ಬಂಗಾಳ ಚುನಾವಣೆ: ಮಮತಾ ಬ್ಯಾನರ್ಜಿ ಅವರ ಆಸ್ತಿ ಶೇ.45.08ರಷ್ಟು ಕುಸಿತ!

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಸ್ತಿ ಮೌಲ್ಯವು 2016 ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈಗ 45.08 ರಷ್ಟು ಕಡಿಮೆಯಾಗಿದೆ.

ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದು, ಅಭ್ಯರ್ಥಿಗಳ ಅಪರಾಧ ಹಿನ್ನೆಲೆ, ಶಿಕ್ಷಣ, ಆರ್ಥಿಕ ಸ್ಥಿತಿಗತಿ ಮತ್ತು ಇತರ ವಿವರಣೆಗಳನ್ನು ಪರಿಶೀಲಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬ್ಯಾನರ್ಜಿ ಅವರು ಚುನಾವಣಾ ಆಯೋಗಕ್ಕೆ ತಮ್ಮ ನಾಮಪತ್ರ ಸಲ್ಲಿಸಿದ್ದು, ಅವರ ಒಟ್ಟು ಆಸ್ತಿಯ ಮೌಲ್ಯ 16,72,352 ರೂ ಎಂದು ಘೋಷಿಸಿದ್ದಾರೆ.

2016 ರ ಚುನಾವಣೆಯಲ್ಲಿ ಅವರು ನಗರದ ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆ ವೇಳೆ ಅವರ ಒಟ್ಟು ಆಸ್ತಿ ಮೌಲ್ಯ 30,45,013 ರೂ. ಇತ್ತು ಎಂದು ಘೋಷಿಸಿದ್ದರು.

Read Also: ಮಹಾರಾಷ್ಟ್ರ ಮೈತ್ರಿ ಸರ್ಕಾರ ಬಿಕ್ಕಟ್ಟು: ಸೋನಿಯಾಗಾಂಧಿ ಅವರನ್ನು ಭೇಟಿಯಾದ NCP ನಾಯಕಿ!

ಮಮತಾ ಬ್ಯಾನರ್ಜಿ ಅಲ್ಲದೆ, ಅವರ ಪಕ್ಷದ ಇತರ ಅಭ್ಯರ್ಥಿಗಳಾದ ಮಮತಾ ಭೂನಿಯಾ ಮತ್ತು ಸುಕುಮಾರ್ ದೇ ಅವರ ಆಸ್ತಿಗಳು ಕ್ರಮವಾಗಿ ಶೇಕಡಾ 37.53 ಮತ್ತು 36.18% ರಷ್ಟು ಕಡಿಮೆಯಾಗಿದೆ.

ಸಿಪಿಐ (ಎಂ) ನ ಪನ್ಸ್‌ಕುರ ಪುರ್ಬಾ ಅಭ್ಯರ್ಥಿ ಎಸ್‌ಕೆ ಇಬ್ರಾಹಿಂ ಅಲಿ ಅವರ ಆಸ್ತಿಯಲ್ಲಿ ಶೇಕಡಾ 2141.48 ರಷ್ಟು ಏರಿಕೆ ಕಂಡಿದ್ದು, 2016-2021ರ ನಡುವೆ ಆಸ್ತಿ ಘೋಷಿಸಿರುವ ಅಭ್ಯರ್ಥಿಗಳ ಪೈಕಿ ಇವರ ಆಸ್ತಿ ಮೌಲ್ಯ ಅತಿ ಹೆಚ್ಚು ಏರಿಕೆ ಖಂಡಿದೆ ಎಂದು ಅದು ಹೇಳಿದೆ.

2016 ರ ಚುನಾವಣೆಯ ಸಮಯದಲ್ಲಿ ಅಲಿ ಅವರ ಒಟ್ಟು ಆಸ್ತಿ 49,730 ರೂ ಇತ್ತು. ಈ ವರ್ಷ ಅವರ ಒಟ್ಟು ಮೌಲ್ಯ 10,64,956 ರೂಗಳಿಗೆ ಏರಿಕೆಯಾಗಿದೆ.

ಪಶ್ಚಿಮ ಬಂಗಾಳದ ಬಂಕುರಾ (ಭಾಗ II), ಪಾಸ್ಚಿಮ್ ಮದಿನಿಪುರ (ಭಾಗ II), ಪುರ್ಬಾ ಮೇದಿನಿಪುರ (ಭಾಗ II), ದಕ್ಷಿಣ 24 ಪರಗಣ (ಭಾಗ 1) ರಲ್ಲಿ ಎರಡನೇ ಹಂತದ ಮತದಾನವು ಏಪ್ರಿಲ್ 1 ರಂದು  ನಡೆಯಲಿದೆ.

Read Also: ಚುನಾವಣಾ ಸಮೀಕ್ಷೆ: ಕೇರಳದಲ್ಲಿ ಮತ್ತೆ ಪಿಣರಾಯಿ ವಿಜಯನ್‌ಗೆ ಅಧಿಕಾರ; NDAಗೆ 2 ಸ್ಥಾನ ಮಾತ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights