ಇಂಧನ ಬೆಲೆ ಕಡಿತ; ವಿದ್ಯಾರ್ಥಿಗಳ ಸಾಲ ಮನ್ನ; 500 ಅಂಶಗಳ DMK ಪ್ರಣಾಳಿಕೆ ಬಿಡುಗಡೆ!

ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಇಂಧನ ಮತ್ತು ಎಲ್‌ಪಿಜಿಗೆ ಸಬ್ಸಿಡಿ ನೀಡುವುದಾಗಿ ಮತ್ತು ಹಾಲಿನ ಬೆಲೆಯನ್ನು ಕಡಿತಗೊಳಿಸುವುದಾಗಿ ಭರವಸೆ ನೀಡಿದ್ದು, ತಮಿಳುನಾಡಿನಲ್ಲಿ ಶೇ .75 ರಷ್ಟು ಉದ್ಯೋಗವನ್ನು ತಮಿಳರಿಗೆ ಮೀಸಲಿಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿದೆ.

ಶನಿವಾರ ಡಿಕೆಎಂ ಪಕ್ಷವು ತನ್ನ 500 ಅಂಶಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ಕ್ರಮವಾಗಿ 5 ರೂ. ಮತ್ತು 4 ರೂ.ಗಳನ್ನು ಹಾಗೂ ಎಲ್‌ಪಿಜಿ ಬೆಲೆಯನ್ನು 100 ರೂ ಕಡಿತಗೊಳಿಸುತ್ತದೆ. ಅಲ್ಲದೆ, ಸರ್ಕಾರಿ ಸ್ವಾಮ್ಯದ ಆವಿನ್ ಕಂಪನಿಯ ಮೂಲಕ ಸರಬರಾಜು ಮಾಡುವ ಹಾಲಿನ ಬೆಲೆಯನ್ನು ಲೀಟರ್‌ಗೆ ರೂ .3 ರಷ್ಟು ಕಡಿಮೆ ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಳಿಸಿದೆ.

ಮಹಿಳಾ ಮತದಾರರನ್ನು ಮತ್ತಷ್ಟು ಸೆಳೆಯಲು ಗೃಹಿಣಿಯರಿಗೆ ಮಾಸಿಕ 1,000 ರೂ. ಭತ್ಯೆ ನೀಡುವುದಾಗಿ ಮತ್ತು ನಗರ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸುವುದಾಗಿ ಭರವಸೆ ನೀಡಲಾಗಿದೆ.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಉಚಿತ ಹಾಲು ಮತ್ತು ಕಾಲೇಜು ಶಿಕ್ಷಣಕ್ಕಾಗಿ ತೆಗೆದುಕೊಂಡ ಶೈಕ್ಷಣಿಕ ಸಾಲಗಳನ್ನು ಮನ್ನಾ ಮಾಡುವುದಾಗಿಯೂ ಭರವಸೆ ನೀಡಿದೆ.

ಇದನ್ನೂ ಓದಿ: ತಮಿಳುನಾಡು: ಸಿಎಎ ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಂಡು AIADMK ಅಧಿಕಾರಕ್ಕೆ ಮರಳುತ್ತದೆಯೇ?

ಆದಾಯ ನಷ್ಟವನ್ನು ಸರಿದೂಗಿಸಲು ಎಲ್ಲಾ ಪಡಿತರ ಚೀಟಿ ಹೊಂದಿರುವವರಿಗೆ ವಿಶೇಷ ಕೋವಿಡ್ -19 ಭತ್ಯೆಯನ್ನು 4,000 ರೂ ನೀಡಲಾಗುವುದು. ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಆಸ್ತಿ ತೆರಿಗೆಯನ್ನು ಹೆಚ್ಚಿಸುವುದಿಲ್ಲ ಎಂದು ಪ್ರಣಾಳಿಕೆ ಭರವಸೆ ನೀಡಿದೆ.

ನಿರುದ್ಯೋಗ ಸಮಸ್ಯೆಯನ್ನು ಸುಧಾರಿಸಲು ಎರಡು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಮತ್ತು ಸರ್ಕಾರಿ ಇಲಾಖೆಗಳಲ್ಲಿ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡುಲಾಗುತ್ತದೆ. ಅಲ್ಲದೆ, ರಾಜ್ಯದಲ್ಲಿ ಶೇ .75 ರಷ್ಟು ಉದ್ಯೋಗವನ್ನು ತಮಿಳರಿಗೆ ಮೀಸಲಿಡಲಾಗುವುದು. ಖಾಸಗಿ ವಲಯದಲ್ಲಿಯೂ ಮೀಸಲಾತಿ ನೀಡುವಂತೆ ಒತ್ತಾಯಿಸುವುದಾಗಿಯೂ ಡಿಎಂಕೆ ಹೇಳಿದೆ.

ಇದಷ್ಟೇ ಅಲ್ಲದೆ, ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸಲಾಗುವ ನೀಟ್‌ ಪರೀಕ್ಷೆಯನ್ನೂ ರಾಜ್ಯದಲ್ಲಿ ರದ್ದುಗೊಳಿಸುವುದಾಗಿ ಹೇಳಿದೆ.

ರಾಜಕೀಯ ರಂಗದಲ್ಲಿ ಅಧಿಕಾರದಲ್ಲಿರುವ ಎಐಎಡಿಎಂಕೆ ಮಂತ್ರಿಗಳ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗುವುದು. ಅಸೆಂಬ್ಲಿ ಕಲಾಪಗಳನ್ನು ನೇರ ಪ್ರಸಾರ ಮಾಡುವುದಾಗಿ ಪಕ್ಷ ಭರವಸೆ ನೀಡಿತು.

ಇದನ್ನೂ ಓದಿ: ತಮಿಳುನಾಡು: DMK ಪ್ರಧಾನ ಕಾರ್ಯದರ್ಶಿ ದುರೈ ಮುರುಗನ್ 10ನೇ ಗೆಲುವಿಗಾಗಿ ಹೋರಾಟ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights