ಫ್ಯಾಕ್ಟ್‌ಚೆಕ್ : ಚರಂಡಿಗೆ ಬಿದ್ದು ವ್ಯಕ್ತಿ ನಾಪತ್ತೆ! ಅಸಲೀಯತ್ತೇನು?

ಮಳೆ ಮಳೆ ಮಳೆ.. ಎಲ್ಲಿ ನೋಡಿದರೂ ಮಳೆ, ಈ ಬಾರಿಯ ಮುಂಗಾರು ಲೇಟಾಗಿ ಬಂದ್ರೂ, ಲೇಟೆಸ್ಟಾಗಿ ಬಂದಿದೆ. ಮಳೆಯಿಂದಾಗಿ ಎಲ್ಲಡೆ ಜನಜೀವನ ಅಸ್ತವ್ಯಸ್ತಗೊಂಡಿದೆ, ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ಎದುರಾಗಿದೆ. ಕೆಲವೆಡೆ ಜೀವಹಾನಿಯಾಗಿರುವ ವರದಿಯಾಗಿವೆ. ಅಂತಹದ್ದೆ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. “ಮಳೆಯಲ್ಲಿ ಛತ್ರಿ ಹಿಡಿದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ನೀರಿನ ಹೊಂಡಕ್ಕೆ ಬಿದ್ದು ನಾಪತ್ತೆಯಾಗಿದ್ದಾರೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಘಟನೆಯ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

https://twitter.com/ganeshbandla/status/1546749371420590082

ಫ್ಯಾಕ್ಟ್‌ಚೆಕ್ :

ಕೆಲವು ವೀಡಿಯೊ ಫ್ರೇಮ್‌ಗಳನ್ನು ಬಳಸಿಕೊಂಡು,  ಗೂಗಲ್  ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, Instagram ಖಾತೆಗೆ ನಲ್ಲಿ ಅದೇ ವಿಡಿಯೊ ಲಭ್ಯವಾಗಿದೆ. ಇದು Faisal_VFX ಎಂಬ ಹೆಸರಿನ Instagram ಬಳಕೆದಾರರ ಖಾತೆಯಾಗಿದ್ದು, ಅವರು 08 ಸೆಪ್ಟೆಂಬರ್ 2020 ರಂದು ತಮ್ಮ Insta ಖಾತೆಯಲ್ಲಿ ಮೂಲ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ಮಳೆ ಬಂದಾಗ ರಸ್ತೆಯಲ್ಲಿ ನಡೆದಾಡುವಾಗ ಜಾಗೃತರಾಗಿರಿ, ಯಾಕೆಂದರೆ ನೀವೂ ರಸ್ತೆಗಿಳಿದರೆ ಕಾಣೆಯಾಗಬಹುದು. ಎಂಬ ಒಕ್ಕಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವಿಡಿಯೊ ಜನರನ್ನು ಎಚ್ಚರಿಸಲು ಮಾಡಲಾಗಿರುವ ವಿಡಿಯೊ ಎಂದು ತಿಳಿಸಿದ್ದಾರೆ. ಫೈಸಲ್ ಒಬ್ಬ ವೀಡಿಯೋ ಡಿಸೈನರ್‌ ಆಗಿದ್ದು, ಅವರು ತಮ್ಮ Instagram ಪೇಜ್‌ ಮತ್ತು ಯೂಟ್ಯೂಬ್ ಚಾನೆಲ್‌ಗಾಗಿ ಇಂತಹ ಅನೇಕ VFX ವೀಡಿಯೊಗಳನ್ನು ರಚಿಸಿದ್ದಾರೆ.


ವೀಡಿಯೊ ರಚನೆಯಲ್ಲಿ VFX ಅಂಶಗಳನ್ನು ಒಳಗೊಂಡಿದೆ.

  •  ವ್ಯಕ್ತಿಯು ನಡೆದುಕೊಂಡು ಬರುವಾಗಿನ ಸ್ಟಿಲ್‌ಗಳು ಆತನ ಕೈಯಿಂದ ಛತ್ರಿ ಬಿದ್ದ ನಂತರ 3:00 ಕ್ಕೆ ವೀಡಿಯೊದ ಫ್ರೇಮ್ ಟು-ಫ್ರೇಮ್  ಅವನು ಸಂಪೂರ್ಣವಾಗಿ ನೀರಿನಲ್ಲಿ ಮುಳುಗುವವರೆಗೆ ಒಂದೇ  ಸ್ಟಿಲ್  ಅನಿಮೇಟೆಡ್ ಆಗಿರುವುದನ್ನು ಕಂಡುಬರುತ್ತದೆ.  ವಿಡಿಯೊ ಫ್ರೇಮ್‌ಅನ್ನು ಗಮನಿಸಿದರೆ, ಅವನ ಬಲಗೈ ಕೊನೆಯವರೆಗೂ ಅದೇ ಸ್ಥಿತಿಯಲ್ಲಿರುತ್ತದೆ.

  • ವೀಡಿಯೊದಲ್ಲಿ, ವ್ಯಕ್ತಿಯು ತಾನಾಗಿಯೇ ಛತ್ರಿಯನ್ನು ಕೈಬಿಡುವುದು ಕಾಣುತ್ತದೆ.
  •  ಮತ್ತೊಂದು ಪ್ರಶ್ನೆಯೆಂದರೆ ವಿಡಿಯೊ ಚಿತ್ರೀಕರಿಸುತ್ತಿರುವ ಕ್ಯಾಮರಾಮೆನ್ ಯಾಕೆ ಗುಂಡಿಯಲ್ಲಿ ಬೀಳುತ್ತಿರುವ ವ್ಯಕ್ತಿಗೆ ಸಹಾಯ ಮಾಡಲು ಪ್ರಯತ್ನಿಸುವುದಿಲ್ಲ?  ಹುಡುಗನು ಹೊಂಡಕ್ಕೆ ಬಿದ್ದ ನಂತರವೂ  13 ಸೆಕೆಂಡುಗಳ ಕಾಲ ವಿಡಿಯೊ ಮುಂದುವರೆದಿದೆ ಅಂದತರ ಇದು ಡಿಜಿಟಲ್ ಎಡಿಟೆಡ್ ಎಂದು ಅಂದಾಜಿಸಬಹುದು.

2020 ರಿಂದ, ಫೈಸಲ್ ಅವರ ಸ್ಕ್ರಿಪ್ಟೆಡ್ ಮತ್ತು ಅನಿಮೇಟೆಡ್ ವೀಡಿಯೊವನ್ನು ವಿವಿಧ ಯೂಟ್ಯೂಬ್ ಚಾನೆಲ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ ಮತ್ತು ಇದನ್ನು ಸಾಮಾನ್ಯವಾಗಿ ಮಾನ್ಸೂನ್ ಸಮಯದಲ್ಲಿ ಜನರಿಗೆ ಎಚ್ಚರಿಕೆ ನೀಡಲು ಹಂಚಿಕೊಳ್ಳಲಾಗುತ್ತಿದೆ. ಆ ವೀಡಿಯೊಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ವ್ಯಕ್ತಿಯೊಬ್ಬ ನೀರಿನ ಹೊಂಡಕ್ಕೆ ಬಿದ್ದು ನಾಪತ್ತೆಯಾದ ವಿಡಿಯೊವನ್ನು ನೈಜ ಘಟನೆ ಎಂದು ಹಂಚಿಕೊಳ್ಳಲಾಗಿದೆ ಆದರೆ ಇದು ಎಡಿಟ್ ಮಾಡಿರುವ ವಿಡಿಯೊ ಆಗಿದ್ದು. ಇದು ಇಂಡೋನೇಷಿಯಾದ VFX ಕಲಾವಿದ ಫೈಸಲ್ ಎಂಬ ವಿಡಿಯೊ ಎಡಿಟರ್ ರಚಿಸಿದ್ದಾನೆ. ಅಂತಹ ಸ್ಕ್ರಿಪ್ಟ್ ಮಾಡಿದ VFX ವೀಡಿಯೊಗಳನ್ನು ಫೈಸಲ್ ತಮ್ಮ Instagram ಖಾತೆ @faisal_vfx ಗೆ ಅಪ್‌ಲೋಡ್ ಮಾಡುತ್ತಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ದೈತ್ಯಾಕಾರದ ಮಾನವನ ಅಸ್ಥಿಪಂಜರ ಪತ್ತೆ! ವಾಸ್ತವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights