ಹೃದಯಾಘತದಿಂದ ಹಿರಿಯ ನಟಿ ಸುರೇಖಾ ಸಿಕ್ರಿ ನಿಧನ..!
ಬಾಲಿವುಡ್ ನ ಹಿರಿಯ ನಟಿ ಸುರೇಖಾ ಸಿಕ್ರಿ ಹೃದಯ ಸ್ತಂಭನದಿಂದ ಇಂದು ಮುಂಬೈನಲ್ಲಿ ಕೊನೆಯುಸಿರೆಳೆದರು.
ಹಿರಿಯ ನಟಿ ಸುರೇಖಾ ಸಿಕ್ರಿ (75) ಕೆಲ ದಿನಗಳಿಂದ ಆರೋಗ್ಯ ಆರುಪೇರಾದ ಬೆನ್ನಲ್ಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ವರ್ಷ ಮಿದುಳಿನ ಸಮಸ್ಯೆ ಹಾಗೂ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಇಂದು ಬೆಳಿಗ್ಗೆ ಹೃದಯ ಸ್ತಂಭನದಿಂದಾಗಿ ಅವರು ನಿಧನರಾದರು ಎಂದು ನಟಿಯ ಸಂಬಂಧಿಕರು ಘೋಷಿಸಿದ್ದಾರೆ.
ಸುರೇಖಾ ಸಿಕ್ರಿ ಅವರು 1978 ರಲ್ಲಿ ‘ಕಿಸ್ಸಾ ಕುರ್ಸಿ ಕಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಹೇಮಂತ್ ರೆಗೆ ಅವರನ್ನು ಮದುವೆಯಾದರು. ಅವರಿಗೆ ರಾಹುಲ್ ಸಿಕ್ರಿ ಎಂಬ ಮಗನಿದ್ದಾನೆ.
ಅವರು ಬಾಲಿಕಾ ವಧು, ಚಲನಚಿತ್ರ ಬಾದೈ ಹೋ, ಏಕ್ ಥಾ ರಾಜ ಏಕ್ ಥಿ ರಾಣಿ, ಪಾರ್ಡೆಸ್ ಮೇ ಹೈ ಮೇರಾ ದಿಲ್, ಇಂದುಮತಿ ಲಾಲಾ ಮೆಹ್ರಾ, ಮಹಾ ಕುಂಭ: ಏಕ್ ರಹಸಾಯ, ಏಕ್ ಕಹಾನಿ, ಸಾತ್ ಫಾರೆ – ಸಲೋನಿ ಕಾ ಸಫರ್, ಬನೇಗಿ ಅಪ್ನಿ ಬಾತ್, ಕೇಸರ್, ಕೆಕೆನಾ ಹೈ ಕುಚ್ ಮುಜ್ಕೊ, ಸಾಹರ್, ಸಮಯ್, ಸಿಐಡಿ ಮತ್ತು ಜಸ್ಟ್ ಮೊಹಬ್ಬತ್ ಚಿತ್ರದಲ್ಲಿ ನಟಿಸಿದ್ದಾರೆ. ನಟಿ ಸುರೇಖಾ ಸಿಕ್ರಿ ಅವರಿಗೆ ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

