ರಾಯಚೂರಿನಲ್ಲಿ ನಿಲ್ಲದ ಹೊರರಾಜ್ಯದವರ ಪ್ರಯಾಣ; ಸೋಂಕಿನ ಭೀತಿಯಲ್ಲಿ ಸ್ಥಳೀಯ ಜನ

ಕೊರೋನಾ ವೈರಸ್‌ ಹರಡುವುದನ್ನು ತಡೆಯುವ ಸಲುವಾಗಿ ಈಗಾಗಲೇ ಅಂತರರಾಜ್ಯ ಗಡಿಯನ್ನು ಮುಚ್ಚಲಾಗಿದೆ. ಆದರೂ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಜನ ಲಾರಿಯಲ್ಲಿ ರಾಯಚೂರಿಗೆ ಆಗಮಿಸುತ್ತಿರುವುದು ಇದೀಗ ಜಿಲ್ಲಾಡಳಿತದ ತಲೆನೋವಿಗೆ ಕಾರಣವಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೋನಾ ಸೋಂಕು ಪ್ರಕರಣ ಕಾಣಿಸಿಕೊಂಡಿಲ್ಲ. ಆದರೆ, ರಾಯಚೂರು ಗಡಿ ಸುತ್ತಾ ಆಂದ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಆ ಭಾಗದ ಜನ ರಾಯಚೂರಿಗೆ ಆಗಮಿಸುತ್ತಿದ್ದು, ಜಿಲ್ಲೆಯಲ್ಲಿ ಕೊರೋನಾ ಹರಡುವ ಕುರಿತು ಜನರಿಗೂ ಸಹ ಆತಂಕ ಶುರುವಾಗಿದೆ.

ತೆಲಂಗಾಣ ಹಾಗೂ ಕರ್ನಾಟಕ ಗಡಿಯಲ್ಲಿ ಶಕ್ತಿನಗರ ಎಂಬಲ್ಲಿ ಚೆಕ್ ಪೋಸ್ಟ್ ಇದೆ. ಇದು ರಾಜ್ಯದ ಕೊನೆಯ ಭಾಗದ ಚೆಕ್ ಪೋಸ್ಟ್. ಆದರೆ, ಈ ಚೆಕ್‌ಪೋಸ್ಟ್‌ ಮೂಲಕ ಲಾರಿಗಳಲ್ಲಿಯೂ ಕೂಲಿಕಾರರನ್ನು ರಾಯಚೂರಿಗೆ ಕರೆದುಕೊಂಡು ಬರಲಾಗುತ್ತಿದೆ.

ಅಲ್ಲದೆ, ಈ ಚೆಕ್‌ಪೋಸ್ಟ್‌ ಮೂಲಕ ಗೂಡ್ಸ್‌ ಲಾರಿಗಳೂ ಸಹ ದಿನನಿತ್ಯ ಓಡಾಡುತ್ತಿರುವ ಕಾರಣ ಸ್ಥಳೀಯ ನಿವಾಸಿಗಳು ಭಯದಿಂದ ಬದುಕುವಂತಾಗಿದೆ. ಹೀಗಾಗಿ ಅಧಿಕಾರಿಗಳು ಕೂಡಲೇ ಈ ಕುರಿತು ಗಮನವಹಿಸಬೇಕಿದೆ. ಗಡಿ ಭಾಗದಲ್ಲಿ ಜನರ ಓಡಾಟವನ್ನು ನಿಯಂತ್ರಿಸಬೇಕಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights