್ತು. 2ನೇ ಟೆಸ್ಟ್‌ನಲ್ಲಿ ಭರ್ಜರಿ ಜಯಗಳಿಸಿದೆ. ಮುಂದಿನ ಟೆಸ್ಟ್‌ ಮ್ಯಾಚ್‌ನಲ್ಲಿ ಜಯ ಸಾಧಿಸಿದರೆ ಅಥವಾ ಡ್ರಾ ಸಾಧಿಸಿದರೆ ಡಬ್ಲ್ಯುಟಿಎ ಫೈನಲ್ ಗೆ ತಲುಪುವ ಸಾಧ್ಯತೆ ಇದೆ.

ಈ ಹಿಂದೆ ಡಬ್ಲ್ಯುಟಿಎ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದು ಟೀಂ ಇಂಡಿಯಾ, ಇಂದಿನ ಗೆಲುವಿನೊಂದಿಗೆ 2ನೇ ಸ್ಥಾನಕ್ಕೆ ಏರಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೋರ್ನಿಯಲ್ಲಿ ಇದೂವರೆಗೂ ಟೀಂ ಇಂಡಿಯಾ 15 ಪಂದ್ಯಗಳನ್ನು ಆಡಿದ್ದು, 10 ಪಂದ್ಯದಲ್ಲಿ ಜಯ, 4ರಲ್ಲಿ ಸೋಲು ಹಾಗೂ ಒಂದರಲ್ಲಿ ಡ್ರಾ ಸಾಧಿಸಿದೆ.

ಡಬ್ಲ್ಯುಟಿಎ ರ್ಯಾಂಕಿಂಗ್ ನಲ್ಲಿ ಆಸ್ಟ್ರೇಲಿಯ ಮೂರನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 4ನೇ ಸ್ಥಾನದಲ್ಲಿದೆ. ಭಾರತ-ಇಂಗ್ಲೆಂಡ್ ನಡುವೆ 3ನೇ ಟೆಸ್ಟ್ ಪಂದ್ಯವು ಫೆ.24ರಂದು ಅಹ್ಮದಾಬಾದ್ ನಲ್ಲಿ ನಡೆಯಲಿದೆ.

ಇದನ್ನೂ ಓದಿ: ಕೊಸೊವೊ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಎಡಪಕ್ಷ; ಅಲ್ಬಿನ್ ಕುರ್ತಿಗೆ ಪ್ರಧಾನಿ ಪಟ್ಟ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights