FACT CHECK | ಕಾಂಗ್ರೆಸ್‌ಗೆ ವೋಟ್‌ ಹಾಕಿ ಎಂದು ಹೇಳಿದ್ರಾ ಧೋನಿ?

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಅಭಿಮಾನಿಗಳಿಗೆ ಮನವಿ ಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

‘ಧೋನಿ ಅವರೇಕೆ ತಮ್ಮ ಕೈಗಳನ್ನ ತೋರಿಸಿ ಮತ ಹಾಕುವಂತೆ ಹೇಳುತ್ತಿದ್ದಾರೆ?’ ಎಂದು ಪ್ರಶ್ನಿಸಿ ಎಕ್ಸ್‌ ಖಾತೆಯ ಬಳಕೆದಾರೊಬ್ಬರು ಫೋಟೊವನ್ನು ಪೋಸ್ಟ್‌ ಮಾಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟಿ-ಶರ್ಟ್ ಧರಿಸಿರುವ ಮಹೇಂದ್ರ ಸಿಂಗ್ ಧೋನಿ ಎಡಗೈ ಬೆರಳನ್ನು ತೋರಿಸುತ್ತಾ ಮತ ಹಾಕಿರುವ ಗುರುತನ್ನು ಪ್ರದರ್ಶನ ಮಾಡುತ್ತಿರುವಂತೆ ಕಾಣುತ್ತಿದೆ. ಜೊತೆಗೆ ಬಲಗೈ ನ ಐದೂ ಬೆರಳುಗಳನ್ನೂ ಪ್ರದರ್ಶನ ಮಾಡುತ್ತಿರುವುದನ್ನು ಫೋಟೊದಲ್ಲಿ ಕಾಣಬಹುದು. ಹಾಗಿದ್ದರೆ ಧೋನಿ ನಿಜವಾಗಿಯೂ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕುವಂತೆ ಹೇಳಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಮಹೇಂದ್ರ ಸಿಂಗ್ ಧೋನಿ ಅವರು ಹಸ್ತ ಮತ್ತು ಕೈ ಬೆರಳನ್ನು ಪ್ರದರ್ಶನ ಮಾಡುತ್ತಿರುವ ಚಿತ್ರದ ಹಿನ್ನಲೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2020ರ ಅಕ್ಟೋಬರ್ 5 ರಂದು ಸಿಎಸ್‌ಕೆ ತಂಡದ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪ್ರಕಟವಾದ ಫೋಟೋ ಲಭ್ಯವಾಗಿದೆ. ಸಿಎಸ್‌ಕೆ ತಂಡದ ಟ್ವಿಟ್ಟರ್ (ಎಕ್ಸ್) ಫಾಲೋವರ್ಸ್‌ಗಳ ಸಂಖ್ಯೆ 6 ಮಿಲಿಯನ್ ದಾಟಿದೆ ಎಂಬುದನ್ನು ಸೂಚ್ಯವಾಗಿ ಸಂಖ್ಯೆಯನ್ನು ಪ್ರದರ್ಶಿಸಲಾಗಿದೆ.

ಸಿಎಸ್‌ಕೆ ತಂಡದ ಇನ್ನಿತರ ಆಟಗಾರರೂ ಕೂಡಾ 2020ರ ಅಕ್ಟೋಬರ್ 5 ರಂದು ವಿಡಿಯೋನ್ನು ಹಂಚಿಕೊಂಡಿದ್ದರು.  ಟ್ವಿಟ್ಟರ್‌ (ಎಕ್ಸ್‌)ನಲ್ಲಿ 6 ಮಿಲಿಯನ್ ಹಿಂಬಾಲಕರನ್ನು ದಾಟಿದ ಸಂಭ್ರಮಾಚರಣೆ ನಡೆಸಿರೋದಾಗಿ ವಿವರಿಸಲಾಗಿತ್ತು. ಅಭಿಮಾನಿಗಳಿಗೆ ಧನ್ಯವಾದವನ್ನು ಸಲ್ಲಿಸಲಾಗಿತ್ತು.

https://twitter.com/ChennaiIPL/status/1312995053250387968

ಒಟ್ಟಾರೆಯಾಗಿ ಹೇಳುವುದಾದರೆ, ಮಹೇಂದ್ರ ಸಿಂಗ್ ಧೋನಿ ಸಿಎಸ್‌ಕೆ ತಂಡದ ಎಕ್ಸ್‌ (ಟ್ವಿಟ್ಟರ್) ಫಾಲೋವರ್ಸ್‌ ಸಂಖ್ಯೆ 6 ಮಿಲಿಯನ್ ದಾಟಿರುವ ಹಿನ್ನೆಲೆಯಲ್ಲಿ ತಮ್ಮ ತಂಡದ ಸಹ ಆಟಗಾರರ ಜೊತೆ ಸಂಭ್ರಮಿಸಿದ್ದ ಸಂದರ್ಭದಲ್ಲಿ ಸರೆಹಿಡಿದ ಚಿತ್ರವನ್ನು  ಧೋನಿ ಕಾಂಗ್ರೆಸ್‌ ಪಕ್ಷದ ಪರವಾಗಿ ಮತ ಕೇಳುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ವ್ಯಕ್ತಿಯೊಬ್ಬ ಮೂರು ಜೀವಂತ ಚಿರತೆಗಳೊಂದಿಗೆ ಮಲಗುವ ದೃಶ್ಯಾವಳಿಗಳು ರಾಜಸ್ಥಾನದಲ್ಲಾ? ಮತ್ತೆಲ್ಲಿಯದ್ದು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights