“ಪ್ರತಿದಿನ ಹಸುವಿನ ಮೂತ್ರ ಕುಡಿದರೆ ಕೋವಿಡ್ ಬರಲ್ಲ”: ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್
“ನಾನು ಪ್ರತಿದಿನ ಹಸು ಮೂತ್ರವನ್ನು ಕುಡಿಯುತ್ತೇನೆ, ಆದ್ದರಿಂದ ಕೋವಿಡ್ ಬಂದಿಲ್ಲ ” ಎಂದು ಬಿಜೆಪಿ ಸಂಸದ ಪ್ರಜ್ಞಾ ಠಾಕೂರ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಗೋವಿನ ಮೂತ್ರ ಕೋವಿಡ್‌ನಿಂದ ಉಂಟಾಗುವ ಶ್ವಾಸಕೋಶದ ಸೋಂಕನ್ನು ಗುಣಪಡಿಸುತ್ತದೆ ಎಂದು ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಹೇಳಿದ್ದಾರೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ದೇಶವು ಹೋರಾಡುತ್ತಿರುವಾಗ ಬಿಜೆಪಿ ಸಂಸದೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಅವರು ಪ್ರತಿದಿನ ಹಸುವಿನ ಮೂತ್ರವನ್ನು ತೆಗೆದುಕೊಳ್ಳುತ್ತಾರೆ ಮತ್ತು ಅದು ಅವರನ್ನು ಕರೋನವೈರಸ್ನಿಂದ ರಕ್ಷಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.
“ನಾವು ಪ್ರತಿದಿನ ದೇಸಿ ಗೋ ಮೂತ್ರಾ (ಸ್ಥಳೀಯ ಹಸುವಿನ ಮೂತ್ರ) ಕುಡಿಯುತ್ತೇವೆ. ಅದು ಕೋವಿಡ್‌ನಿಂದ ಶ್ವಾಸಕೋಶದ ಸೋಂಕನ್ನು ಗುಣಪಡಿಸುತ್ತದೆ. ನಾನು ತೀವ್ರ ನೋವಿನಿಂದ ಬಳಲುತ್ತಿದ್ದೇ. ಆದರೆ ನಾನು ಪ್ರತಿದಿನ ಹಸುವಿನ ಮೂತ್ರವನ್ನು ತೆಗೆದುಕೊಳ್ಳುತ್ತೇನೆ. ಆದ್ದರಿಂದ ಈಗ ನಾನು ಯಾವುದೇ ಕರೋನಾ ವಿರುದ್ಧ ಔಷಧಿ ತೆಗೆದುಕೊಳ್ಳಬೇಕಾಗಿಲ್ಲ ಮತ್ತು ನನಗೆ ಕೊರೋನಾ ಇಲ್ಲ “ಪ್ರಜ್ಞಾ ಠಾಕೂರ್ ಅವರು ಪಕ್ಷದ ಕೂಟವನ್ನು ಉದ್ದೇಶಿಸಿ ಮಾತನಾಡುವ ವೇಳೆ ಹೇಳಿದ್ದಾರೆ.
ಮಾತ್ರವಲ್ಲದೇ ಕೇಸರಿ ನಿಲುವಂಗಿಯನ್ನು ಧರಿಸಿ ತನ್ನನ್ನು ಸಂತ ಎಂದು ಕರೆದುಕೊಳ್ಳುವ ಸಂಸದೆ “ಹಸು ಮೂತ್ರ ಜೀವ ರಕ್ಷಕ” ಎಂದು ಹೇಳುತ್ತಾರೆ. ಇಷ್ಟೇ ಅಲ್ಲದೆ ಎರಡು ವರ್ಷಗಳ ಹಿಂದೆ, ಹಸುವಿನ ಮೂತ್ರ ಮತ್ತು ಇತರ ಹಸು ಉತ್ಪನ್ನಗಳ ಮಿಶ್ರಣವು ತನ್ನ ಕ್ಯಾನ್ಸರ್ ಅನ್ನು ಗುಣಪಡಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಕೋವಿಡ್‌ನ ಚಿಕಿತ್ಸೆ ಅಥವಾ ತಡೆಗಟ್ಟುವಿಕೆಗೆ ಗೋವಿನ ಸಗಣಿ ಅಥವಾ ಮೂತ್ರವು ಸಹಾಯ ಮಾಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘ ಹೇಳಿದೆ. ಆದರೂ ಜನಪ್ರತಿನಿಧಿಗಳು ಸುಳ್ಳು ಹೇಳಿಕೆಗಳನ್ನು ಮಾತ್ರ ನಿಲ್ಲಿಸಿಲ್ಲ.
ಈ ತಿಂಗಳ ಆರಂಭದಲ್ಲಿ, ಉತ್ತರ ಪ್ರದೇಶದ ಬಿಜೆಪಿ ಶಾಸಕರಾದ ಸುರೇಂದ್ರ ಸಿಂಗ್ ಅವರು ಹಸುವಿನ ಮೂತ್ರವನ್ನು ಕುಡಿಯುವುದರಿಂದ ಕರೋನವೈರಸ್‌ನಿಂದ ರಕ್ಷಿಸಿಕೊಳ್ಳಬಹುದು ಎಂದು ಹೇಳಿಕೊಂಡಿದ್ದರು. ಅವರು “ಒಂದು ಲೋಟ ತಣ್ಣೀರಿನೊಂದಿಗೆ ಹಸುವಿನ ಮೂತ್ರವನ್ನು”ಕುಡಿಯಲು ಸಲಹೆ ನೀಡಿದ್ದರು.

