ರೇಡಿಯೋ ಚಾನೆಲ್‌ಗಳಲ್ಲಿ ಸ್ತ್ರೀಯರ ಧ್ವನಿ, ಸಂಗೀತಕ್ಕೆ ನಿಷೇಧ ಹೇರಿದ ತಾಲಿಬಾನಿಗಳು!

ಅಫ್ಘಾನಿಸ್ತಾನದ ಕಂದಹಾರ್ ದಲ್ಲಿ ಟೆಲಿವಿಷನ್ ಮತ್ತು ರೇಡಿಯೋ ಚಾನೆಲ್ ಗಳಲ್ಲಿ ಸಂಗೀತ ಮತ್ತು ಸ್ತ್ರೀ ಧ್ವನಿಗಳನ್ನು ತಾಲಿಬಾನ್ ನಿಷೇಧಿಸಿದೆ.

ಆಗಸ್ಟ್ 15 ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಕೆಲವು ಮಾಧ್ಯಮಗಳಲ್ಲಿ ಮಹಿಳಾ ಆಂಕರ್‌ಗಳನ್ನು ತಾಲಿಬಾನಿಗಳು ತೆಗೆದುಹಾಕಿದ್ದಾರೆ. ಸದ್ಯ ಕಾಬೂಲ್‌ನ ಸ್ಥಳೀಯ ಮಾಧ್ಯಮಗಳನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡು ಅಲ್ಲಿ ಕೆಲಸ ಮಾಡುತ್ತಿದ್ದ ಹಲವಾರು ಮಹಿಳಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಮಾತ್ರವಲ್ಲದೆ ಟೆಲಿವಿಷನ್ ಮತ್ತು ರೇಡಿಯೋ ಚಾನೆಲ್ ಗಳಲ್ಲಿ ಸಂಗೀತ ಮತ್ತು ಸ್ತ್ರೀ ಧ್ವನಿಗಳನ್ನು ತಾಲಿಬಾನ್ ನಿಷೇಧಿಸಿದೆ.

ಆದಾಗ್ಯೂ ತಾಲಿಬಾನ್ ಮಹಿಳೆಯರಿಗೆ ಕೆಲಸ ಮುಂದುವರಿಸಲು ಅವಕಾಶ ನೀಡುವುದಾಗಿ ಮತ್ತು ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಅವರಿಗೆ ಅಧ್ಯಯನ ಮಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಿದೆ.

ತಾಲಿಬಾನ್ ನೀಡಿದ ಭರವಸೆಗಳಿಗೆ ವಿರುದ್ಧವಾಗಿ, ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಲಾರಂಭಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳ ವರದಿಗಳು ತೋರಿಸುತ್ತವೆ.

ಹಿಂದಿನ ಅಧಿಕಾರಾವಧಿಯಲ್ಲಿ, ತಾಲಿಬಾನ್ ಮಹಿಳೆಯರನ್ನು ಕಠಿಣವಾಗಿ ನಡೆಸಿಕೊಳ್ಳುವುದಕ್ಕೆ ಹೆಸರುವಾಸಿಯಾಗಿತ್ತು, ಇದರಲ್ಲಿ ಅವರು ತಮ್ಮ ಮನೆಗಳಿಂದ ಹೊರಬಂದಾಗಲೆಲ್ಲಾ ತಲೆ ಮುಚ್ಚಿಕೊಳ್ಳುವುದು ಮತ್ತು ಪುರುಷ ಕುಟುಂಬದ ಸದಸ್ಯರು ಜೊತೆಗಿದ್ದುಕೊಂಡೆ ಓಡಾಡಬೇಕಿತ್ತು. ಆದರೀಗ ಅದೇ ಪರಿಸ್ಥಿತಿ ಬಂದೊದಗುವ ಆತಂಕ ನಿರ್ಮಾಣವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights