ಫ್ಯಾಕ್ಟ್‌ಚೆಕ್ : ರಾಹುಲ್ ತಮ್ಮ ಅಧಿಕೃತ ನಿವಾಸದಿಂದ ನಿರ್ಗಮಿಸುವಾಗ ಸಿಬ್ಬಂದಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಸುಳ್ಳು ಟ್ವೀಟ್ ಮಾಡಿದ BJP

ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೆ ಸಂಬಂಧಿಸಿದಂತೆ ಸೂರತ್ ನ್ಯಾಯಾಲಯದಲ್ಲಿ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೆಂಟ್ರಲ್ ದಿಲ್ಲಿಯಲ್ಲಿನ ತಮ್ಮ ಅಧಿಕೃತ ನಿವಾಸವನ್ನು ಇತ್ತೀಚೆಗೆ ಖಾಲಿ ಮಾಡಿದ್ದರು. ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ಅವರಿಗೆ ನೀಡಲಾಗಿದ  ನಿವಾಸದಿಂದ ಅಧಿಕೃತ ನಿರ್ಗಮಿಸಿದ್ದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಅಧಿಕೃತ ನಿವಾಸದಿಂದ ನಿರ್ಗಮಿಸುವ ಸಂದರ್ಭದಲ್ಲಿ ಮನೆಯ ಸಹಾಯಕ ಸಿಬ್ಬಂದಿಗೆ ಹಸ್ತಲಾಘವ ಮಾಡಿದ ವಿಡಿಯೋವನ್ನು BJP ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಹಂಚಿಕೊಂಡಿದ್ದಾರೆ.  ಮನೆಯ ಸಹಾಯಕ ಸಿಬ್ಬಂದಿಗೆ ಹಸ್ತಲಾಘವ ಮಾಡಿದ ನಂತರ ರಾಹುಲ್ ಗಾಂಧಿ ತಮ್ಮ ಪ್ಯಾಂಟ್‌ಗೆ ಕೈ ವರೆಸಿಕೊಂಡಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

“ಈ ಪುರುಷ/ಮಹಿಳಾ ಸಿಬ್ಬಂದಿಗಳು ಇಷ್ಟು ವರ್ಷಗಳ ಕಾಲ ಸಲ್ಲಿಸಿರುವ ಸೇವೆಗೆ ಅವಮಾನ (ತಿರಸ್ಕರಿಸಿದ್ದಾರೆ) ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ ಮಾಡಿದ್ದಾರೆ” ಹಾಗಿದ್ದರೆ ರಾಹುಲ್ ಗಾಂಧಿ ಸಂಸದರ ನಿವಾಸದಿಂದ ಹೊರಬರುವಾಗ ಸಿಬ್ಬಂದಿಗೆ ಅವಮಾನ ಆಗುವಂತೆ ನಡೆದುಕೊಂಡಿದ್ದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಅನರ್ಹಗೊಂಡ ಸಂಸದರು ಸರ್ಕಾರಿ ವಸತಿ ಸೌಲಭ್ಯ ಪಡೆಯಲು ಅನರ್ಹರಾಗಿರುತ್ತಾರೆ. ಹಾಗೆಯೇ ಅವರ ಅನರ್ಹತೆ ಅಸ್ತಿತ್ವಕ್ಕೆ ಬಂದ ಒಂದು ತಿಂಗಳಲ್ಲಿ ಅಧಿಕೃತ ನಿವಾಸವನ್ನು ಖಾಲಿ ಮಾಡಬೇಕಾಗುತ್ತದೆ. 2005ರಿಂದಲೂ ರಾಹುಲ್ ಗಾಂಧಿ ಅವರು ನೆಲೆಸಿದ್ದ 12 ತುಘಲಕ್ ಲೇನ್ ಬಂಗಲೆಯನ್ನು ಏಪ್ರಿಲ್ 22ರ ವೇಳೆಗೆ ತೆರವುಗೊಳಿಸುವಂತೆ ಬಿಜೆಪಿ ಸಂಸದ ಸಿಆರ್ ಪಾಟೀಲ್ ನೇತೃತ್ವದ ಲೋಕಸಭಾ ಹೌಸಿಂಗ್ ಸಮಿತಿಯು ಅವರಿಗೆ ನೋಟಿಸ್ ಕಳುಹಿಸಿತ್ತು. ನಿಯಮಾವಳಿಗಳು, ಶಿಷ್ಟಾಚಾರಗಳಿಗೆ ಅನುಗುಣವಾಗಿ ಅವರು ಬಂಗಲೆಯನ್ನು ಖಾಲಿ ಮಾಡಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರಾಗಿರುವ ಭೂಷಣ್ ಕಾಂತಿ ಅವರು ರಾಹುಲ್ ಗಾಂಧಿಯವರ ಆ ದಿನದ ವಿಡಿಯೊವನ್ನು ಕಾಮೆಂಟ್‌ಗಳ ವಿಭಾಗದಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ರಾಹುಲ್ ಗಾಂಧಿ ಮನೆಯಿಂದ ನಿರ್ಗಮಿಸಿದ ನಂತರ ತಮ್ಮ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದ್ದಿಗಳಿಗೆ ಹಸ್ತಲಾಘವ ಮಾಡುವುದನ್ನು ಕಾಣಬಹುದು. ಇಲ್ಲಿ ಎಲ್ಲಿಯೂ ಅವಮಾನ ಆಗುವಂತೆ ನಡೆದುಕೊಂಡಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ವಿಡಿಯೋ ನೋಡಿದ ಇನ್ನು ಕೆಲವರು ಕಮೆಂಟ್ ಮಾಡಿದ್ದು, BJP ಐಟಿ ಸೆಲ್ ಮುಖ್ಯಸ್ಥ ಹೇಳಿರುವಂತೆ ರಾಹುಲ್ ಗಾಂಧಿ ಹಸ್ತಲಾಘವ ಮಾಡುವಾಗ ಯಾರಿಗೂ ಅವಮಾನ ಮಾಡಿಲ್ಲ, ಒಂದು ವೇಳೆ ಅವರು ತಮ್ಮ ಕೈಯನ್ನು ಪ್ಯಾಂಟಿಗೆ ವರೆಸಿಕೊಂಡಿದ್ದರೆ ಅದು ತಪ್ಪೇನು ಇಲ್ಲ ಕೊರೊನಾ ನಂತರ ಪ್ರತಿಯೊಬ್ಬರು ಯಾರೊಂದಿಗಾದರೂ ಕೈಕುಲುಕಿದರೆ ಸ್ಯಾನಿಟೈಸರ್ ಮೂಲಕ ಕೈ ವರೆಸಿಕೊಳ್ಳುದು ಒಳ್ಳೆಯದು ಎಂದು ಸರ್ಕಾರದ ಮಾರ್ಗ ಸೂಚಿಗಳು ಹೇಳಿವೆ. ಆದರೆ ರಾಹುಲ್ ಹಾಗೇನು ಮಾಡಿಲ್ಲ. ಒಂದು ವೇಳೆ ಹಾಗೆ ಮಾಡಿದ್ದರೂ ಅದೇನು ಅವಮಾನ ಮಾಡಿದಂತೆ ಆಗುತ್ತಿರಲಿಲ್ಲ. ಆದರೆ ಅಮಿತ್ ಮಾಳವಿಯ ಸುಳ್ಳು ಹೇಳಿಕೊಂಡು ಟ್ವೀಟ್ ಮಾಡಿದ್ದಾರೆ, ಈ ಹಿಂದೆಯೂ ರಾಹುಲ್ ಗಾಂಧಿ ಖರ್ಗೆ ಬೆನ್ನಿಗೆ ಕೈ ಒರೆಸಿದ್ದಾರೆ ಎಂಬ ಸುಳ್ಳು ಪೋಸ್ಟ್‌ ಹಾಕಿ ಸಿಕ್ಕಿ ಹಾಕಿಕೊಂಡಿದ್ದರು ಎಂದು ಕಮೆಂಟ್ ಮಾಡಿದ್ದಾರೆ.

ಕಾಂಗ್ರೆಸ್ ಟ್ವೀಟ್

ರಾಹುಲ್ ಗಾಂಧಿ ಅವರಿಗೆ ಈ ದೇಶವೇ ಮನೆ. ಅವರು ಜನರ ಹೃದಯದಲ್ಲಿ ನೆಲೆಸಿದ್ದಾರೆ. ಜನರ ಜತೆಗಿನ ರಾಹುಲ್ ಅವರ ಬಾಂಧವ್ಯವನ್ನು ಒಡೆಯಲು ಸಾಧ್ಯವಿಲ್ಲ. ಕೆಲವರು ಅವರಲ್ಲಿ ತಮ್ಮ ಮಗನನ್ನು, ಕೆಲವರು ಸಹೋದರನನ್ನು, ಇನ್ನು ಕೆಲವರು ನಾಯಕನನ್ನು ಕಾಣುತ್ತಾರೆ. ರಾಹುಲ್ ಅವರು ಎಲ್ಲರಿಗೂ ಸೇರಿದವರು ಮತ್ತು ಎಲ್ಲರೂ ರಾಹುಲ್ ಅವರಿಗೆ ಸೇರಿದವರು. ಅದಕ್ಕಾಗಿಯೇ ದೇಶದ ಜನರು ಇಂದು ‘ರಾಹುಲ್ ಅವರೇ, ನನ್ನ ಮನೆ- ನಿಮ್ಮ ಮನೆ’ ಎಂದು ಹೇಳುತ್ತಿರುವುದು” ಎಂಬುದಾಗಿ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ ತಮ್ಮ ಅಧಿಕೃತ ಸಂಸದರ ನಿವಾಸದಿಂದ ನಿರ್ಗಮಿಸುವಾಗ, ಸಿಬ್ಬಂದಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ BJP ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಟ್ವೀಟ್ ಮಾಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಟ್ವೀಟ್ ತಪ್ಪುದಾರಿಗೆಳೆಯುವಂತಿದೆ.

ಕೃಪೆ: DFRAC

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: BJP ವಿರುದ್ದದ ಜನಾಕ್ರೋಶದ ವಿಡಿಯೋ ಕರ್ನಾಟಕದ್ದೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights