Categories
Breaking News District State

ಕರ್ತವ್ಯ ನಿರತ ಮಹಿಳಾ ಕಂಡಕ್ಟರ್​ ಮೇಲೆ ಆ್ಯಸಿಡ್​ ದಾಳಿ ಪ್ರಕರಣಕ್ಕೆ ಹೊಸ ಟ್ವಿಸ್ಟ್..

ಕರ್ತವ್ಯ ನಿರತ ಮಹಿಳಾ ಕಂಡಕ್ಟರ್​ ಮೇಲೆ ನಡೆದ ಆ್ಯಸಿಡ್​ ದಾಳಿ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಅತ್ತಿಗೆ ಮೇಲೆ ಮೈದುನನೇ ಈ ಕೃತ್ಯ ಎಸಗಿದ್ದು, ಇದಕ್ಕೆ ಕಾರಣ ಇವರಿಬ್ಬರ ನಡುವಿದ್ದ ಅಕ್ರಮ ಸಂಬಂಧ ಎನ್ನಲಾಗಿದೆ.

ಕಳೆದೆರಡು ದಿನದ ಹಿಂದೆ ಬಾಗಲಗುಂಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರತ ಕಂಡಕ್ಟರ್​ ಇಂದಿರಾ ಬಾಯಿ ಎನ್ನುವವರ ಮೇಲೆ ಸ್ಕೂಟರ್​ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಆ್ಯಸಿಡ್​ ದಾಳಿ ನಡೆಸಿದ್ದರು. ಪರಿಣಾಮ ಬಲಭಾಗದ ಮುಖ, ಕೈ ಸೇರಿದಂತೆ ಇನ್ನಿತರ ಭಾಗಗಳಿಗೆ ಗಾಯಗೊಂಡಿದ್ದ ಅವರನ್ನು ಇಲ್ಲಿನ ಸಪ್ತಗಿರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಈ ಘಟನೆಗೆ ಕಾರಣ ಏನು ಎಂದು ತನಿಖೆ ಶುರು ಮಾಡಿದ ಪೊಲೀಸರಿಗೆ ಇದು ಮೈದುನನೇ ನಡೆಸಿದ ಕೃತ್ಯ ಎಂಬ ಸಂಗತಿ ಬಯಲಾಗಿದೆ.  ಪೀಣ್ಯಾದ 9ನೇ ಡಿಪೋದ ಬಿಎಂಟಿಸಿ ಬಸ್ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇಂದಿರಾಬಾಯಿ  ಜೊತೆ ಅದೇ ಡಿಪೋದಲ್ಲಿ ಅರುಣ್​ ಎಂಬ ಆಕೆಯ ಮೈದುನ ಕೂಡ ಕರ್ತವ್ಯ ನಿರ್ವಹಿಸುತ್ತಿದ್ದ.

ಕೆಲವೊಮ್ಮೆ ಒಂದೇ ಬಸ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರಿಬ್ಬರ ನಡುವೆ ಅಕ್ರಮ ಸಂಬಂಧ ಕೂಡ ಇತ್ತು. ಆದರೆ, ಇತ್ತೀಚೆಗೆ ಇಂದಿರಾ ಬಾಯಿ ಆರೋಪಿ ಅರುಣ್​ನನ್ನು ನಿರ್ಲಕ್ಷಿಸಿ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧ ಬೆಳಸಿದ್ದಳು.

ಇದೇ ಕೋಪಕ್ಕೆ ಅರುಣ್​ ಇಂದಿರಾಬಾಯಿ ಮೇಲೆ ಆ್ಯಸಿಡ್​ ದಾಳಿ ಮಾಡುವ ಸಂಚು ರೂಪಿಸಿದ್ದ. ಇದಕ್ಕಾಗಿ ಎರಡೂವರೆ ತಿಂಗಳ ಹಿಂದೆಯೇ ಮೆಜೆಸ್ಟಿಕ್​ನಲ್ಲಿ ಆ್ಯಸಿಡ್​ ತಂದಿಟ್ಟಿದ್ದ ಎನ್ನಲಾಗಿದೆ.

ದಾಳಿಗೆ ಮುನ್ನ ಸ್ನೇಹಿತ ಕುಮಾರ್​ನನ್ನು ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗುವುದಾಗಿ ಸುಳ್ಳು ನೆಪ ಹೇಳಿ ಹತ್ತಿಸಿಕೊಂಡಿದ್ದಾನೆ. ಸದ್ಯ ಇಬ್ಬರು ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ.

Categories
Breaking News District State

ಸಿಬ್ಬಂದಿಯಿಂದ ಕಿರುಕುಳ : ಆತ್ಮಹತ್ಯೆಗೆ ಯತ್ನಸಿದ ಮಹಿಳಾ ಕಾರ್ಮಿಕೆ – ಸ್ಥಳೀಯರಿಂದ ಪ್ರತಿಭಟನೆ

ಸಿಬ್ಬಂದಿಯ ಕಿರುಕುಳದಿಂದಾಗಿ ಮಹಿಳಾ ಕಾರ್ಮಿಕೆಯೊಬ್ಬಳು ಆತ್ಮಹತ್ಯೆಗೆ ಯತ್ನಸಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ರಾಚಮಾನಹಳ್ಳಿಯಲ್ಲಿ ನಡೆದಿದೆ.

ರಾಚಮಾನಹಳ್ಳಿ ವಾಸಿ ಉಷಾ(32) ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಕಾರ್ಮಿಕೆ. ಮಾಯಸಂದ್ರ ಸಮೀಪದ ಡಿಎಚ್ ಎಲ್ ಲೇವಿಸ್ ಕಂಪನಿ ಸಿಬ್ಬಂದಿ ವಿರುದ್ಧ ಕಿರುಕುಳ ಆರೋಪ ಮಾಡಲಾಗುತ್ತಿದೆ.

ಉಷಾ ಡೆತ್ ನೋಟ್ ನಲ್ಲಿ ಮಾಡಿದ ಆರೋಪ :-

ಕಳೆದ ಐದು ವರ್ಷಗಳಿಂದ ಡಿಎಚ್ ಎಲ್ ಲೇವಿಸ್ ಕಂಪನಿಯಲ್ಲಿ  ಕೆಲಸ ಮಾಡುತ್ತಿದ್ದೆನೆ. ನಾವು ತುಂಬಾ ಬಡವರು, ಕೂಲಿ ಮಾಡದೇ ವಿಧಿಯಿಲ್ಲ. ಆದ್ರೆ ಇತ್ತೀಚೆಗೆ ರಮೇಶ್, ಗಾಂಧಿ, ಪುಷ್ಪಾ, ನಾಗರಾಜ್ ಮತ್ತು ಬಾಲರೆಡ್ಡಿ ಕೆಲಸ ಬಿಟ್ಟು ಹೋಗು ಎಂದು ಬೈತಾರೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ನಿನ್ನೆ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಉಷಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಉಷಾ. ಇಂದು ಕಾರ್ಮಿಕರ ಮೇಲಿನ ಕಿರುಕುಳ ಖಂಡಿಸಿ ಸ್ಥಳೀಯರಿಂದ ಕಂಪನಿ ಮುಂದೆ ಪ್ರತಿಭಟನೆ ಮಾಡಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಮತ್ತು ನೊಂದ ಮಹಿಳೆಗೆ ಪರಿಹಾರ ಭರವಸೆ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.

ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಈ ದಾಖಲಾಗಿದೆ.

Categories
Breaking News District State

ಕಾರ್ಖಾನೆ ಕ್ಯಾಂಟೀನ್ ನಲ್ಲಿ ಊಟ ಮಾಡಿದ ೨೦ ಕ್ಕೂ ಹೆಚ್ಚು ಮಹಿಳಾ ನೌಕರರು ಅಸ್ಚಸ್ಥ…..!

ಕಾರ್ಖಾನೆಯ ಕ್ಯಾಂಟೀನ್ ನಲ್ಲಿ ಊಟ ಮಾಡಿದ ೨೦ ಕ್ಕೂ ಹೆಚ್ಚು ಮಹಿಳಾ ನೌಕರರು ಅಸ್ಚಸ್ಥರಾದ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿಯ ಸರವಿ ಇಂಡಸ್ಟ್ರೀಯಲ್ ನಲ್ಲಿ ನಡೆದಿದೆ.

ಮಧ್ಯಾಹ್ನ ಊಟದ ವೇಳೆ ಕ್ಯಾಂಟೀನ್ ನಲ್ಲಿ ಊಟ ಮಾಡಿದ ಮಹಿಳಾ ನೌಕರರು, ಊಟದ ಬಳಿಕ ಸ್ವಲ್ಪ ಹೊತ್ತಿನಲ್ಲೇ ತಲೆ ಸುತ್ತು ವಾಂತಿ ಬೇದಿಯಾಗಿ ಅಸ್ವಸ್ಥಗೊಂಡಿದ್ದಾರೆ.

ಅಸ್ವಸ್ಥರಿಗೆ ಮದ್ದೂರಿನ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಲಾಗುತ್ತಿದೆ. ಫುಡ್ ಫಾಯಿಸನ್‌ನಿಂದ ನೌಕರರು‌ ಅಸ್ವಸ್ಥರಾಗಿರೋ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಆರೋಗ್ಯ ತಪಾಸಣಾಧಿಕಾರಿಗಳು‌ ಭೇಟಿ ಕ್ಯಾಂಟೀನ್ ಪರಿಶೀಲನೆ ನಡೆಸಿದ್ದಾರೆ.

ಕಾರ್ಖಾನೆಯಲ್ಲಿ ಮಹಿಳಾ ನೌಕರರು‌ ಅಸ್ವಸ್ಥರಾಗಿರುವ ಸುದ್ದಿ ತಿಳಿದು‌ ಅಸ್ವಸ್ಥ ಮಹಿಳೆಯರ ಕುಟುಂಬದವರು ಆತಂಕದಲ್ಲಿದ್ದಾರೆ. ಸದ್ಯ ಚಿಕಿತ್ಸೆಯಿಂದ ಮಹಿಳಾ ನೌಕರರು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Categories
Breaking News District National Political

ಅಬ್ಬಬ್ಬಾ… ಈ ಲೋಕಸಭೆಯಲ್ಲಿ ಹಿಂದೆಂದಿಗಿಂತಲೂ ಅತಿಹೆಚ್ಚು ಮಹಿಳಾ ಸದಸ್ಯರು!

ಈ ಬಾರಿಯ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಅತಿಹೆಚ್ಚು ಸಂಖ್ಯೆಯ ಮಹಿಳಾ ಅಭ್ಯರ್ಥಿಗಳು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ದೇಶದ 542 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 78 ಮಹಿಳಾ ಅಭ್ಯರ್ಥಿಗಳು ವಿವಿಧ ಪಕ್ಷಗಳಿಂದ ಲೋಕಸಭೆ ಪ್ರವೇಶ ಮಾಡಿದ್ದಾರೆ.
ಈ ಮೂಲಕ 1952ರಿಂದ ಇದುವರೆಗೂ ಇದೇ ಮೊದಲ ಬಾರಿಗೆ ಶೇ.14ಕ್ಕಿಂತ ಹೆಚ್ಚು ಪ್ರಮಾಣದ ಮಹಿಳೆಯರು ಲೋಕಸಭೆ ಪ್ರವೇಶಿಸಿದಂತಾಗಿದೆ. ಇದರಲ್ಲಿ ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಿಂದ ತಲಾ 11 ಮಂದಿ ಮಹಿಳೆಯರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ.
41 ಹಾಲಿ ಸಂಸದರ ಪೈಕಿ ಸೋನಿಯಾ ಗಾಂಧಿ, ಹೇಮಾ ಮಾಲಿನಿ, ಕಿರಣ್‌ ಖೇರ್‌ ಸೇರಿದಂತೆ ಒಟ್ಟು 27 ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಇನ್ನು ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಹಾಗೂ ಸ್ಮೃತಿ ಇರಾನಿ ಅವರು ಸಹ ತಮ್ಮ ಎದುರಾಳಿಗಳಾದ ಕ್ರಮವಾಗಿ ದಿಗ್ವಿಜಯ್‌ ಸಿಂಗ್‌ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಗೆಲುವು ಸಾಧಿಸಿ ಲೋಕಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕದಿಂದಲೂ ಇಬ್ಬರು ಮಹಿಳೆಯರು ಸಂಸತ್ತು ಪ್ರವೇಶಿಸುತ್ತಿದ್ದು, ಇವರಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆದ್ದ ಶೋಭಾ ಕರಂದ್ಲಾಜೆ ಹಾಗೂ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಸುಮಲತಾ ಇದ್ದಾರೆ. ಶೋಭಾ ಈ ಹಿಂದೆಯೂ ಸಂಸದೆಯಾಗಿ ಆಯ್ಕೆಯಾಗಿದ್ದರು. ಆದರೆ ಸುಮಲತಾ ಇದೇ ಮೊದಲ ಬಾರಿ ಸಂಸತ್ತು ಪ್ರವೇಶಿಸುತ್ತಿದ್ದಾರೆ. ಅಲ್ಲದೇ ಸಂಸತ್ತು ಪ್ರವೇಶಿಸುತ್ತಿರುವ ಮೊದಲ ಮಹಿಳಾ ಪಕ್ಷೇತರ ಸಂಸದೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ 64 ಮಹಿಳೆಯರು ಆಯ್ಕೆಯಾಗಿದ್ದರೆ, 2009ರಲ್ಲಿ 52 ಮಹಿಳೆಯರು ಸಂಸತ್ತಿಗೆ ಆಯ್ಕೆಯಾಗಿದ್ದರು. ಆದರೆ, 2019ರ 17ನೇ ಅವಧಿಯ ಸಂಸತ್ತಿಗೆ 78 ಮಹಿಳೆಯರು ಆಯ್ಕೆಯಾಗಿದ್ದಾರೆ.
ಈ ಬಾರಿ ಕಾಂಗ್ರೆಸ್‌ನಿಂದ 54 ಮತ್ತು ಬಿಜೆಪಿಯಿಂದ 53 ಸೇರಿದಂತೆ ದೇಶಾದ್ಯಂತ ಒಟ್ಟು 724 ಮಹಿಳೆಯರು ಲೋಕಸಭೆ ಚುನಾವಣೆ ಅಖಾಡಕ್ಕೆ ಇಳಿದಿದ್ದರು.
Categories
Breaking News Sports

ಹೀರೋ ಗೋಲ್ಡ್ ಕಪ್ ಫುಟ್ಬಾಲ್ ವನಿತೆಯರ ಟೂರ್ನಿ : ಭಾರತ vs ಇರಾನ್

ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಇದೇ ತಿಂಗಳಲ್ಲಿ ನಡೆಯಲಿರುವ ಹೀರೋ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ವನಿತೆಯರ ತಂಡ ಮೊದಲ ಪಂದ್ಯದಲ್ಲಿ ಇರಾನ್ ತಂಡವನ್ನು ಎದುರಿಸಲಿದೆ.

ಫೆ.9 ರಿಂದ ಆರಂಭವಾಗಲಿರುವ ನಾಲ್ಕು ದೇಶಗಳ ಫುಟ್ಬಾಲ್ ಟೂರ್ನಿಯಲ್ಲಿ ಭಾರತ, ಇರಾನ್, ಮ್ಯಾನ್ಮಾರ್, ನೇಪಾಳ ತಂಡಗಳು ಭಾಗವಹಿಸಲಿವೆ. ಫಿಫಾ ಶ್ರೇಯಾಂಕದಲ್ಲಿ ಭಾರತ ಮಹಿಳೆಯರ ತಂಡ 62ನೇ ಸ್ಥಾನದಲ್ಲಿದ್ದರೆ, ಮ್ಯಾನ್ಮಾರ್ 44, ಇರಾನ್ 60 ಹಾಗೂ ನೇಪಾಳ ತಂಡ 108ನೇ ಸ್ಥಾನದಲ್ಲಿವೆ.

ಭಾರತ ಫೆ. 9 ರಂದು ಇರಾನ್ ವಿರುದ್ಧ, ಫೆ. 11 ರಂದು ನೇಪಾಳ ವಿರುದ್ಧ, ಫೆ. 13 ರಂದು ಮ್ಯಾನ್ಮಾರ್ ವಿರುದ್ಧ ಕಾದಾಟ ನಡೆಸಲಿದೆ. ಫೆ. 15 ರಂದು ಫೈನಲ್ ಪಂದ್ಯ ನಡೆಯಲಿದೆ.

Categories
Breaking News Small Screen

Bigg Boss 6 : ‘ಹೆಣ್ಣಕ್ಕಿ ಸೇಫ್ ಗಂಡಕ್ಕಿ ಫೇಕ್’ – ಆ್ಯಂಡಿ ಹೇಳಿದ್ದು ನಿಜ ಎಂದ ಧನು

ಬಿಗ್ ಬಾಸ್ ಕನ್ನಡ ಸೀಸನ್ 6 ಆರಂಭವಾದಾಗಿನಿಂದ ಮನೆಯಲ್ಲಿ ಎಲ್ಲರಿಗೂ ಮುಜುಗರ ತಂದಿದ್ದ ಅಕ್ಷ ಮತ್ತು ರಾಕಿ ಸದ್ಯ ವೈರಿಗಳಂತೆ ಕಿತ್ತಾಡುತ್ತಿದ್ದಾರೆ. ಈ ಕಿತ್ತಾಟದಲ್ಲೂ ಸಂಥಿಂಗ್ ಸಂಥಿಂಗ್ ಇದೆ ಅಂತಾರೆ ಬಿಗ್ ಬಾಸ್ ಮನೆ ಮಂದಿ. ಇಷ್ಟು ದಿನ ಬಿಗ್ ಬಾಸ್ ಮನೆಗೆ ಬಂದಿದ್ದ ವೈಲ್ ಕಾರ್ಡ್ ಕಂಟೆಸ್ಟೆಂಟ್ಸ್ ಗಳಿಂದಾಗಿ ಚೇಂಜ್ ಆಗಿದ್ದ ರಾಕಿ ಮತ್ತು ಅಕ್ಷ್ ಮನಸ್ಸು ಮೇಘನಾ, ನಿವೇದಿತಾ, ಜೀವಿತಾ ಹೋದ ಬಳಿಕ ಒಂದಾಗಲು ಬಯಸುತ್ತಿರಬಹುದು ಎನ್ನುವ ಶಂಕೆ ಎಲ್ಲರಲ್ಲೂ ಹುಟ್ಟಿಕೊಂಡಿದೆ.

ಹೀಗಾಗಿ ಅಕ್ಷತಾ ಹಾಗೂ ರಾಕೇಶ್ ನಡುವೆ ಜಗಳ ಶುರುವಾಗಿದೆ. ಕೆಲ ದಿನಗಳಿಂದ ಅವರು ದೂರ ಇದ್ದರೂ ಪದೇ ಪದೇ ಅಕ್ಷತಾ ರಾಕೇಶ್ ನನ್ನ ಕರೆಯೋದು, ಮಾತನಾಡಿಸುವುದು, ಕಾರಣವಿಲ್ಲದ ವಿಚಾರಗಳನ್ನು ಪ್ರಸ್ತಾಪ ಮಾಡುವುದು, ಯಾರೊಟ್ಟಿಗೂ ಬೆರೆಯುವುದನ್ನ ಸಹಿಸದೇ ಇರುವುದನ್ನ ಗಮನಿಸಿದ ಮನೆ ಮಂದಿ ಇವರಿಬ್ಬರಿಗೂ ಅದರಲ್ಲೂ ಅಕ್ಷತಾಳಿಗೆ ಏನೋ ಆಗಿದೆ ಎಂದು ಹೇಳುತ್ತಿದ್ದಾರೆ. ಮುರುಳಿಯವರು ಮನೆಯಿಂದ ಹೊರಹೋಗುವ ಮುನ್ನ ‘ ಅಕ್ಷತಾಗೆ ಮಾನಸಿಕ ತಜ್ಞರ ಅವಶ್ಯಕತೆ ಇದೆ’ ಎಂದು ಹೇಳಿದ್ದರು.

ರಾಕಿ ಮತ್ತು ಅಕ್ಷ್ ಕಿತ್ತಾಡುವಾಗ ಆ್ಯಂಡಿ ಕೂಡ ಸದ್ಯ ಕಿತ್ತಾಡ್ತೀರಾ ಆಮೇಲೆ ಕೈ ಕೈ ಹಿಡ್ಕೊಂಡು ಓಡಾಡ್ಕೊಂಡು ಸಪರೇಟ್ ಆಗಿ ಕುಳಿತು ಮಾತಾಡ್ತೀರಾ ಬಿಡಮ್ಮ ಎಂದಿದ್ದರು. ಇದಕ್ಕೂ ನಾಚಿಕೊಳ್ಳದ ಅಕ್ಷತಾ ಆ್ಯಂಡಿ ಹೇಳಿದ್ದೇ ಸರಿ ಅಂದರು. ಈ ಬೆಳವಣಿಗೆಗಳನ್ನ ನೋಡುತ್ತಿದ್ದ ಮನೆ ಸ್ಪರ್ಧಿ ಧನು ಕೂಡ ಆ್ಯಂಡಿ ಹೇಳಿದ್ದು ನಿಜ. ಇವರಿಬ್ಬರದ್ದು ಇದೇ ಕತೆ.  ‘ಹೆಣ್ಣಕ್ಕಿ ಸೇಫ್ ಗಂಡಕ್ಕಿ ಫೇಕ್’ ೆ ಎನ್ನುವ ಟೈಟಲ್ ಕೊಟ್ಟಿದ್ದಾರೆ.

ಮುಂದಿನ ದಿನಗಳಲ್ಲಿ ಅಕ್ಷ್-ರಾಕಿ ಎಂದಿನಂತೆ ಆಡ್ತಾರಾ..? ಅಥವಾ ಇದೇ ಕಥೆ ಮುಂದುವರೆಸುತ್ತಾರಾ ಎಂದು ಕಾದು ನೋಡಬೇಕಿದೆ.

Categories
Breaking News Cinema Sandalwood

ಮತ್ತೆ ‘ವಿಕ್ಟರಿ’ ಬಾರಿಸಲು ಸೀರೆಯಲ್ಲಿ ಮಿಂಚಿದ ಶರಣ್, ರವಿಶಂಕರ್​.​..!

ಬೆಂಗಳೂರು : ಹಾಸ್ಯ ನಟ ಶರಣ್​  ವಿಕ್ಟರಿ 2 ಸಿನಿಮಾಗಾಗಿ ಮತ್ತೆ ಸೀರೆ ತೊಟ್ಟು ಮಿಂಚುತ್ತಿದ್ದಾರೆ. ರ್ಯಾಂಬೋ -2 ಯಶಸ್ಸಿನಲ್ಲಿರುವ ಶರಣ್​ ಇದೀಗ ವಿಕ್ಟರಿ-2 ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾಗಾಗಿ ಮತ್ತೆ ಮಹಿಳೆಯ ವೇಷದಲ್ಲಿ ಮಿಂಚಿದ್ದಾರೆ.

ಹಾಸ್ಯನಟ ಹಾಗೂ ನಾಯಕ ನಟನಾಗಿರುವ ಶರಣ್​  ಸಿನಿಮಾಗಳೆಲ್ಲಾ ಹಿಟ್​ ಆಗಿದ್ದು, ಅವುಗಳ ಅವತಾರಣಿಕೆಯೂ ಕೂಡ ಬರುತ್ತಿದೆ. ರ್ಯಾಂಬೋ-2 ಸಿನಿಮಾ ಸಕ್ಸಸ್​ ನಂತರ ವಿಕ್ಟರಿ-2 ಸಿನಿಮಾದಲ್ಲಿ ನಟಿಸುತ್ತಿರುವ ಶರಣ್​ಗೆ ರವಿಶಂಕರ್​, ಸಾಧುಕೋಕಿಲ ಹೆಣ್ಣಿನ ವೇಷಧರಿಸಿ ಸಾಥ್​ ನೀಡಿದ್ದಾರೆ.

Categories
Breaking News State

ಹಾಸನ : ಬೋನಿಗೆ ಬಿದ್ದ ಹೆಣ್ಣು ಚಿರತೆ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು..!

ಹಾಸನ : ಬೋನಿಗೆ ಬಿದ್ದ ಹೆಣ್ಣು ಚಿರತೆಯೊಂದು ಬೋನಿಗೆ ಬಿದ್ದಿರುವ ಘಟನೆ ಹಾಸನ ಜಿಲ್ಲೆ ಚನ್ನರಾಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ.      ಶ್ರವಣಬೆಳಗೊಳ ಶ್ರೀಕಂಠನಗರ ಬಡಾವಣೆಯಲ್ಲಿ ಇಟ್ಟಿದ್ದ ಬೋನಿಗೆ ಹೆಣ್ಣು ಚಿರತೆ ರಾತ್ರಿ 11 ಗಂಟೆ ಸಮಯದಲ್ಲಿ ಬಿದ್ದಿದೆ.

ಭಯ ಉಂಟು ಮಾಡಿದ್ದ ಚಿರತೆ ಬೋನಿಗೆ ಬಿದ್ದಿರುವುದು, ಗ್ರಾಮದ ಜನರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳಾದ ವಿಶ್ವನಾಥ್, ಅರಣ್ಯಪಾಲಕ ಕರಿಗೌಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Categories
Breaking News National

ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ತಂದೆಗೆ ಶಾಕ್‌…ಹೆಣ್ಣು ಮಗುವನ್ನು ನೋಡಿದ ಅಪ್ಪ ಮಾಡಿದ್ದೇನು ?

ಅಹಮದಾಬಾದ್‌ : ಸಮಾಜ ಎಷ್ಟೇ ಮುಂದುವರಿದರು ಹೆಣ್ಣಿನ ಮೇಲಿನ ತಿರಸ್ಕಾರ ಭಾವನೆ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಗುಜರಾತ್‌ನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ತಂದೆಯೊಬ್ಬ ತನ್ನ ಆರನೇ ಮಗುವೂ ಹೆಣ್ಣಾಯಿತು ಎಂಬ ಕಾರಣಕ್ಕೆ ನಾಲ್ಕು ದಿನ ಹಸುಗೂಸನ್ನು ಕೊಂದ ಘಟನೆ ನಡೆದಿದೆ.

ಆರೋಪಿ ತಂದೆಯನ್ನು ಮೋತಿ ಮಸಂಗ್ ಗ್ರಾಮದ ವಿಷ್ಣು ರಾಥೋಡ್‌ ಎಂದು ಹೆಸರಿಸಲಾಗಿದೆ. ಆರೋಪಿ ವಿಷ್ಣು ಹಾಗೂ ವಿಮಲಾ ದಂಪತಿಗೆ ಐವರು ಹೆಣ್ಣು ಮಕ್ಕಳಿದ್ದು, ಆರನೇ ಮಗುವೂ ಹೆಣ್ಣಾಗಿತ್ತು. ಆದರೆ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ವಿಷ್ಣು ಹೆಣ್ಣು ಮಗು ಎಂದು ತಿಳಿದು ಪತ್ನಿ ಮಲಗಿದ್ದಾಗ ಮಗುವನ್ನು ಹತ್ಯೆ ಮಾಡಿದ್ದನು. ಈ ಸಂಬಂಧ ವಿಮಲಾ ತಂದೆ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

 

Categories
Breaking News State

ಚಾಮರಾಜನಗರ : ಯಡಿಯಾಲ ಅರಣ್ಯ ವ್ಯಾಪ್ತಿಯಲ್ಲಿ ಹೆಣ್ಣಾನೆ ಅನುಮಾನಾಸ್ಪದ ಸಾವು

ಚಾಮರಾಜನಗರ : ಯಡಿಯಾಲ ಅರಣ್ಯ ವಾಪ್ತಿಯಲ್ಲಿ ಹೆಣ್ಣಾನೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ಕಾಡಂಚಿನ ಗ್ರಾಮ ಚಿಕ್ಕಬರ್ಗಿಯಲ್ಲಿ 35 ವರ್ಷದ ಹೆಣ್ಣಾನೆ ಮೃತ ಪಟ್ಟಿದೆ.

ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಉದ್ಯಾನದ ಯಡಿಯಾ‌ಲ ಅರಣ್ಯ ವ್ಯಾಪ್ತಿಯ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಜಮೀನಿಗೆ ಅಳವಡಿಸಿರುವ ವಿದ್ಯುತ್ ತಂತಿ ಸ್ಪರ್ಶದಿಂದ ಹೆಣ್ಣಾನೆ ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾ‌ರಿಗಳು ಪರಿಶೀಲನೆ ನಡೆಸಿದೆರು.