ಪರೀಕ್ಷಾ ಪೆ ಚರ್ಚಾ ನಡೆಸುವ ಮೋದಿ, ಖರ್ಚಾ ಪೆ ಚರ್ಚಾ ನಡೆಸಬೇಕು: ರಾಹುಲ್‌ಗಾಂಧಿ

ಭಾರತದಾದ್ಯಂತ ಇಂಧನ ಬೆಲೆ ಏರಿಕೆ ಕುರಿತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಪರೀಕ್ಷೆಗಳ ಬಗ್ಗೆ ಚರ್ಚೆ ನಡೆಸುತ್ತಿರುವ ಪ್ರಧಾನಿ ಮೋದಿಯವರು ‘ಹೆಚ್ಚುತ್ತಿರುವ ಬೆಲೆಗಳ ಬಗ್ಗೆಯೂ ಚರ್ಚೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ಯಾವೊಬ್ಬರ ವಾಹನಗಳಿಗೆ ಇಂಧನ ತುಂಬಿಸುವುದು ಒಂದು ಪರೀಕ್ಷೆಗಿಂತ ಕಡಿಮೆಯಿಲ್ಲ. ಈ ಕುರಿತು ಪ್ರಧಾನಿಯವರು ಚರ್ಚೆ ನಡೆಸಬೇಕು ಎಂದು ರಾಹುಲ್‌ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತೈಲದ ಮೇಲೆ ಕೇಂದ್ರ ಸರ್ಕಾರ ವಿಧಿಸುತ್ತಿರುವ ತೆರಿಗೆಯಿಂದಾಗಿ ಒಬ್ಬರ ಕಾರಿಗೆ ಇಂಧನ ತುಂಬಿಸುವುದು ಪರೀಕ್ಷೆ ಬರೆಯುವುದಕ್ಕಿಂತ ಕಷ್ಟವಾಗಿದೆ. ಈ ಬಗ್ಗೆ ಪ್ರಧಾನಿ ಏಕೆ ಚರ್ಚಿಸುವುದಿಲ್ಲ? ಖರ್ಚುಗಳ ಬಗ್ಗೆಯೂ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳಿಗೆ ಎದುರಾಗುತ್ತಿರುವ ಪರೀಕ್ಷೆಗಳ ಕುರಿತು ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ ನಡೆಸಿಸುತ್ತಿದ್ದಾರೆ. ಇದರಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಚರ್ಚೆ ನಡೆಸುತ್ತಾರೆ. ಈ ವರ್ಷ ‘ಪರಿಕ್ಷ ಪೆ ಚಾರ್ಚಾ’ ನ ನಾಲ್ಕನೇ ಆವೃತ್ತಿ ನಡೆದಿದೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ರಾಹುಲ್‌ಗಾಂಧಿ ಇತ್ತೀಚೆಗೆ ಪ್ರತಿನಿತ್ಯವೂ ತೈಲ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ವಿಚಾರವಾಗಿ ಚರ್ಚೆಯನ್ನೂ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಇಂಧನ ಬೆಲೆ ಕಡಿತ; ವಿದ್ಯಾರ್ಥಿಗಳ ಸಾಲ ಮನ್ನ; 500 ಅಂಶಗಳ DMK ಪ್ರಣಾಳಿಕೆ ಬಿಡುಗಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights