ಸಾಹುಕಾರ್ ಕೇಸ್ : ತಲೆಮರಿಸಿಕೊಂಡ ಇಬ್ಬರು ‘ಸಿಡಿ’ಗೇಡಿಗಳಿಗಾಗಿ ತಲಾಶ್…

ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಸಂಬಂಧಿಸಿದಂತೆ ಈಗಾಗಲೇ ಐದು ಜನರನ್ನು ಎಸ್ಐಟಿ ವಶಕ್ಕೆ ಪಡೆದುಕೊಂಡಿದೆ. ಇನ್ನಿಬ್ಬರು ಮಾಸ್ಟರ್ ಮೈಂಡ್ ಗಳ ಹುಡುಕಾಟದಲ್ಲಿ ಎಸ್ಐಟಿ ಮುಂದಾಗಿದೆ.

ಆದರೆ ಈ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಕಂಪ್ಲೇಂಟ್ ಕೊಟ್ಟಿಲ್ಲ. ರಮೇಶ್ ದೂರು ಕೊಟ್ಟರೆ ಯುವತಿಯನ್ನು ಬಂಧಿಸಿ ವಿಚಾರಣೆ ಮಾಡಬೇಕಾಗುತ್ತದೆ. ಒಂದು ವೇಳೆ ಯುವತಿ ತನಗೆ ಮೋಸ ಆಗಿದೆ ಎಂದು ಹೇಳಿದ್ದೇ ಆದರೆ ಉಲ್ಟಾ ರಮೇಶ್ ಮೇಲೆ ಕೇಸ್ ದಾಖಲಾಗುತ್ತದೆ. ಹೀಗಾಗಿ ತುಂಬಾ ಮುಂದಾಲೋಚನೆ ಮಾಡಿಕೊಂಡು ಎಸ್ಐಟಿಗೆ ಕೇಸ್ ನೀಡಿಲಾಗಿದೆ ಎನ್ನಲಾಗುತ್ತಿದೆ. ಎಸ್ಐಟಿ ಕೇವಲ ವಿಚಾರಣೆಯ ವರದಿ ಮಾತ್ರ ನೀಡಲಿದೆ. ಇಲ್ಲಿ ಯಾರನ್ನೂ ಬಂಧಿಸುವ ಹಾಗಿಲ್ಲ. ಕೇವಲ ವಿಚಾರಣೆ ಮಾತ್ರ ಮಾಡಬೇಕಾಗುತ್ತದೆ. ಹೀಗಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ಇರುವ ಯುವಕ ಯುವತಿಯನ್ನು ಕರೆ ತರಲಾಗುತ್ತಿದೆ. ಇನ್ನಿಬ್ಬರು ತಲೆ ಮರಿಸಿಕೊಂಡಿದ್ದಾರೆ.

ಈ ಇಬ್ಬರು ಮಾಸ್ಟರ್ ಮೈಂಡ್ ಗಳನ್ನು ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ ಆಂಧ್ರದಲ್ಲಿ ತಲಾಶ್ ಮಾಡಲಾಗುತ್ತಿದೆ. ತಮಿಳುನಾಡು, ಆಂಧ್ರಪ್ರದೇಶನಲ್ಲಿ ಶೋಧಕಾರ್ಯಕ್ಕೆ ತಂಡಗಳನ್ನು ಕಳುಹಿಸಲಾಗಿದೆ. ಮೊಬೈಲ್ ನೆಟ್ ವರ್ಕ್ ಮೂಲಕ ಅವರನ್ನು ಹುಡುಕಾಡಲಾಗುತ್ತಿದೆ.

ಯುವತಿ ಬಾಯ್ ಫ್ರೆಂಡ್ ನನ್ನು ಕಂಡುಹಿಡಿಯಲಾಗಿದೆ. ಆತನಿಗೆ ಡ್ರಿಲ್ ಶುರುವಾಗಿದೆ. ಈತನಿಂದಲೇ ಬಹುತೇಕ ಮಾಹಿತಿ ಲಭ್ಯವಾಗುತ್ತಿದೆ ಎನ್ನಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights