ಕೊರೊನಾ 2ನೇ ಅಲೆ ಕಾರಣ; ಮೋದಿ ಜಾಗತಿಕ ಜನಪ್ರಿಯತೆ ಭಾರೀ ಕುಸಿತ!

ಕೊರೊನಾ 2ನೇ ಅಲೆಯಿಂದಾಗಿ ಭಾರತದಲ್ಲಿ ಅಪಾರ ಸಾವು-ನೋವುಗಳು ಕಂಡುಬಂದ ಬಳಿಕ ಪ್ರಧಾನಿ ಮೋದಿ ಅವರ ಜಾಗತಿಕ ಜನಪ್ರಿಯತೆಯಲ್ಲಿ ಭಾರೀ ಕುಸಿತ ಕಂಡು ಬಂದಿದೆ ಎಂದು ವರದಿಯಾಗಿದೆ.

ಅಮೆರಿಕಾದ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, 2ನೇ ಅಲೆಯ ಬಳಿಕ ಮೋದಿ ಅವರ ಜನಪ್ರಿಯತೆ ಕುಸಿದಿದ್ದು, 13 ಜಾಗತಿಕ ಜನಪ್ರಿಯ ನಾಯಕರ ಪಟ್ಟಿಯಿಂದ ಮೋದಿ ಅವರ ಹೆಸರು ಕುಸಿದಿದೆ ಎಂದು ಹೇಳಲಾಗಿದೆ.

ಜೂನ್‌ 29ಕ್ಕೂ ಮುಂಚೆ ಮೋದಿಯವರು ಹೊಂದಿದ್ದ ಸ್ಥಾನವು 2ನೇ ಅಲೆಯ ಬಳಿಕ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುವೆಲ್ ಲೋಪೆಝ್ ಒಬ್ರಡೊರ್ ಅವರ ಪಾಲಾಗಿದೆ ಎಂದು ಸಮೀಕ್ಷೆ ಹೇಳಿದೆ.

ಭಾರತದಲ್ಲಿ ಉಲ್ಬಣಗೊಂಡ ಬಳಿಕ ಕೋವಿಡ್‌ ನಿರ್ವಹಣೆಯಲ್ಲಿ ಮೋದಿಯವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿದ್ದು, ಮೋದಿ ಅವರ ಅಪ್ರೂವಲ್ ರೇಟಿಂಗ್ (ಉತ್ತಮ ನಾಯಕರೆಂದು ಒಪ್ಪುವ ಜನರ ಪ್ರಮಾಣ) ಮಾರ್ಚ್ ಅಂತ್ಯದ ವೇಳೆಗೆ ಶೇ. 14ರಷ್ಟು ಕಡಿಮೆಯಾಗಿತ್ತು. ಅದು 2020ರ ಮೇ ಇಂದ 2021 ಜೂನ್‌ ಮಧ್ಯದಲ್ಲಿ ಶೇ. 34ರಷ್ಟು ಕಡಿಮೆಯಾಗಿದೆ.

ಕೋವಿಡ್ ಸಾಂಕ್ರಾಮಿಕದಿಂದ ಹಲವು ಜಾಗತಿಕ ನಾಯಕರ ಅಪ್ರೂವಲ್ ರೇಟಿಂಗ್‍ಗಳು ಕಡಿಮೆಯಾಗಿದೆ. ಮಾರ್ಚ್ ಹಾಗೂ ಜೂನ್ ನಡುವೆ 13 ಜಾಗತಿಕ ನಾಯಕರ ಪೈಕಿ ಕೇವಲ ಐದು ನಾಯಕರ ರೇಟಿಂಗ್ ಮಾತ್ರ ಏರಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಏರಿಕೆಯಾದವರ ಪೈಕಿ, ಜರ್ಮನಿಯ ಏಂಜೆಲಾ ಮರ್ಕೆಲ್ ಅವರ ರೇಟಿಂಗ್ ಶೇ. 11ರಷ್ಟು ಏರಿಕೆ ಕಂಡಿದೆ.

ಮೋದಿ ಮಾತ್ರವಲ್ಲದೆ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರಾನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿಡೆ ಸುಗ ಅವರ ರೇಟಿಂಗ್ ಕೂಡ ಕ್ರಮವಾಗಿ ಶೇ. 6 ಹಾಗೂ ಶೇ. 9ರಷ್ಟು ಕಡಿಮೆಯಾಗಿದೆ. ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಹಾಗೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಅಪ್ರೂವಲ್ ರೇಟಿಂಗ್ ಶೇ. 4ರಷ್ಟು ಕಡಿಮೆಯಾಗಿದೆ.

ಇದನ್ನೂ ಓದಿ: ಕುರ್ಚಿ ಉಳಿಸಿಕೊಳ್ಳಲು ಮೋದಿ ಓಲೈಕೆಗಿಳಿದ ಬಿಎಸ್‌ವೈ; ಹರಿಯಿತು ಹಿಂದಿ ಜಾಹೀರಾತಿಗೆ ಕೋಟ್ಯಾಂತರ ಹಣ: ಎಎಪಿ ಆರೋಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights