ಕೊರೊನಾ ಸಂಕಷ್ಟದಲ್ಲಿ ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ…!
ಕೊರೋನಾ ಕಷ್ಟಕಾಲದಲ್ಲಿ ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಕೊರೊನಾ ಸಮಯದಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸಹಾಯ ಹಸ್ತ ನೀಡುವ ಬದಲು ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಮಾಡಿದೆ ಎಂದು ಜನ ಆಕ್ರೊಶಗೊಂಡಿದ್ದಾರೆ.
ಮೇ ತಿಂಗಳಲ್ಲಿ 13ನೇ ಭಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಲಾಗಿದ್ದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 17 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ಬೆಲೆ 27 ಪೈಸೆ ಹೆಚ್ಚಳ ಮಾಡಲಾಗಿದೆ. ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ -ಡೀಸೆಲ್ ಬೆಲೆ ಹೀಗಿದೆ..
ಬೆಂಗಳೂರಿನಲ್ಲಿ ಪೆಟ್ರೋಲ್ 96.55 ರೂ., ಡೀಸೆಲ್ 89.39 ರೂ. ಭೂಪಾಲ್ ನಲ್ಲಿ ಪೆಟ್ರೋಲ್ 101.52 ರೂ., ಡೀಸೆಲ್ 92.77 ರೂ. ಜೈಪುರದಲ್ಲಿ ಪೆಟ್ರೋಲ್ 99.92 ರೂ., ಡೀಸೆಲ್ 93.05 ರೂ. ಮುಂಬೈನಲ್ಲಿ ಪೆಟ್ರೋಲ್ 99.71 ರೂ., ಡೀಸೆಲ್ 91.57 ರೂ. ಪಾಟ್ನಾದಲ್ಲಿ ಪೆಟ್ರೋಲ್ 95.62 ರೂ., ಡೀಸೆಲ್ 89.58 ರೂ. ಏರಿಕೆಯಾಗಿದೆ.
ಇನ್ನೂ ಚೆನ್ನೈನಲ್ಲಿ ಪೆಟ್ರೋಲ್ 95.06 ರೂ., ಡೀಸೆಲ್ 89.11 ರೂ. ಕೋಲ್ಕತ್ತಾದಲ್ಲಿ ಪೆಟ್ರೋಲ್ 93.49 ರೂ., ಡೀಸೆಲ್ 87.16 ರೂ. ದೆಹಲಿಯಲ್ಲಿ ಪೆಟ್ರೋಲ್ 93.44 ರೂ., ಡೀಸೆಲ್ 84.32 ರೂ. ಲಕ್ನೋದಲ್ಲಿ ಪೆಟ್ರೋಲ್ 91.03 ರೂ., ಡೀಸೆಲ್ 84.71 ರೂ. ರಾಂಚಿಯಲ್ಲಿ ಪೆಟ್ರೋಲ್ 90.23 ರೂ., ಡೀಸೆಲ್ 89.05 ರೂ ಏರಿಕೆಯಾಗಿದೆ.

