ರಾತ್ರಿ ಕರ್ಫ್ಯೂ ಅಥವಾ ಕೊರೊನಾ ಕರ್ಫ್ಯೂಗಳು ಪರಿಣಾಮಕಾರಿಯೆ? ಇದರಿಂದ ಏನು ಪ್ರಯೋಜನ?

ದೇಶದಲ್ಲಿ ಕೊರೊನಾ ಎರಡನೇ ಅಲೆ ಆಕ್ರಮಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ, ರಾತ್ರಿ ಕರ್ಫ್ಯೂ ಜಾರಿಗೊಳಿಸುವಂತೆ ಸೂಚಿಸಿದ್ದಾರೆ. ಅಲ್ಲದೆ, ಅದಕ್ಕೆ ‘ಕೋವಿಡ್‌ ಕರ್ಫ್ಯೂ’ ಎಂದು ಮರನಾಮಕರಣವನ್ನೂ ಮಾಡಿದ್ದಾರೆ.

“ರಾತ್ರಿ ಕರ್ಫ್ಯೂ ಅನ್ನು ಕೋವಿಡ್ ಕರ್ಫ್ಯೂ ಎಂದು ಜನಪ್ರಿಯಗೊಳಿಸಲು ರಾಜ್ಯ ಸರ್ಕಾರಗಳಿಗೆ ನಾನು ಒತ್ತಾಯಿಸುತ್ತೇನೆ, ಇದರಿಂದ ಜನರು ಕೊರೊನಾ ವೈರಸ್‌ ಬಗ್ಗೆ ಜಾಗೃತರಾಗಿರುತ್ತಾರೆ.” – ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದಂತೆ ಪ್ರಧಾನಿ ಮೋದಿ.

“ಕರೋನಾ ಕರ್ಫ್ಯೂ ಜನರಿಗೆ ಸಹಾಯ ಮಾಡಲು ಮತ್ತು ಜಾಗೃತಿ ಮೂಡಿಸಲು ಸರ್ಕಾರಗಳಿಗೆ ನೆರವಾಗುತ್ತದೆ” ಎಂದು ಅವರು ಹೇಳಿದ್ದಾರೆ.

ರಾತ್ರಿ ಕರ್ಫ್ಯೂಗಳು ಪರಿಣಾಮಕಾರಿಯಾಗಿದೆಯೇ?

ರಾತ್ರಿ ಕರ್ಫ್ಯೂ ಎಷ್ಟು ಪರಿಣಾಮಕಾರಿ ಎಂದು ಕಂಡುಹಿಡಿಯಲು ತಜ್ಞರ ಅಭಿಪ್ರಾಯನವನ್ನು ದಿ ಕ್ವಿಂಟ್‌ ಕಲೆಹಾಕಿದೆ. ಅಶೋಕ  ವಿಶ್ವವಿದ್ಯಾಲಯದ ವೈರಾಲಜಿಸ್ಟ್ ಮತ್ತು ತ್ರಿವೇದಿ ಸ್ಕೂಲ್ ಆಫ್ ಬಯೋಸೈನ್ಸ್‌ನ ನಿರ್ದೇಶಕ ಡಾ. ಶಾಹಿದ್‌ ಜಮೀಲ್ ಅವರು, ಎಲ್ಲಾ ವಯಸ್ಸಿನವರಿಗೆ ಲಸಿಕೆ ನೀಡಿದರೂ, ವ್ಯಾಕ್ಸಿನೇಷನ್‌ಗಳನ್ನು ಮಾಡಿದರೂ ಕೆಲವು ಸಮಯಗಳ ಕಾಲ ಕೆಲವು ರೀತಿಯ ಲಾಕ್‌ಡೌನ್‌ಗಳು ಅನಿವಾರ್ಯ ಎಂದು ಈ ಹೇಳಿದ್ದರು.

ಲಾಕ್‌ಡೌನ್‌ಗಳು ತಕ್ಷಣ ಪರಿಣಾಮವನ್ನು ಬೀರುತ್ತವೆ ಮತ್ತು ಆದ್ದರಿಂದ ಈ ಸೋಂಕಿನ ಹರಡುವಿಕೆಯನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ ಎಂದು ಅವರು ವಿವರಿಸಿದರು.

“ಸೀಮಿತ ಲಾಕ್‌ಡೌನ್‌ಗಳು ಅನಿವಾರ್ಯ, ಆದರೆ, ರಾತ್ರಿ ಮತ್ತು ವಾರಾಂತ್ಯದ ಕರ್ಫ್ಯೂಗಳು ಅಷ್ಟು ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾಲಯದ ಬಯೋಎಥಿಕ್ಸ್‌ನ ಸಹಾಯಕ ಪ್ರಾಧ್ಯಾಪಕ ಮತ್ತು ಸಂಶೋಧಕ ಡಾ.ಅನಂತ್ ಭನ್ ಅವರು ಲಾಕ್‌ಡೌನ್‌ಗಳಿಗೆ “ವೈಜ್ಞಾನಿಕ, ಸೂಕ್ಷ್ಮ” ವಿಧಾನದ ಅಗತ್ಯವಿದೆ. ರಾತ್ರಿ ಕರ್ಫ್ಯೂಗಳು ಯಾವುದೇ ರೀತಿಯಲ್ಲಿ ಪರಿಣಾಮ ಬೀರಲಾರವು ಎಂದು ಹೇಳಿದ್ದಾರೆ.

ರಾತ್ರಿಯ ಕರ್ಫ್ಯೂಗಳು COVID-19 ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಏಕೆಂದರೆ ಜನರು ತಮ್ಮ ಕಾರ್ಯಗಳನ್ನು ಮುಗಿಸಲು ತಮ್ಮ ಚಟುವಟಿಕೆಗನಳನ್ನು ತೀವ್ರಗೊಳಿಸುತ್ತಾರೆ. ಇದರಿಂದಾಗಿ ದಿನದಲ್ಲಿ ಜನದಟ್ಟಣೆಗೆ ಕಾರಣವಾಗಬಹುದು. ಹೀಗಾಗಿ, ನಾನು ಅನಿವಾರ್ಯವಲ್ಲದ ಅಂಗಡಿಗಳನ್ನು ಮುಚ್ಚುವುದು, ಸಾಧ್ಯವಾಗುವಂತಯ ಕೆಲಸಗಳನ್ನು ಮನೆಯಲ್ಲಿಯೇ ಮಾಡುವುದು, ರೆಸ್ಟೋರೆಂಟ್‌ಗಳು, ಮಾಲ್‌ಗಳು, ಚಿತ್ರಮಂದಿರಗಳನ್ನು ಮುಚ್ಚುವುದು. ಇಂತಹ ಇತರ ನಿರ್ಬಂಧಗಳೊಂದಿಗೆ ಮಾತ್ರ ನಾವು ಸಾಮಾಜಿಕ ದೂರವನ್ನು ಜಾರಿಗೊಳಿಸಬಹುದು ಮತ್ತು ಸೋಂಕಿನ ಹರಡುವಿಕೆಯನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಆದರೆ ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ರಾತ್ರಿ ಕರ್ಫ್ಯೂ ಅನ್ನು ‘ಕೋವಿಡ್ ಕರ್ಫ್ಯೂ’ ಎಂದು ಮರುನಾಮಕರಣ ಮಾಡುವ ಹಾಗೂ ಆ ಮೂಲಕ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಒತ್ತಿ ಹೇಳಿದರು. – ಆದರೆ ಹೆಚ್ಚುತ್ತಿರುವ ಪ್ರಕರಣಗಳನ್ನು ಎದುರಿಸುವಲ್ಲಿ ಅದರ ಪರಿಣಾಮಕಾರಿತ್ವದ ಬಗ್ಗೆ ಮಾತನಾಡಲಿಲ್ಲ.

“ಬೌದ್ಧಿಕ ಚರ್ಚೆ ಇದೆ, ಅದೇನೆಂದರೆ ಕೊರೊನಾ ರಾತ್ರಿಯಲ್ಲಿ ಬರುತ್ತದೆಯೇ? ಎಂದು. ರಾತ್ರಿ ಕರ್ಫ್ಯೂ ಪ್ರಯೋಗವನ್ನು ಜಗತ್ತು ಒಪ್ಪಿಕೊಂಡಿರುವುದು ಸತ್ಯ. ಕರ್ಫ್ಯೂ ಸಮಯವು ಪ್ರತಿಯೊಬ್ಬರಿಗೂ ಅವರು ಕೊರೊನಾ ಹರಡುತ್ತಿರುವ ಸಂದರ್ಭದಲ್ಲಿ ವಾಸಿಸುತ್ತಿದ್ದಾರೆ ಎಂದು ನೆನಪಿಸುತ್ತದೆ” ಎಂದು ಮೋದಿ ಹೇಳಿದ್ದಾರೆ.

ಸಾಂಕ್ರಾಮಿಕ ರೋಗವನ್ನು ಎದುರಿಸಲು ನಮಗೆ ಕೋವಿಡ್ ಪ್ರೋಟೋಕಾಲ್ (ಮಾಸ್ಕ್‌, ಸಾಮಾಜಿಕ ಅಂತರ ಮತ್ತು ಕೈ ತೊಳೆಯುವುದು), ವ್ಯಾಕ್ಸಿನೇಷನ್ ಮತ್ತು ನಿರ್ಬಂಧಗಳು ಬೇಕು ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಸೂಚಿಸುತ್ತಾರೆ.

“ಪೀಡಿತ ನಗರಗಳ ಕೆಲವು ಪ್ರದೇಶಗಳಲ್ಲಿ ನಾವು ಲಾಕ್ ಡೌನ್ ಮಾಡಬಹುದು” ಎಂದು ಡಾ. ಜಮೀಲ್ ಹೇಳುತ್ತಾರೆ. ಆದರೆ, ಈ ಹಿಂದೆ ಲಾಕ್‌ಡೌನ್‌ನಿಂದಾದ ಸಮಸ್ಯೆಗಳನ್ನು ನಾವು ತಿಳಿದಿರುವ ಕಾರಣ, “ಇತರ ಆರೋಗ್ಯ ಸೇವೆಗಳನ್ನು ಮುಂದುವರಿಸಲು ನಾವು ಉತ್ತಮವಾಗಿ ಯೋಜಿಸಬಹುದು, ವಯಸ್ಸಾದವರನ್ನು ರಕ್ಷಿಸಬೇಕು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ಲಾಕ್‌ಡೌನ್‌ ಭೀತಿ: ಕಾರ್ಮಿಕರ ಮತ್ತೊಂದು ಬೃಹತ್‌ ವಲಸೆ ಆರಂಭ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights