ನನ್ನನ್ನು ಕೇರಳ ಸಿಎಂ ಅಭ್ಯರ್ಥಿ ಮಾಡಿದರೆ, BJP ಅಧಿಕಾರಕ್ಕೆ ಬರುತ್ತದೆ: ಶ್ರೀಧರನ್

ನನ್ನನ್ನು ಕೇರಳದ ಸಿಎಂ ಅಭ್ಯರ್ಥಿಯಾಗಿ ಘೋಷಿಸಿ, ಚುನಾವಣೆ ಎದುರಿಸಿದರರೆ, ಬಿಜೆಒಇಗೆ ಅಧಿಕಾರದ ಗದ್ದುಗೆ ಸಿಗುತ್ತದೆ ಎಂದು ಇ.ಶ್ರೀಧರನ್ ಹೇಳಿದ್ದಾರೆ.

ಬಿಜೆಪಿ ಸೇರಿ, ತಮ್ಮ ರಾಜಕೀಯ ಜೀವನ ಆರಂಭಿಸಿರುವ ಮೆಟ್ರೋ ಮ್ಯಾನ್ ಎಂದು ಹೆಸರು ಪಡೆದಿದ್ದ ಇ.ಶ್ರೀಧರನ್ ಕೇಳರದ ವಿಧಾನ ಸಭಾ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಬಯಸಿದ್ದಾರೆ ಎಂದು ವರದಿಯಾಗಿದೆ.

ಬಿಜೆಪಿ ನನನ್ನು ಮುಂದಿನ ಚುನಾವಣೆಗೆ ಸಿಎಂ ಅಭ್ಯರ್ಥಿಯಾಗಿ ಘೋಷಿಸಬೇಕು.‌ಇದರಿಂದ ಬಿಜೆಪಿಗೆ ಲಾಭವಾಗುತ್ತದೆ. ಎಲ್‌ಡಿಎಫ್, ಯುಡಿಎಫ್ ವಿರುದ್ಧ ಅಸಮಾಧಾನ ಹೊಂದಿರುವವರು ಬಿಜೆಪಿಗೆ ಮತ ನೀಡುತ್ತಾರೆ. ನನಗೆ ರಾಜ್ಯಪಾಲರಾಗುವ ಆಸಕ್ತಿಯಿಲ್ಲ. ನನಗೆ ಆ ಆಫರ್ ಬೇಡ ಎಂದು ಅವರು ಹೇಳಿದ್ದಾರೆ.

ನಾನು ವಿದ್ಯಾರ್ಥಿ ಆಗಿದ್ದಾಗಿನಿಂದಲೂ ಬಿಜೆಪಿಯನ್ನು ಬೆಂಬಲಿಸುತ್ತಿದ್ದೆ. ಆರ್‌ಎಸ್‌ಎಸ್ ಸಭೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದೆ ಎಂದು ಅವರು ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights