ಶಾಲಾ ಮಕ್ಕಳಿಗೆ ಮಧ್ಯಹ್ನದ ಊಟದಲ್ಲಿ ‘ಫಾರ್ಟಿಫಿಲ್ಡ್‌’ ಅಕ್ಕಿ ಬಳಕೆಗೆ ಕೇಂದ್ರ ನಿರ್ದೇಶನ!

ಸಾಕಷ್ಟು ದಾಸ್ತಾನುಗಳಿದ್ದರೂ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಸಾರವರ್ಧಿತ (ಫಾರ್ಟಿಫಿಲ್ಡ್‌) ಅಕ್ಕಿಯ ಬಳಕೆಯನ್ನು ಕಡಿಮೆ ಮಾಡಿರುವ ಬಗ್ಗೆ ಕೇಂದ್ರವು ಅಸಮಾಧಾನ ವ್ಯಕ್ತಪಡಿಸಿದ್ದು,  ಸಾರವರ್ಧಿತ ಅಕ್ಕಿಯ ಬಳಕೆಯನ್ನು ತ್ವರಿತವಾಗಿ ಹೆಚ್ಚಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರ ಶಿಕ್ಷಣ ಸಚಿವಾಲಯವು ಅಕ್ಟೋಬರ್ 20 ರಂದು ಈ ವಿಷಯದ ಕುರಿತು ರಾಜ್ಯಗಳಿಗೆ ಪತ್ರ ಬರೆದಿದೆ. ಪತ್ರದಲ್ಲಿ, “ಪ್ರಧಾನ ಮಂತ್ರಿಗಳು ನಿಗದಿಪಡಿಸಿದ ಗುರಿಯನ್ನು ಗಮನದಲ್ಲಿಟ್ಟುಕೊಂಡು, ಸಾರವರ್ಧಿತ ಅಕ್ಕಿ ದಾಸ್ತಾನು ಬಳಕೆಯನ್ನು ತ್ವರಿತಗೊಳಿಸಬೇಕು” ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಂಟಿ ಕಾರ್ಯದರ್ಶಿ ಆರ್‌ಸಿ ಮೀನಾ ಅವರು ರಾಜ್ಯ ಶಿಕ್ಷಣ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.

ಮಧ್ಯಾಹ್ನದ ಊಟದ ಯೋಜನೆಯನ್ನು ಸೆಪ್ಟೆಂಬರ್‌ನಲ್ಲಿ ಪಿಎಂ ಪೋಶನ್ ಎಂದು ಮರುನಾಮಕರಣ ಮಾಡಲಾಗಿದೆ. ಈ ವರ್ಷದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು 2024 ರ ವೇಳೆಗೆ ಪಡಿತರ ಯೋಜನೆ ಮತ್ತು ಮಧ್ಯಾಹ್ನದ ಊಟ ಯೋಜನೆ ಮತ್ತು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಅಡಿಯಲ್ಲಿ ಸಾರೀಕೃತ ಅಕ್ಕಿಯನ್ನು ಮಾತ್ರವೇ ವಿತರಿಸಲಾಗುವುದು ಎಂದು ಘೋಷಿಸಿದ್ದರು.

“ಬಡ ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಅಗತ್ಯ ಪೋಷಕಾಂಶಗಳ ಕೊರತೆಯು ಕಂಡುಬರುತ್ತಿದೆ. ಇದು ಅವರ ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಗೆ ಪ್ರಮುಖ ಅಡೆತಡೆಗಳನ್ನು ಒಡ್ಡುತ್ತದೆ…” ಎಂದು ಪ್ರಧಾನಿ ಹೇಳಿದ್ದರು.

ಸರ್ಕಾರದ ದಾಖಲೆಗಳ ಪ್ರಕಾರ, ಪಿಎಂ ಪೋಶನ್ ಮತ್ತು ಐಸಿಡಿಎಸ್ ಯೋಜನೆಗಳ ಅಡಿಯಲ್ಲಿ ಕ್ರಮವಾಗಿ 1.05 ಮತ್ತು 6.36 ಎಲ್ಎಂಟಿ (ಲಕ್ಷ ಮೆಟ್ರಿಕ್ ಟನ್) ಸಾರವರ್ಧಿತ ಅಕ್ಕಿಯನ್ನು ಹಂಚಿಕೆ ಮಾಡಲಾಗಿದೆ. ಆದರೆ ಇದುವರೆಗೆ ಕ್ರಮವಾಗಿ 0.57 ಎಲ್‌ಎಂಟಿ ಮತ್ತು 2.09 ಎಲ್‌ಎಂಟಿ ಮಾತ್ರ ರಾಜ್ಯಗಳಿಂದ ಬಳಲ್ಪಟ್ಟಿವೆ. PM ಪೋಶನ್ ಅಡಿಯಲ್ಲಿ ಅಕ್ಟೋಬರ್-ಮಾರ್ಚ್ ಅವಧಿಯಲ್ಲಿ ಒಟ್ಟು 13.9 LMT ಅಕ್ಕಿಯ ಹಂಚಿಕೆಯಾಗಿದೆ.

“ಸಾಕಷ್ಟು ಪ್ರಮಾಣದಲ್ಲಿ ಸಾರವರ್ಧಿತ ಅಕ್ಕಿ ಲಭ್ಯವಿದ್ದರೂ” ಶಿಕ್ಷಣ ಸಚಿವಾಲಯದ ನಿರ್ದೇಶನಗಳ ಕೊರತೆಯಿಂದಾಗಿ ರಾಜ್ಯಗಳು ತಮ್ಮ ಪಾಲನ್ನು ಬಳಸುತ್ತಿಲ್ಲ ಎಂದು FCI ಕೇಂದ್ರಕ್ಕೆ ತಿಳಿಸಿದೆ.

ಇದನ್ನೂ ಓದಿ: ಕಚೇರಿ ಆವರಣದಲ್ಲಿ ಯಾವುದೇ ಪೂಜಾ ಸ್ಥಳಿಗಳಿಗೆ ನಿರ್ಬಂಧ; ಪೊಲೀಸರ ನಡೆಗೆ ಬಿಜೆಪಿ ಆಕ್ರೋಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights