ಚುನಾವಣಾ ಸಮೀಕ್ಷೆ: ಕೇರಳದಲ್ಲಿ ಮತ್ತೆ ಪಿಣರಾಯಿ ವಿಜಯನ್‌ಗೆ ಅಧಿಕಾರ; NDAಗೆ 2 ಸ್ಥಾನ ಮಾತ್ರ!

ಶನಿವಾರದಿಂದ ಪಂಚರಾಜ್ಯಗಳ ಚುನಾವಣೆ ಆರಂಭವಾಗಲಿದೆ. ಪಶ್ಚಿಮ ಬಂಗಾಳದಲ್ಲಿ ಶನಿವಾರ ಮೊದಲ ಹಂತದ ಚುನಾವಣೆ ನಡೆಯಲಿದೆ. ಅಂತೆಯೇ ಕೇರಳದಲ್ಲಿ ಏಪ್ರಿಲ್‌ 06ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಮಧ್ಯೆ ಹಲವಾರು ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬೀಳುತ್ತಿದ್ದು, ಹಲವಾರು ಸಮೀಕ್ಷೆಗಳು ಕೇರಳದಲ್ಲಿ ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್‌ ಮೈತ್ರಿಕೂಟವು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ.

ಇತ್ತೀಚೆಗೆ, ಟೈಮ್ಸ್ ನೌ ಮತ್ತು ಮಾತೃಭೂಮಿ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಿ-ವೋಟರ್‌ ಸಮೀಕ್ಷೆಯಲ್ಲಿ ಮತ್ತೆ ಎಲ್‌ಡಿಎಫ್ ಅಧಿಕಾರದ ಗದ್ದುಗೆಯನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲಿದೆ ಎಂದು ಹೇಳಲಾಗಿದೆ.

ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (LDF) ಮತ್ತು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ನಡುವಿನ ಸ್ಪರ್ಧೆ ಹೆಚ್ಚು ತೀವ್ರವಾಗಿದ್ದು, ಎನ್‌ಡಿಎ ನೀರಸ ಪ್ರದರ್ಶನ ನೀಡಲಿದೆ ಎಂದು ಸಮೀಕ್ಷೆ ಹೇಳಿದೆ. ಕೇರಳದ ಒಟ್ಟು 140 ಸದಸ್ಯರ ವಿಧಾನಸಭೆಯಲ್ಲಿ 77 ಸ್ಥಾನಗಳೊಂದಿಗೆ ಎಲ್‌ಡಿಎಫ್ ಕೇರಳವನ್ನು ಗೆಲ್ಲುತ್ತದೆ ಎಂದು ಟೈಮ್ಸ್ ನೌ ಸಿ-ವೋಟರ್ ಸಮೀಕ್ಷೆ ತಿಳಿಸಿದೆ.

ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮಲಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ 62 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಈ ಹಿಂದಿನ ಚುನಾವಣೆಗಳನ್ನು ಗಮನಿಸಿದರೇ, ಈ ಬಾರಿ ಎಲ್‌ಡಿಎಫ್ ಹಲವು ಸ್ಥಾನಗಳನ್ನು ಕಳೆದುಕೊಳ್ಳುತ್ತದೆ ಎನ್ನಲಾಗಿದೆ. ಈ ಮೂಲಕ ಯುಡಿಎಫ್ ಮತ್ತು ಎಲ್‌ಡಿಎಫ್ ನಡುವೆ ತೀವ್ರ ಹಣಾಹಣಿ ಉಂಟಾಗುತ್ತದೆ. ಬಿಜೆಪಿ ಒಂದು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. 2016 ರ ಚುಣಾವಣೆಯಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ 91 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಇದನ್ನೂ ಓದಿ: ಕೇರಳ ಚುನಾವಣೆ: LDF ವಿರುದ್ದ ಕಾಂಗ್ರೆಸ್‌-BJP ಒಳಮೈತ್ರಿ? CPI(M) ಗಂಭೀರ ಆರೋಪದ ಹಿಂದಿವೆ ಹಲವು ಪ್ರಶ್ನೆಗಳು!

ಮಾತೃಭೂಮಿ ನಡೆಸಿರುವ ಸಮೀಕ್ಷೆಯಲ್ಲಿಯೂ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್‌ಗೆ ಕೇರಳದಲ್ಲಿ ವಿಜಯಮಾಲೆ ದೊರೆಯಲಿದೆ ಎಂದಿದೆ. ಮಾತೃಭೂಮಿ ಸಿ-ಮತದಾರರ ಸಮೀಕ್ಷೆಯ ಪ್ರಕಾರ, ಕೇರಳ ವಿಧಾನಸಭಾ ಚುನಾವಣೆ 2021 ರಲ್ಲಿ ಎಲ್‌ಡಿಎಫ್ 75 ರಿಂದ 83 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಯ ಪೂರ್ವ ಫಲಿತಾಂಶಗಳು ತಿಳಿಸಿವೆ.

ಕಾಂಗ್ರೆಸ್ ನೇತೃತ್ವದ ಯುಡಿಎಫ್ 56 ರಿಂದ 64 ಸ್ಥಾನಗಳನ್ನು ಗೆಲ್ಲಲಿದ್ದು, ಎನ್‌ಡಿಎ 0 ರಿಂದ 2 ಸ್ಥಾನಗಳನ್ನು ಪಡೆಯಲಿದೆ ಎಂದಿದೆ. ಎಲ್‌ಡಿಎಫ್ ಶೇ 40.9 ರಷ್ಟು ಮತಗಳನ್ನು ಗಳಿಸಿದರೆ, ಯುಡಿಎಫ್ ಶೇ 37.9 ಮತ್ತು ಎನ್‌ಡಿಎ 16.6 ಮತಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಮತದಾರರು ರಾಜ್ಯದಲ್ಲಿ ತಾವು ಎದುರಿಸಿದ ಅತಿದೊಡ್ಡ ಸಮಸ್ಯೆಗಳಲ್ಲಿ ಶೇಕಡಾ 41.8 ರಷ್ಟು ನಿರುದ್ಯೋಗ, ಶೇಕಡಾ 10.4 ರಷ್ಟು ಭ್ರಷ್ಟಾಚಾರ ಮತ್ತು ಶೇಕಡಾ 4.8 ಜನರು ಕಾನೂನು ಮತ್ತು ಸುವ್ಯವಸ್ಥೆ ಎಂದು ಹೇಳಿದ್ದಾರೆ.

ಕೇರಳದ ಚಿನ್ನದ ಕಳ್ಳಸಾಗಣೆ ಪ್ರಕರಣ ತಮ್ಮ ಮೇಲೆ ಮತದಾನದ ಮೇಲೆ ಪ್ರಭಾವ ಬೀರಲಿದೆ ಎಂದು ಶೇಕಡಾ 25.2 ರಷ್ಟು ಜನರು ಹೇಳಿದರೆ, ಶೇಕಡಾ 20.2 ಮಂದಿ ಶಬರಿಮಲೆ ವಿಷಯದ ಕುರಿತು ಮಾತನಾಡಿದ್ದಾರೆ ಎಂದು ಮಾತೃಭೂಮಿ ಸಮೀಕ್ಷೆ ಹೇಳಿದೆ.

ಇದನ್ನೂ ಓದಿ: ಕೇರಳದ 90% ಜನರು ವಿದ್ಯಾವಂತರು-ಅವರು ಯೋಚಿಸುತ್ತಾರೆ; ಹಾಗಾಗಿ ಪಕ್ಷ ಬೆಳೆದಿಲ್ಲ: BJP ಏಕೈಕ ಶಾಸಕ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights