FACT CHECK | 2024ರ ‘ಒಲಿಂಪಿಕ್ಸ್‌ನ ಹೊಸ ದಂತಕಥೆ’ ಎಂದು ಎಡಿಟ್‌ ಮಾಡಿದ ಪೋಟೊ ಹಂಚಿಕೆ

ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಟರ್ಕಿಯ ಶೂಟರ್‌ ಯೂಸುಫ್‌ ಡಿಕೆಚ್‌ ಅತ್ಯಂತ ಸರಳ ಉಪಕರಣಗಳನ್ನು ಬಳಕೆ ಮಾಡಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಕ್ರೀಡಾ ವಲಯದಲ್ಲಿ ತಲ್ಲಣವನ್ನೇ ಸೃಷ್ಟಿ ಮಾಡಿದ್ದಾರೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಂತೂ ಯೂಸುಫ್‌ ಡಿಕೆಚ್ ಸರಳತೆಯನ್ನು ಕೊಂಡಾಡುತ್ತಿದ್ದಾರೆ. ಹಲವು ಮಹಿಳೆಯರಿಗೆ ಯೂಸುಫ್‌ ಡಿಕೆಚ್ ಮೇಲ್ ಕ್ರಶ್ ಕೂಡ ಆಗಿದೆ.

ಇದರ ಮಧ್ಯೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ವ್ಯಕ್ತಿಯೊಬ್ಬರು ಒಂದು ಕೈಯಲ್ಲಿ ಕನ್ನಡಿ ಮತ್ತು ಇನ್ನೊಂದು ಕೈಯಲ್ಲಿ ಗನ್ ಹಿಡಿದು, ಹಿಂದಕ್ಕೆ ಗುರಿಯಿಟ್ಟುಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚರಿ ಮೂಡಿಸಿದೆ. ಈ ಚಿತ್ರವನ್ನು ಹಂಚಿಕೊಳ್ಳುತ್ತಿರುವ ವ್ಯಕ್ತಿಗಳು ಪ್ಯಾರಿಸ್ ಒಲಿಂಪಿಕ್ಸ್ 2024 ರ “ಹೊಸ ದಂತಕಥೆ” ಎಂದು ಶ್ಲಾಘಿಸಿದ್ದಾರೆ. ಹಾಗಿದ್ದರೆ ಈ ಫೋಟೊದಲ್ಲಿರುವ ವ್ಯಕ್ತಿ 2024 ರ  ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಶೂಟರ್ ಎಂಬುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ಬೆನ್ನ ಹಿಂದೆಯಿಂದ ಗುರಿಯಿಟ್ಟ ಶೂಟ್ ಮಾಡುತ್ತಿರುವ ವ್ಯಕ್ತಿಯು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ಚಿತ್ರವೇ ಎಂದು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಥೈಲ್ಯಾಂಡ್‌ನ ಮಾಧ್ಯಮ ಔಟ್ಲೆಟ್ “ಥಾಯ್ ಎನ್ಕ್ವೈರರ್” ನ ಟ್ವೀಟ್‌ ಲಭ್ಯವಾಗಿದೆ.

ಈ ಟ್ವೀಟ್‌ನಲ್ಲಿ ವೈರಲ್ ಫೋಟೋ ಸೇರಿದಂತೆ ಅನೇಕ ಒಲಿಂಪಿಕ್ ಶೂಟರ್‌ಗಳ ಕೊಲಾಜ್ ಅನ್ನು ಟ್ವೀಟ್ ಒಳಗೊಂಡಿದ್ದು,  “ಮತ್ತೊಬ್ಬ ಶೂಟರ್‌ನ ಆಗಮನವಾಗಿದೆ: ಥಾಯ್ ಹಾಸ್ಯನಟ ಪೊಂಗ್ಸಾಕ್ ‘ಥೆಂಗ್ ಥೆರ್ಡ್ಥರ್ಂಗ್’ ಪೊಂಗ್ಸುವಾನ್ ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಈ ಸುಳಿವಿನ ಆಧಾರದಲ್ಲಿ ಗೂಗಲ್ ಸಚ್‌ ಮಾಡಿದ್ದು ಪೊಂಗ್ಸುವಾನ್ ಬಗ್ಗೆ ಮಾಧ್ಯಮ ವರದಿಯನ್ನು ಕಂಡುಕೊಂಡಿದ್ದೇವೆ. ವರದಿಯ ಪ್ರಕಾರ, ಪೊಂಗ್ಸಾಕ್ ಪೊಂಗ್ಸುವಾನ್ ಒಬ್ಬ ಹಾಸ್ಯನಟ, ಥಾಯ್ ಟಿವಿ ನಿರ್ಮಾಣ ಕಂಪನಿ ವರ್ಕ್‌ಪಾಯಿಂಟ್ ಎಂಟರ್‌ಟೈನ್‌ಮೆಂಟ್‌ನ ಹಾಸ್ಯ ಕಾರ್ಯಕ್ರಮವಾದ “ಚಿಂಗ್ ರೋಯಿ ಚಿಂಗ್ ಲಾರ್ನ್” ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾರೆ.

ಸಾಮಾನ್ಯ ಕನ್ನಡಕ, ಕಿವಿಗೆ ಇಯರ್‌ ಪ್ಲಗ್‌ ತೊಟ್ಟು ಒಂದು ಕೈಲಿ ಗನ್ ಮತ್ತೊಂದು ಕೈ ಜೇಬಲ್ಲಿಟ್ಟು ಗುರಿ ಮೇಲೆ ಗುರಿಯಿಟ್ಟು ಶೂಟ್‌ ಮಾಡಿದ ಯೂಸುಫ್ ಡಿಕೆಚ್‌ ಅವರ ಖದರ್‌ ಕಂಡು ಎಲ್ಲರೂ ಬೆರಗಾಗಿದ್ದಾರೆ. ಕೆಲವೇ ಸಲಕರಣೆ ಬಳಸಿ ಪದಕ ಗೆದ್ದಿರುವ ಯೂಸುಫ್‌ ಡಿಕೆಚ್‌ ಹಲವು ಉದಯೋನ್ಮುಖರಿಗೆ ಸ್ಪೂರ್ತಿಯಾಗಿದ್ದಾರೆ.

ಮತ್ತಷ್ಟು ಸರ್ಚ್ ಮಾಡಿದಾಗ,  ವರ್ಕ್‌ಪಾಯಿಂಟ್ ಅಫೀಶಿಯಲ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪೊಂಗ್ಸುವಾನ್ ಒಳಗೊಂಡ ಹಾಸ್ಯ ಕಾರ್ಯಕ್ರಮದ ವಿಡಿಯೋ ಲಭ್ಯವಾಗಿದೆ. ವಿಡಿಯೋದಲ್ಲಿ, ಪೊಂಗ್ಸುವಾನ್ ಕನ್ನಡಿಯನ್ನು ಬಳಸಿ ಹಿಮ್ಮುಖವಾಗಿ ಗುರಿಯಿಟ್ಟು ತನ್ನ ಬೆನ್ನಿನ ಹಿಂದೆ ಬಲೂನ್‌ಗೆ ಶೂಟ್ ಮಾಡುವುದನ್ನು ಕಾಣಬಹುದು. 3:10 ಮಾರ್ಕ್‌ನಲ್ಲಿ, ವೈರಲ್ ಫೋಟೋದಲ್ಲಿರುವ ಅದೇ ಭಂಗಿಯಲ್ಲಿ ಅವರನ್ನು ಕಾಣಬಹುದು. ಹೀಗಾಗಿ ಒಲಿಂಪಿಕ್ಸ್‌ನಲ್ಲಿ ವ್ಯಕ್ತಿಯೊಬ್ಬ ಹಿಮ್ಮುಖವಾಗಿ ಗುಂಡು ಹಾರಿಸಿರುವ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಹಾಸ್ಯ ಕಾರ್ಯಕ್ರಮದ ನಟ ಪೊಂಗ್ಸುವಾನ್ ಕನ್ನಡಿ ಬಳಸಿ ಹಿಮ್ಮುಖವಾಗಿ ಗುರಿಯಿಟ್ಟಂತೆ ಶೂಟ್ ಮಾಡಿದಂತೆ ನಟಿಸುವ ದೃಶ್ಯವನ್ನು 2024 ರ  ಪ್ಯಾರಿಸ್ ಒಲಿಂಪಿಕ್ಸ್ ನ ಹೊಸ ಶೂಟರ್ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು  Ensuddi.com  ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಿ.ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ಬಜೆಟ್ ತಯಾರಿಕೆಯಲ್ಲಿ ದಲಿತರನ್ನು ಒಳಗೊಂಡಿರಲಿಲ್ಲವೇ? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights