ಬಿಹಾರದಲ್ಲಿ JDU ನೊಂದಿಗೆ RLSP ಪಕ್ಷದ ವಿಲೀನಕ್ಕೆ ವಿರೋಧ; 35 ಮಂದಿ RJDಗೆ ಸೇರ್ಪಡೆ

ಆರ್‌ಎಲ್‌ಎಸ್‌ಪಿ ಪಕ್ಷವು ಜೆಡಿಯು ಜೊತೆಗಿನ ವಿಲೀನವಾಗುತ್ತದೆ ಎಂಬ ಚರ್ಚೆಯ ಮಧ್ಯೆ, ಆರ್‌ಎಲ್‌ಎಸ್‌ಪಿಯ ರಾಜ್ಯ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸುಮಾರು 35 ಹಿರಿಯ ನಾಯಕರು ಬಿಹಾರದ ಪ್ರಮುಖ ವಿರೋಧ ಪಕ್ಷ ಆರ್‌ಜೆಡಿಗೆ ಸೇರ್ಪಡೆಯಾಗಿದ್ದಾರೆ.

ಆರ್‌ಎಲ್‌ಎಸ್‌ಪಿಯ ಪ್ರಮುಖ ಮುಖಂಡರಾದ ರಾಜ್ಯ ಅಧ್ಯಕ್ಷ ವೀರೇಂದ್ರ ಕುಶ್ವಾಹ, ಪ್ರಧಾನ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಶ್ವಾಹ, ಮಹಿಳಾ ಘಟಕದ ರಾಜ್ಯ ಅಧ್ಯಕ್ಷ ಮಧು ಮಂಜಾರಿ ಮೆಹ್ತಾ ಮತ್ತು ಮಾಜಿ ರಾಜ್ಯ ಅಧ್ಯಕ್ಷ ವಿಜಯ್ ಮಹತೋ ಸೇರಿದಂತೆ 35 ಮಂದಿ ತೇಜಶ್ವಿ ಯಾದವ್ ಅವರ ಸಮ್ಮುಖದಲ್ಲಿ ಆರ್‌ಜೆಡಿಗೆ ಸೇರ್ಪಡೆಯಾಗಿದ್ದಾರೆ.

ಆರ್‌ಎಲ್‌ಎಸ್‌ಪಿಯನ್ನು ಜೆಡಿಯುನೊಂದಿಗೆ ವಿಲೀನಗೊಳಿಸುವ ಉಪೇಂದ್ರ ಕುಶ್ವಾಹ ಅವರ ನಿರ್ಧಾರವನ್ನು ವಿರೋಧಿಸಿ ಈ 35 ಮಂದಿ ವಾಗ್ದಾಳಿ ನಡೆಸಿದ್ದಾರೆ. “ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಉಪೇಂದ್ರ ಕುಶ್ವಾಹಾ ಅವರನ್ನು ಪರೋಕ್ಷವಾಗಿ ‘ನೀಚ’ ಎಂದು ಕರೆದಿದ್ದ ನಿತೀಶ್ ಕುಮಾರ್ ಅವರೊಂದಿಗೆ ಕುಶ್ವಾಹ ಜಿ ಹೋಗಲು ನಿರ್ಧರಿಸಿದ್ದಾರೆ. ನಿತೀಶ್‌ ದೇಶದ ದುರ್ಬಲ ಮುಖ್ಯಮಂತ್ರಿ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

“ಆರ್‌ಎಲ್‌ಎಸ್‌ಪಿಯಲ್ಲಿ ಬದುಕುಳಿಯಲು ಅಥವಾ ಮುಳುಗಲು ಉಪೇಂದ್ರ ಕುಶ್ವಾಹ ಮಾತ್ರ ಉಳಿದಿದ್ದಾರೆ” ಎಂದು ಅವರು ಗೇಲಿ ಮಾಡಿದ್ದಾರೆ.

ಬಿಹಾರದಲ್ಲಿ ಬಿಜೆಪಿಯ “ಬೈಸಾಖಿ” (ಬೆಂಬಲ)ದ ಮೇಲೆ ನಿತೀಶ್‌ ಕುಮಾರ್ ಬದುಕುಳಿದಿದ್ದಾರೆ. “ಬಿಹಾರದಲ್ಲಿ, ಡಬಲ್ ಎಂಜಿನ್ ಅಭಿವೃದ್ಧಿ ಸ್ಥಗಿತಗೊಂಡಿದೆ” ಎಂದು ತೇಜಸ್ವಿ ಯಾದವ್ ವ್ಯಂಗ್ಯವಾಡಿದ್ದಾರೆ.

ಇದಕ್ಕೂ ಮೊದಲು ಮಾರ್ಚ್ 6 ರಂದು 41 ಆರ್‌ಎಲ್‌ಎಸ್‌ಪಿ ನಾಯಕರು ಜೆಡಿಯು ಸೇರಿದ್ದರು. ಏತನ್ಮಧ್ಯೆ, 35 ನಾಯಕರ ಮತ್ತೆ ಪಕ್ಷವನ್ನು ತೊರೆದಿದ್ದು, ಆರ್‌ಎಲ್‌ಎಸ್‌ಪಿ ದುರ್ಬಲಗೊಂಡಿದೆ ಎಂದು ಚುನಾವಣಾ ವಿಶ್ಲೇಷಕರು ಅರುಣ್ ಕುಮಾರ್ ಪಾಂಡೆ ಹೇಳಿದ್ದಾರೆ.

ಏತನ್ಮಧ್ಯೆ, ಮಾರ್ಚ್ 14 ರ ನಂತರ ಆರ್‌ಎಲ್‌ಎಸ್‌ಪಿ ಜೆಡಿಯು ಜೊತೆ ವಿಲೀನಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬಂಗಾಳ, ಅಸ್ಸಾಂ ಫಲಿತಾಂಶವು ಬಿಹಾರದ BJP-JDU ಸರ್ಕಾರದ ಉಳಿವನ್ನು ನಿರ್ಧರಿಸುತ್ತವೆ: ಮೂಲಗಳು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights