BJPಯ ‘ಲವ್‌ ಜಿಹಾದ್’‌ ಕಾನೂನಿಗೆ ಬಿಹಾರದಲ್ಲಿ JDU ಬೆಂಬಲವಿಲ್ಲ: ಕೆಸಿ ತ್ಯಾಗಿ

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ವಿವಾಹದ ಉದ್ದೇಶಕ್ಕೆ ನಡೆಯುವ ಮತಾಂತರಗಳ ವಿರುದ್ಧ ಕಾನೂನುಗಳಿಗೆ ಬಿಹಾರದಲ್ಲಿ ಬೆಂಬಲ ನೀಡುವುದಿಲ್ಲ ಎಂದು ಬಿಜೆಪಿಯ ಮಿತ್ರ ಪಕ್ಷವಾದ ಜೆಡಿಯು ಹೇಳಿದೆ.

ಲವ್‌ ಜಿಹಾದ್‌ ಕಾನೂನುಗಳಿಗೆ ನಾವು ಬೆಂಬಲ ನೀಡುವುದಿಲ್ಲ. ಇಂತಹ ಕಾನೂನುಗಳು ಸಮಾಜದಲ್ಲಿ ದ್ವೇಷದ ಭಾವನೆ ಬಿತ್ತುವುದಲ್ಲದೆ ಸಮಾಜದ ವಿಭಜನೆಗೂ ಕಾರಣವಾಗುತ್ತದೆ ಎಂದು ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ ಹೇಳಿದ್ದಾರೆ.

”ಲವ್ ಜಿಹಾದ್ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷದ ವಾತಾವರಣ ಸೃಷ್ಟಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

”ಇಬ್ಬರು ವಯಸ್ಕ ವ್ಯಕ್ತಿಗಳಿಗೆ ತಮ್ಮ ಜೀವನ ಸಂಗಾತಿಗಳನ್ನು ಅವರ ಜಾತಿ, ಧರ್ಮ ಹಾಗೂ ಪ್ರಾಂತ್ಯವನ್ನು ಲೆಕ್ಕಿಸದೆ ಆಯ್ಕೆ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆ, ಡಾ ರಾಮ ಮನೋಹರ್ ಲೋಹಿಯಾ ಅವರ ಕಾಲದಿಂದಲೂ ಸಮಾಜವಾದಿಗಳು ಇಂತಹ ಹಕ್ಕುಗಳನ್ನು ಎತ್ತಿ ಹಿಡಿಯುತ್ತಾ ಬಂದಿದ್ದಾರೆ,” ಎಂದು ತ್ಯಾಗಿ ಹೇಳಿದ್ದಾರೆ.


ಇದನ್ನೂ ಓದಿ: ರಾಷ್ಟ್ರವನ್ನು ವಿಭಜಿಸಲು ಬಿಜೆಪಿ ಹುಟ್ಟುಹಾಕಿದ ಪದ “ಲವ್ ಜಿಹಾದ್”: ಅಶೋಕ್ ಗೆಹ್ಲೋಟ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights