ಮೇಧಾವಿಯೊಬ್ಬರು ಹೆಣ್ಣು ಮಕ್ಕಳಿಗೆ ಸಲಹೆ ಕೊಟ್ಟಿದ್ದನ್ನು ನೋಡಲು ಸದನಕ್ಕೆ ಹೋಗಬೇಕಾ: ಹೆಚ್‌ಡಿಕೆ

ಮೇಧಾವಿ ಪಂಡಿತರೊಬ್ಬರು ಹೆಣ್ಣು ಮಕ್ಕಳಿಗೆ ಸಲಹೆ ಕೊಟ್ಟಿದ್ದನ್ನು ನೋಡಲು ಮತ್ತು ಟಿಎ-ಡಿಎ ಪಡೆದುಕೊಳ್ಳಲು ಸದನಕ್ಕೆ ಹೋಗಬೇಕಾ ಎಂದು ಮಾಜಿ ಸಿಎಂ ಹೆಚ್‌ಡಿಕೆ ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಹೆಚ್‌ಡಿ ಕುಮಾರಸ್ವಾಮಿಯವರು ಹಾಜರಾಗಿರಲಿಲ್ಲ. ತಮ್ಮ ಗೈರು ಹಾಜರಿಯ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು ಸದನದಲ್ಲಿ ಏನು ಚರ್ಚೆಯಾಗುತ್ತಿದೆ. ಕೇವಲ ಟಿಎ-ಡಿಎ ಪಡೆದುಕೊಳ್ಳಲು ಸದನಕ್ಕೆ ಹೋಗಲಾ ಎಂದಿದ್ದಾರೆ.

ಕಳೆದ ಐದು ದಿನಗಳ ಅಧಿವೇಶನದಲ್ಲಿ ಏನು ಚರ್ಚೆಯಾಗಿದೆ. ಒಂದು ದಿನ ಭೈರತಿ ಬಸವರಾಜ್ ವಿರುದ್ಧ ಪ್ರತಿಭಟನೆ ಮಾಡಿದರು. ಇನ್ನೊಂದು ದಿನ ತಹಶೀಲ್ದಾರರ ವಿರುದ್ಧ ಪ್ರತಿಭಟನೆ ಮಾಡಿದರು.

ಅಲ್ಲದೆ, ಮೇಧಾವಿ ಪಂಡಿತರೊಬ್ಬರು (ರಮೇಶ್ ಕುಮಾರ್) ಸದನದಲ್ಲಿ ಹೆಣ್ಣು ಮಕ್ಕಳಿಗೆ ಸಲಹೆ ನೀಡಿದರು. ಇದನ್ನೆಲ್ಲಾ ನೋಡಲು ಅಧಿವೇಶನಕ್ಕೆ ಹೋಗಬೇಕಿತ್ತಾ ಎಂದು ಅವರು ಹೇಳಿದ್ದಾರೆ.

ಸದನಕ್ಕೆ ಹೋಗಿ ನಾನು ಏನು ಮಾಡಲಿ? ಸದನದಲ್ಲಿ ರಾಜ್ಯದ ಸಮಸ್ಯೆ ಬಗ್ಗೆ ಎಷ್ಟು ಚರ್ಚೆ ಆಯ್ತು? ಇದರಿಂದ ಏನು ಸಾಧನೆ ಆಯ್ತು. ಸಮಯ ಸಿಕ್ಕರೆ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಚುನಾವಣಾ ಕಾನೂನು (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಮಂಡನೆ: ವಿಪಕ್ಷಗಳ ವಿರೋಧದ ನಡುವೆಯೂ ಅಂಗೀಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights