FACT CHECK | ಸಿಎಂ ಸಿದ್ದರಾಮಯ್ಯನವರ ಹಳೆಯ ವಿಡಿಯೋವನ್ನು ತಿರುಚಿ ಹಂಚಿಕೊಂಡ BJP ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

“ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚುತ್ತೇನೆ: ಸಿದ್ದರಾಮಯ್ಯ. ಅವಕಾಶವಾದಿಗಳಿಗೆ, ಓಲೈಕೆ; ಭಾಗ್ಯ, ಗ್ಯಾರಂಟಿ ರಾಜಕಾರಣ ಮಾಡುತ್ತ ದೇಶದ ಸಂಪತ್ತನ್ನು ಲೂಟಿ ಮತ ನೀಡಬೇಡಿ. ಮತದಾನದ ದಿನದಂದು ಮೈಮರೆಯದಿರಿ” ಎಂಬ ಬರಹದೊಂದಿಗೆ  ಬಸನಗೌಡ ಪಾಟೀಲ್ ಯತ್ನಾಳ್ ಟಿವಿ9 ಸುದ್ದಿ ವಾಹಿನಿಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಸಿದ್ದರಾಮಯ್ಯ ಮುಸ್ಲಿಮರ ಕುರಿತಾಗಿ ನೀಡಿರುವ ಹೇಳಿಕೆಯ ಹಿನ್ನಲೆ ಮತ್ತು ವಾಸ್ತವೇನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಶಾಸಕ ಯತ್ನಾಳ್ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಟಿವಿ9 ಸುದ್ದಿ ವಾಹಿನಿಯ ವಿಡಿಯೋವನ್ನು ಪರಿಶೀಲಿಸಿದಾಗ, ಅದು ಡಿಸೆಂಬರ್ 4, 2023ರಂದು ಹುಬ್ಬಳ್ಳಿ ತಾಲೂಕಿನ ಪಾಳ ಗ್ರಾಮದಲ್ಲಿ ದಕ್ಷಿಣ ಭಾರತದ ಮುಸ್ಲಿಂ ಧರ್ಮಗಳ ಸಮಾವೇಶದ ಸಂದರ್ಭದ್ದು ಎಂದು ತಿಳಿದುಬಂದಿದೆ.

ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, “ನಿಮಗೂ ಶಿಕ್ಷಣ ಸಿಗಬೇಕು, ನಿಮ್ಮ ಧಾರ್ಮಿಕ ಕೇಂದ್ರಗಳ ಅಭಿವೃದ್ದಿ ಆಗಬೇಕು. ನಿಮಗೂ ಈ ದೇಶದ ಸಂಪತ್ತಿನಲ್ಲಿ ಪಾಲು ಸಿಗಬೇಕು. ನೀವು ಕೂಡ ಭಾರತೀಯರಲ್ವಾ? ಈ ದೇಶ ನಿಮಗೂ ಸೇರಬೇಕು, ನನಗೂ ಸೇರಬೇಕು. ಈ ದೇಶದ ಸಂಪತ್ತು ನಿಮಗೂ ಸಿಗಬೇಕು, ನನಗೂ ಸಿಗಬೇಕು. ಈ ದೇಶದ ಸಂಪತ್ತನ್ನು ನಿಮಗೂ ಹಂಚುವ ಕೆಲಸ ಮಾಡುತ್ತೇನೆ. ನಿಮಗೆ ಯಾವುದೇ ಕಾರಣಕ್ಕೆ ಕೂಡ ಅನ್ಯಾಯ ಆಗಲು ಬಿಡಲ್ಲ. ನಿಮ್ಮ ರಕ್ಷಣೆ ಮಾಡುವಂತಹ ಕೆಲಸ ಮಾಡುತ್ತೇನೆ. ಆದೇ ರೀತಿ ಎಲ್ಲಾ ಧರ್ಮ, ಜಾತಿಯವರಿಗೂ ರಕ್ಷಣೆ ಕೊಡುವಂತಹ ಕೆಲಸ ಮಾಡುತ್ತೇನೆ” ಎಂದಿರುವುದನ್ನು ಪೂರ್ಣ ವಿಡಿಯೋದಲ್ಲಿ ಕೇಳಬಹುದು.

ಇಲ್ಲಿ ಸಿಎಂ ಸಿದ್ದರಾಮಯ್ಯರವರು, ಈ ದೇಶದ ಸಂಪತ್ತನ್ನು ಸಂಪೂರ್ಣವಾಗಿ ಮುಸ್ಲಿಮರಿಗೆ ಹಂಚುತ್ತೇನೆ ಎಂದಿಲ್ಲ. ಸಿಎಂ ತನ್ನ ಭಾಷಣದಲ್ಲಿ “ಎಲ್ಲಾ ಧರ್ಮ, ಜಾತಿಯವರಿಗೂ ರಕ್ಷಣೆ ಕೊಡುವಂತಹ ಕೆಲಸ ಮಾಡುತ್ತೇನೆ” ಎಂದಿರುವುದು ಗಮನಿಸಬಹುದು.

ಫ್ಯಾಕ್ಟ್‌ಚೆಕ್ : CM ವಿರುದ್ದ BJP ಶಾಸಕ ಯತ್ನಾಳ್ ಮಾಡಿದ ಆರೋಪ ಸುಳ್ಳು

ಈ ಹಿಂದೆಯೂ ಇದೇ ಯತ್ನಳ್  ಈ ಸಮಾವೇಶದಲ್ಲಿ ಬಾಗವಹಿಸಿದ್ದ ಬಿಜಾಪುರದ ಸೈಯದ್‌ ಮೊಹಮ್ಮದ್‌ ತನ್ವೀರ್‌ ಹಶ್ಮಿ ಅವರನ್ನು ಉಲ್ಲೇಖಿಸಿ ಐಸಿಸ್ ಭಯೋತ್ಪಾದಕ ಎಂದು ಸುಳ್ಳು ಹಂಚಿಕೆ ಮಾಡಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಶಾಸಕ ಯತ್ನಾಳ್ ಅವರು ಹಂಚಿಕೊಂಡ ವಿಡಿಯೋ 5 ತಿಂಗಳು ಹಳೆಯದು. ಈಗ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಹಳೆಯ ವಿಡಿಯೋವನ್ನು ತಪ್ಪಾಗಿ ಹಂಚಿಕೊಂಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಹುವಾ ಮೊಯಿತ್ರಾ ನನ್ನ ಶಕ್ತಿಯ ಮೂಲ ಎಗ್ಸ್‌ ಎಂದದನ್ನು ಸೆಕ್ಸ್‌ ಎಂದು ತಪ್ಪಾಗಿ ಹಂಚಿಕೊಂಡ ಬಲಪಂಥೀಯರು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights