ಫ್ಯಾಕ್ಟ್‌ಚೆಕ್ : ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಸಭೆಯಲ್ಲಿ ಆಜಾನ್ ಹಾಕಲಾಗಿತ್ತೇ?

“ಹಿಂದೂ ಬಾಂಧವರೆ ಒಮ್ಮೆ ಈ ವಿಡಿಯೋ ನೋಡಿ. ಇದು ಕಾಂಗ್ರೆಸ್‌ ನೇತೃತ್ವದ INDIA ಒಕ್ಕೂಟದ ಫೋಟೋಶೂಟ್‌. ಆ ಸಂದರ್ಭದಲ್ಲಿ ಬಳಸಲಾಗಿರುವ ಅಜ಼ಾನ್‌ ಕೇಳಿದ್ರೆ ನಿಮಗೆ ಎಲ್ಲವೂ ಅರ್ಥವಾಗುತ್ತೆ.” ಎಂಬ ತಲೆಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ.

ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ನಾಯಕರು ಸಭೆಯಲ್ಲಿ ಗುಂಪುಚಿತ್ರ ತೆಗೆಸಿಕೊಳ್ಳುವ ಸಂದರ್ಭದಲ್ಲಿ ಮುಸ್ಲಿಮರ ‘ಆಜಾನ್‌’ ಅನ್ನು ಹಾಕಲಾಗಿದೆ ಎಂದು ಆರೋಪಿಸಿ, ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ‘ಈ ಮೈತ್ರಿಕೂಟದಿಂದ ಎಚ್ಚರದಲ್ಲಿರಿ’ ಎಂಬಂಥ ವಿಡಿಯೋವನ್ನು ವಾಟ್ಸಾಪ್‌ ಮತ್ತು ಫೇಸ್‌ಬುಕ್‌ನಲ್ಲಿ  ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದು ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್‌ಸುದ್ದಿ.ಕಾಂ ಗೆ ಸಂದೇಶಗಳ ಮೂಲಕ ವಿನಂತಿಸಿದ್ದಾರೆ.  ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಹಲವು ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ ಸೇರಿದಂತೆ ಇತರೆ ಸಾಮಾಜಿಕ ಮಾಧ್ಯಮಗಳ ಪ್ಲಾಟ್‌ ಫಾರ್ಮ್‌ಗಳಲ್ಲಿ ಪತ್ತೆಯಾಗಿದೆ. ಆದರೆ ಈ ವಿಡಿಯೋವನ್ನು ಕೆಲವರು ಟೀಕೆ ಮಾಡಿದ್ದು ಇನ್ನು ಕೆಲವರು ಈ ವಿಡಿಯೋಗೆ ಸಿನಿಮಾ ಹಾಡುಗಳನ್ನ ಬಳಸಿ ಅಭಿಮಾನ ತೋರಿದ್ದಾರೆ.

ಬಳಿಕ ಮೂಲ ವಿಡಿಯೋ ಪರಿಶೀಲನೆ ನಡೆಸಿದಾಗ ಇದು ತಿರುಚಿದ ವಿಡಿಯೋ ಎಂಬುದು ಬಹಿರಂಗವಾಗಿದೆ. ಮೂಲ ವಿಡಿಯೋದಲ್ಲಿ INDIA ಮೈತ್ರಿಕೂಟದ ಸಭೆಗೆ ಕೊನೆಗೆ ತೆಗೆಯಲಾದ ಫೋಟೋಶೂಟ್‌ನ ಹಿನ್ನೆಲೆಯಲ್ಲಿ ಜಿತೇಗ ಇಂಡಿಯಾ ಜಿತೇಗ ಎಂಬ ಹಾಡನ್ನು ಹಲವು ಸಾಮಾಜಿಕ ಜಾಲತಾಣದ ಬಳಕೆದಾರರು ಬಳಸಿಕೊಂಡಿದ್ದಾರೆ.

Fact-Check: Edited Video Of INDIA Alliance Meeting Going Viral With False  Claims - Vishvas News

ವಿಡಿಯೊದಲ್ಲಿ ಇರುವ ದೃಶ್ಯಗಳಲ್ಲಿ, ‘ಇಂಡಿಯಾ’ ಮೈತ್ರಿಕೂಟದ ನಾಯಕರು ಗುಂಪುಚಿತ್ರಕ್ಕೆ ನಿಂತಿರುವ ಹಿಂಬದಿಯಲ್ಲಿ ದೊಡ್ಡದಾದ ಡಿಜಿಟಿಲ್‌ ಬ್ಯಾನರ್‌ವೊಂದು ಕಾಣಿಸುತ್ತದೆ. ಈ ಬ್ಯಾನರ್‌ನಲ್ಲಿ ಆಗಸ್ಟ್‌ 31 ಹಾಗೂ ಸೆಪ್ಟೆಂಬರ್‌ 1 ಎಂದು ಬರೆದುಕೊಳ್ಳಲಾಗಿದೆ. ಇದೇ ದಿನಾಂಕಗಳಲ್ಲಿ ಮುಂಬೈನಲ್ಲಿ ಈ ಮೈತ್ರಿಕೂಟದ ಸಭೆ ನಡೆದಿತ್ತು.

ಈ ಬಗ್ಗೆ ಹಲವು ಪತ್ರಿಕೆಗಳು ವರದಿ ಮಾಡಿದ್ದವು ಹಾಗೂ ವಿಡಿಯೊಗಳನ್ನು ಚಿತ್ರೀಕರಿಸಿ ತಮ್ಮ ತಮ್ಮ ಡಿಜಿಟಲ್‌ ಚಾನೆಲ್‌ಗಳಲ್ಲಿ ಪ್ರಸಾರ ಮಾಡಿದ್ದವು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಿಗೂ ಪತ್ರಿಕೆಗಳು ಪ್ರಸಾರ ಮಾಡಿದ ವಿಡಿಯೊ ತುಣುಕುಗಳಿಗೂ ಹೋಲಿಕೆ ಇದೆ. ಆದರೆ, ಆ ವಿಡಿಯೊಗಳಲ್ಲಿ ‘ಆಜಾನ್‌’ ಇರಲಿಲ್ಲ. ಆದರೆ ಇದೇ ವಿಡಿಯೋದ ಹಾಡನ್ನು ಬದಲಾಯಿಸಿ ಅಜ಼ಾನ್‌ ಅನ್ನು ಬಳಸಿ ಎಡಿಟ್ ಮಾಡಿದ್ದಾರೆ. ಆ ಮೂಲಕ ಇಂಡಿಯಾ ಮೈತ್ರಿ ಕೂಟ ಮುಸಲ್ಮಾನರ ಓಲೈಕೆ ಮಾಡುತ್ತಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಕೃಪೆ : ವಿಶ್ವಾಸ್ ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಹಲಾಲ್ ಎಂದರೆ ಆಹಾರಕ್ಕೆ ಉಗುಳುವುದು ಎಂದು ಮುಸ್ಲಿಮರು ಹೇಳಿಲ್ಲ! ಹಾಗಿದ್ದರೆ ಈ ಪ್ರಕರಣವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights