FACT CHECK | ಮಹುವಾ ಮೊಯಿತ್ರಾ ನನ್ನ ಶಕ್ತಿಯ ಮೂಲ ಎಗ್ಸ್‌ ಎಂದದನ್ನು ಸೆಕ್ಸ್‌ ಎಂದು ತಪ್ಪಾಗಿ ಹಂಚಿಕೊಂಡ ಬಲಪಂಥೀಯರು?

ಕೃಷ್ಣನಗರದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಮಹುವಾ ಮೊಯಿತ್ರಾ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಮೊಯಿತ್ರಾ ಅವರಿಗೆ, ನ್ಯೂಸ್ ದಿ ಟ್ರುತ್ ಅಥವಾ NTT ಯ ಪತ್ರಕರ್ತ ನಿಮ್ಮ ಶಕ್ತಿಯ ಮೂಲವೇನು ಎಂದು ಕೇಳಿದಾಗ, ಆಕೆ ನನ್ನ ಶಕ್ತಿಯ ಮೂಲ ಲೈಂಗಿಕತೆ (ಸೆಕ್ಸ್‌) ಎಂದಿದ್ದಾರೆ ಎಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

https://twitter.com/SaffronSunanda/status/1780866103356637536

ಪಶ್ಚಿಮ ಬಂಗಾಳದ ಮತದಾರರೇ, ಈ ರೀತಿಯ ಸಂಸದರು ನಿಮ್ಮ ಪ್ರತಿನಿಧಿ ಆಗಬೇಕಾ? ನೀವು ಕೇಳಿಸಿಕೊಂಡಿದ್ದು ಸರಿ ಇದೆ, ಲೈಂಗಿಕತೆಯೇ ಮಹುವಾ ಮೊಯಿತ್ರಾ ಅವರ ಶಕ್ತಿಯ ಮೂಲ. ಇದು ಇನ್ನಷ್ಟು ಕೀಳು ಮಟ್ಟ. ಎಂದು ಬರೆದುಕೊಂಡಿದ್ದಾರೆ. ಅದರ ಲಿಂಕ್‌ಅನ್ನು ಇಲ್ಲಿ ನೋಡಬಹುದು.

ಹಾಗಿದ್ದರೆ ಮಹುವಾ ಮೊಯಿತ್ರಾ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಸೆಕ್ಸ್‌ ಇಸ್‌ ದ ಸೋರ್ಸ್‌ ಆಫ್ ಮೈ ಎನರ್ಜಿ ಎಂದು ಉತ್ತರಿಸಿದ್ದಾರೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ರ್ಮಾಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಮಹುವಾ ಮೊಯಿತ್ರಾ ಜೊತೆಗಿನ ನ್ಯೂಸ್ ದಿ ಟ್ರುತ್ (NTT) ನಡೆಸಿದ ಸಂದರ್ಶನದ ವಿಡಿಯೋವನ್ನು ಸರ್ಚ್ ಮಾಡಿದಾಗ, ನ್ಯೂಸ್ ದಿ ಟ್ರುತ್ ಯೂಟ್ಯೂಬ್‌ ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೋ ಲಭ್ಯವಾಗಿದೆ.

ಈ ವಿಡಿಯೋದ 2:35 ನಿಮಿಷದ ಅವಧಿಯಿಂದ 2:41 ನಿಮಿಷದವರೆಗಿನ ವಿಡಿಯೋವನ್ನು ವೈರಲ್ ವಿಡಿಯೋಗಾಗಿ ಕತ್ತರಿಸಿ ಬಳಸಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಹುವಾ ಮೊಯಿತ್ರಾ ಅವರು ನಿಮ್ಮ ಶಕ್ತಿಯ ಮೂಲವೇನು ಎಂದು ಕೇಳಲಾದ ಪ್ರಶ್ನೆಗೆ ಸ್ಪಷ್ಟವಾಗಿ ‘ಎಗ್ಸ್‌’ ಎಂದೇ ಹೇಳುತ್ತಾರೆ. ‘ನಾನು ನಿಷ್ಪಕ್ಷಪಾತಿ: ತಮಲ್ ಸಾಹಾ ಜೊತೆ ಟಿಎಂಸಿ ಮಹುವಾ ಮೊಯಿತ್ರಾ ಮಾತುಕತೆ’ ಎಂದು ಕ್ಯಾಪ್ಶನ್ ಕೊಡಲಾಗಿದೆ.

ಈ ವೇಳೆ ವರದಿಗಾರರು ನಿಮ್ಮ ಶಕ್ತಿಯ ಮೂಲವೇನು ಎಂದು ಕೇಳುತ್ತಾರೆ. ಆಗ ಮಹುವಾ ಮೊಯಿತ್ರಾ ಅವರು ‘ಎಗ್ಸ್, ಎಗ್ಸ್’ ಎನ್ನುತ್ತಾರೆ. ಈ ವೇಳೆ ವರದಿಗಾರ ನಗುತ್ತಾರೆ. ಆಗ ಮಹುವಾ ಮೊಯಿತ್ರಾ ಹೌದು ಅದು ಸತ್ಯ ಎನ್ನುತ್ತಾರೆ.

ಈ ಕುರಿತಾಗಿ ಪ್ರತಿಕ್ರಿಯೆ ಪಡೆಯಲು ಆಲ್ಟ್‌ನ್ಯೂಸ್‌ ಸಂಸ್ಥೆಯು ಮಹುವಾ ಮೊಯಿತ್ರಾ ಅವರನ್ನು ಸಂಪರ್ಕಿಸಿದಾಗ ಈ ವಿಡಿಯೋವನ್ನು ಹೇಗೆ ತಿರುಚಲಾಗಿದೆ ಎಂದು ಮಹುವಾ ಮೊಯಿತ್ರಾ ಅವರೇ ವಿವರಿಸಿದರು. ನಾನು EGGS ಎಂದು ಹೇಳುವ ಆಡಿಯೋ ಪೈಕಿ EG ಆಡಿಯೋ ಕಡಿಮೆ ಮಾಡಲಾಗಿದೆ. ಕೊನೆಯ G ಆಡಿಯೋ ಧ್ವನಿ ಎತ್ತರಿಸಲಾಗಿದೆ ಎಂದು ವಿವರಿಸಿದರು.

ವೈರಲ್ ವಿಡಿಯೋಗೆ ಸಂಬಂಧಿಸಿದ ಭಾಗವನ್ನು ಆಲ್ಟ್‌ ನ್ಯೂಸ್‌ ನಿಧಾನಗೊಳಿಸಿ ಪರಿಶೀಲಿಸಿದ್ದು, ಅಲ್ಲಿ ಮೊಯಿತ್ರಾ ಅವರು “ಮೊಟ್ಟೆಗಳು, ಮೊಟ್ಟೆಗಳು”( Eggs eggs )ಎಂದು ಹೇಳಿದ್ದಾರೆ ಹೊರತು “ಸೆಕ್ಸ್” ಅಲ್ಲ ಎಂಬುದು ಸ್ಪಷ್ಟವಾಗಿದೆ.

ಇದಲ್ಲದೆ, ಮೊಯಿತ್ರಾ ಅವರನ್ನು ಸಂದರ್ಶಿಸಿದ ಪತ್ರಕರ್ತ ತಮಾಲ್ ಸಹಾ ಅವರು ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಸಿ ಟ್ವೀಟ್‌ ಮಡಿದ್ದು  ತಮ್ಮ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಟಿಎಂಸಿ ನಾಯಕಿ ಮೊಯಿತ್ರಾ ಅವರು  ‘ಮೊಟ್ಟೆಗಳು’ (EGGS) ಎಂದು ಹೇಳಿದರು ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಆಡಿಯೋವನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ ಎಂದು ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ವರದಿಗಾರರು ನಿಮ್ಮ ಶಕ್ತಿಯ ಮೂಲವೇನು ಎಂದು ಮಹುವಾ ಮೊಯಿತ್ರಾರನ್ನು ಕೇಳುತ್ತಾರೆ. ಆಗ ಮಹುವಾ ಮೊಯಿತ್ರಾ ಅವರು ‘ಎಗ್ಸ್, ಎಗ್ಸ್’ ಎಂದು ಹೆಳುವ ಆಡಿಯೋವನ್ನು ತಿರುಚಿ ‘ಸೆಕ್ಸ್‌’ ಎಂದು  ಮಾರ್ಪಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. 

ಹೆಣ್ಣನ್ನು ದೇವತೆ, ಮಾತೆ ಹಾಗೆ ಹೀಗೆ ಎಂದು ಪುಂಖಾನುಪುಂಖವಾಗಿ ಪುಂಗುವ ಈ ಬಲಪಂಥೀಯ ಸಿದ್ದಾಂತದ ಬೆಂಬಲಿಗರು ಮಹುವಾ ಮೊಯಿತ್ರಾರ ಹೇಳಿಕೆಯನ್ನು ತಿರುಚಿ ಹಂಚಿಕೊಳ್ಳುವಾಗ ದೇವತೆಗಳ್ಯಾಕೆ ನೆನಪಾಗಲಿಲ್ಲ , ಎಂದು ಜನ ಪ್ರಶ್ನಿಸುತ್ತಿದ್ದಾರೆ. 

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕಾಂಗ್ರೆಸ್‌ಗೆ ವೋಟ್‌ ಹಾಕಿ ಎಂದು ಹೇಳಿದ್ರಾ ಧೋನಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights