ಗರ್ಭಿಣಿ ಮಹಿಳೆಗೆ ಪ್ಲಾಸ್ಮಾ ದಾನ ಮಾಡಿ ಎರಡು ಜೀವಗಳನ್ನು ಉಳಿಸಿದ ಸಬ್ ಇನ್ಸ್ಪೆಕ್ಟರ್!
ಕೊರೊನಾ ಸಂದರ್ಭದಲ್ಲಿ ದೆಹಲಿ ಸಬ್ ಇನ್ಸ್ಪೆಕ್ಟರ್ ಗರ್ಭಿಣಿ ಮಹಿಳೆಗೆ ಪ್ಲಾಸ್ಮಾ ದಾನ ಮಾಡಿ ಎರಡು ಜೀವಗಳನ್ನು ಉಳಿಸಿದ್ದಾರೆ.
ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿದ 21 ವಾರಗಳ ಗರ್ಭಿಣಿ ಮಹಿಳೆಗೆ ಪ್ಲಾಸ್ಮಾ ದಾನ ಮಾಡುವ ಮೂಲಕ ದೆಹಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಕಾಶ್ದೀಪ್ ಎರಡು ಜೀವಗಳನ್ನು ಉಳಿಸಿದ್ದಾರೆ.
27 ವರ್ಷದ ಮಹಿಳೆ ದೆಹಲಿಯ ಉತ್ತಮ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ದಿನಗಳಿಂದ ಪತಿ ಪತ್ನಿಗೆ ಪ್ಲಾಸ್ಮಾ ವ್ಯವಸ್ಥೆ ಮಾಡಲು ಪ್ರಯತ್ನಿಸಿದ್ದರೂ ದಾನಿಗಳು ವೈದ್ಯಕೀಯ ಮಾರ್ಗಸೂಚಿಗಳ ಪ್ರಕಾರ ಅಗತ್ಯವಾದ ಮೂಲಭೂತ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಭರವಸೆ ಕಳೆದುಕೊಳ್ಳಲಾರಂಭಿಸಿದ್ದರು.
ಕೊನೆಯ ಪ್ರಯತ್ನದಲ್ಲಿ ಗರ್ಭಿಣಿ ಮಹಿಳೆಗೆ ಪ್ಲಾಸ್ಮಾ ವ್ಯವಸ್ಥೆ ಮಾಡಲು ಸಹಾಯ ಕೋರಿ ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡಿದ್ದಾರೆ. ಈ ವೇಳೆ ದೆಹಲಿ ಪೊಲೀಸರು ಸಹಾಯ ಹಸ್ತ ಚಾಚಿದ್ದಾರೆ. “ಜೀವನ್ ರಕ್ಷಕ್” ಉಪಕ್ರಮದಡಿಯಲ್ಲಿ ಕೆಲಸ ಮಾಡುತ್ತಿರುವ ದೆಹಲಿ ಪೊಲೀಸ್ ಅಧಿಕಾರಿಗಳು ಕುಟುಂಬವನ್ನು ಸಂಪರ್ಕಿಸಿ ಸಹಾಯ ಮಾಡಿದ್ದಾರೆ.
‘ಜೀವನ್ ರಕ್ಷಕ್’ ತಂಡ ಸ್.ಐ. ಆಕಾಶ್ದೀಪ್ ಅವರನ್ನು ಸಂಪರ್ಕಿಸಿದಾಗ ಆಕಾಶ್ದೀಪ್ ತಕ್ಷಣ ತನ್ನ ಪ್ಲಾಸ್ಮಾವನ್ನು ದಾನ ಮಾಡಲು ಒಪ್ಪಿಕೊಂಡು ಮೇ 10 ರಂದು ಆಸ್ಪತ್ರೆಗೆ ತೆರಳಿ ಪ್ಲಾಸ್ಮಾ ನೀಡಿದ್ದಾರೆ.
ತನ್ನ ಪ್ಲಾಸ್ಮಾವನ್ನು ದಾನ ಮಾಡಿದ ನಂತರ, ಆಕಾಶ್ದೀಪ್ ಮಹಿಳೆಯ ಗಂಡನನ್ನು ಭೇಟಿ ಮಾಡಿ ಮಹಿಳೆಯನ್ನು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸಿದರು.
ಕೋವಿಡ್ -19 ಪ್ರಕರಣಗಳಲ್ಲಿನ ಉಲ್ಬಣವನ್ನು ಗಮನದಲ್ಲಿಟ್ಟುಕೊಂಡ ಈ ಸಮಯದಲ್ಲಿ ದೆಹಲಿ ಪೊಲೀಸರು ಪ್ಲಾಸ್ಮಾ ದಾನಿಗಳ ಡಿಜಿಟಲ್ ಡಾಟಾ ಬ್ಯಾಂಕ್ ಅನ್ನು ಸ್ಥಾಪಿಸಿದ್ದಾರೆ.
ದೆಹಲಿ ಪೊಲೀಸರ ಸಾಹಯ ಮತ್ತು ಅವರ ಪ್ರಯತ್ನಗಳಿಗೆ ಕುಟುಂಬ ಮೆಚ್ಚುಗೆ ವ್ಯಕ್ತಪಡಿಸಿದ್ದು ಅವರನ್ನು “ದಿಲ್ ಕಿ ಪೊಲೀಸ್” ಎಂದು ಕರೆದಿದೆ.

