ಬೇಬಿ ಬೆಟ್ಟದಲ್ಲಿ ಸ್ಪೋಟಕ ಪತ್ತೆ : ಆತಂಕಗೊಂಡ ಜನರು..!

ಕೆಲ ದಿನಗಳ ಹಿಂದೆ ತಾರಕಕ್ಕೇರಿದ್ದ ಗಣಿ ವಿವಾದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆ ಬೇಬಿ ಬೆಟ್ಟದಲ್ಲಿ ಸ್ಪೋಟಕ ಪತ್ತೆಯಾಗಿದೆ.

ಮಂಡ್ಯದ ಜಿಲ್ಲೆಯ ಬೇಬಿ ಬೆಟ್ಟದ ಗಣಿ ಪ್ರದೇಶದ ಬನ್ನಂಗಾಡಿ ಗ್ರಾಮದ ಸರ್ವೇ ನಂಬರ್ 24ರ ಗೋಮಾಳ ಪ್ರದೇಶದಲ್ಲಿ ಸ್ಪೋಟಕ ಪತ್ತೆಯಾಗಿದೆ.

ಬೇಬಿ ಬೆಟ್ಟದಲ್ಲಿ ಜಾನುವಾರಗಳನ್ನು ಮೇಯಿಸುತ್ತಿದ್ದ ರೈತರಿಗೆ ಈ ಸ್ಪೋಟಕ ಕಂಡುಬಂದಿದ್ದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದಾಗಿ ಕೆಆರ್ಎಸ್ ಬಿರುಕು ಬಿಟ್ಟಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಬೇಬಿ ಬೆಟ್ಟದ ವಿವಿಧಡೆ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಗಣಿಕಾರಿಗೆ ನಿಲ್ಲಿಸುವಂತೆ ಎಚ್ಚರಿಕೆ ನೀಡದ್ದರು.

ಈ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದಲೂ ನಿಷ್ಕ್ರಿಯ ದಳ ಸ್ಪೋಟಕ ಪತ್ತೆ ಕಾರ್ಯಚರಣೆಯನ್ನು ನಡೆಸುತ್ತಿದೆ. ಆದರೆ ಈ ಕಾರ್ಯಾಚರಣೆಯಲ್ಲಿ ಸ್ಪೋಟಕಗಳು ಪತ್ತೆಯಾಗಿರಲಿಲ್ಲ. ಕೆಲ ದಿನಗಳ ನಂತರ ರೈತರ ಕಣ್ಣಿಗೆ ಈ ಸ್ಪೋಟಕಗಳು ಬಿದ್ದಿರುವುದು ಆಶ್ಚರ್ಯ ಮೂಡಿಸಿದೆ. ಹೀಗಾಗಿ ಸಿಬ್ಬಂದಿಗಳು ಸರಿಯಾದ ರೀತಿ ಕಾರ್ಯಾಚರಣೆ ಮಾಡಿಲ್ಲವೆಂದು ಇಲ್ಲಿನ ರೈತರು ಆರೋಪಿಸಿದ್ದಾರೆ.

ಸಂಸದೆ ಸುಮಲತಾ ಇಲ್ಲಿ ಗಣಿಗಾರಿಕೆ ನಿಲ್ಲಿಸುವಂತೆ ಮನವಿ ಕೂಡ ಮಾಡಿದ್ದರು. ಆದರೂ ಸ್ಪೋಟಕ ಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ. ಇಷ್ಟೆಲ್ಲಾ ಎಚ್ಚರಿಕೆ ಬಳಿಕವೂ ಇಲ್ಲಿ ಸ್ಪೋಟಕ ಇಟ್ಟವರು ಯಾರು..? ಎಲ್ಲಿಂದ ತರಲಾಗಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights