ಕೊರೊನಾ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ಸ್ಯಾಂಡಲ್ ವುಡ್ ಸ್ಟಾರ್ಸ್…!
ರಾಜ್ಯದಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿದ್ದು ಸ್ಯಾಂಡಲ್ ವುಡ್ ಸ್ಟಾರ್ ಗಳು ನೆರವಿಗೆ ನಿಂತಿದ್ದು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.
ಹೌದು… ರಾಜ್ಯದಲ್ಲಿ ಪ್ರತಿನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಕರ್ನಾಟಕ ಇಂದು ದೇಶದಲ್ಲೇ ಏಕದಿನ ಕೋವಿಡ್ ಪ್ರಕರಣಗಳಲ್ಲಿ ನಂಬರ್ ಒನ್ ರಾಜ್ಯವಾಗಿದೆ. ಕೊರೊನಾ ಸಂಕಷ್ಟಕ್ಕೆ ತುತ್ತಾದ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಸಂತ್ರಸ್ತರ ಸಂಕಷ್ಟಕ್ಕೆ ಮರುಗಿದ ಸ್ಯಾಂಡಲ್ ವುಡ್ ಸ್ಟಾರ್ ನಟರು ಸಹಾಯ ಹಸ್ತ ಚಾಚಿದ್ದಾರೆ.
ನಟ ಉಪೇಂದ್ರ 28 ಲಕ್ಷ ರೂ. ಮೌಲ್ಯದ ದಿನಸಿ ನೀಡಲು ನಿರ್ಧರಿಸಿದ್ದರೆ. ಮೂರೂವರೆ ಸಾವಿರ ಕಾರ್ಮಿಕರಿಗೆ ದಿನಸಿ ಕಿಟ್ ನೀಡಲಿದ್ದಾರೆ. ಸುದೀಪ್ ಅವರು ಚಾರಿಟಬಲ್ ಟ್ರಸ್ಟ್ ಚಾಮರಾಜನಗರದಲ್ಲಿ ಮೃತಪಟ್ಟವರಲ್ಲಿ 12 ಕುಟುಂಬಗಳ ಜವಾಬ್ದಾರಿ ಹೊತ್ತುಕೊಂಡಿದೆ.
ಇವರೊಂದಿಗೆ ದಾವಣಗೆರೆಯ ಮಾಜಿ ಶಾಸಕ ಮೋತಿ ವೀರಣ್ಣ ಅವರ ಪುತ್ರ ಮೋತಿ ರಾಜೇಂದ್ರ ಒಂದು ಲಕ್ಷ ರೂಪಾಯಿ ಹಣ ನೀಡಲು ಮುಂದಾಗಿದ್ದಾರೆ. ಮಾತ್ರವಲ್ಲದೇ ಹಿರಿಯ ನಟಿ ಲೀಲಾವತಿ ಕಲಾವಿದರಿಗೆ ದಿನಸಿಗಳ ಕಿಟ್ ವಿತರಣೆ ಮಾಡಿದ್ದಾರೆ.

