FACT CHECK | ಕಲಬೆರಕೆ ಹಾಲು ಸೇವನೆಯಿಂದ 2025ರ ಹೊತ್ತಿಗೆ ಶೇ. 85 ರಷ್ಟು ಭಾರತೀಯರು ಕ್ಯಾನ್ಸರ್‌ಗೆ ತುತ್ತಾಗುತ್ತಾರೆ ಎಂದು WHO ಹೇಳಿದೆಯೇ?

ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ಹಾಲು ಕ್ಯಾಲ್ಸಿಯಂನ ಸಮೃದ್ಧ ಮೂಲ. ಮತ್ತು ಇದು ಅನೇಕ ಪ್ರಯೋಜನಗಳನ್ನು ಒಳಗೊಂಡಿದೆ ಎಂಬುವುದು ಗೊತ್ತಿರುವ ವಿಚಾರ. ಆದರೆ ಇತ್ತೀಚೆಗೆ ಹಾಲಿನಲ್ಲೂ ಕಲಬೆರಕೆ ಪ್ರಮಾಣ ಹೆಚ್ಚಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದರಿಂದಾಗಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಂಭವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ ನೇಡಿದೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಪಠ್ಯ 'दूध नहीं जहर पीता है इंडिया, उत्पादन 14 करोड़ लीटर लेकिन खपत 64 करोड़ लीटर WHO की चेतावनी- बंद नही हुई मिलावट तो 87% भारतीयों को 2025 तक होगा कैंसर By Money Bhaskar September 19, 2018 नई दिल्ली एनीमल वेलफेयर बोर्ड के सदस्य मोहन सिंह अहलूवालिया के मुताबिक, देश में बिकने वाला 68.7 फीसदी दूध और दूध बना प्रोडक्ट मिलावटी है| यह फूड सेफ्टी एंड स्टेंडर्ड अथोरिटी ऑफ इंडिया (FSSAI) की ओर तय मानकों से कहीं भी मेल नहीं खाता है|' ಹೇಳುತ್ತಿದೆ ನ ಚಿತ್ರವಾಗಿರಬಹುದು

ಕಲಬೆರಕೆ ಹಾಲಿನ ಸೇವನೆಯಿಂದ 2025 ರ ವೇಳೆಗೆ 87 ಪ್ರತಿಶತ ಭಾರತೀಯರು ಕ್ಯಾನ್ಸರ್‌ಗೆ ತುತ್ತಾಗುವ ಅಪಾಯದಲ್ಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ ಎಂದು ಫೇಸ್‌ಬುಕ್ ಬಳಕೆದಾರರು ಸೆಪ್ಟೆಂಬರ್ 30 ರಂದು ಪತ್ರಿಕೆಯ ಕ್ಲಿಪ್ಪಿಂಗ್ ಅನ್ನು ಹಂಚಿಕೊಂಡಿದ್ದಾರೆ.

 

 

 

 

 

 

 

 

 

 

 

ಇದೇ ವೈರಲ್ ಕ್ಲಿಪ್‌ಅನ್ನು ಎಕ್ಸ್‌ ಖಾತೆಯ ಬಳಕೆದಾರರು ಹಂಚಿಕೊಂಡಿದ್ದು, ಭಾರತೀಯರು ಹಾಲಿನ ಹೆಸರಿನಲ್ಲಿ ವಿಷ ಕುಡಿಯುತ್ತಿದ್ದಾರೆ ಉತ್ಪಾದನೆಯಾಗುವ 14 ಕೋಟಿ ಲೀಟರ್ ಹಾಲಿಗೆ 64 ಕೋಟಿ ಲೀಟರ್ ಕಲಬೆರಕೆಯನ್ನು ಸೇರಿಸಲಾಗುತ್ತಿದೆ. ಇದನ್ನು ನಿಲ್ಲಿಸದಿದ್ದರೆ 2025 ರ ವೇಳೆಗೆ ಶೇ 87% ಭಾರತೀಯರು ಕ್ಯಾನ್ಸರ್‌ಗೆ ಬಲಿಯಾಗುತ್ತಾರೆ. ದೇಶದ ಹಿತದೃಷ್ಟಿಯಿಂದ ಈಗಿನ ಸರ್ಕಾರವು ಮೊದಲು ಈ ಕಲಬೆರಕೆ ವ್ಯವಹಾರವನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಪರಿಣಾಮಗಳು ಭೀಕರವಾಗಬಹುದು ಎಂಬ ಬರಹದೊಂದಿಗೆ ಹಂಚಿಕೊಂಡಿದ್ದಾರೆ.

ಇದೇ ರೀತಿಯ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು ಮತ್ತು ಅವುಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಕ್ರಮವಾಗಿ ಇಲ್ಲಿ ಮತ್ತು ಇಲ್ಲಿ ಕಾಣಬಹುದು . ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ಭಾರತೀಯರು ಕಲಬೆರಕೆ ಹಾಲಿನ ಸೇವನೆ ಕುರಿತು WHO ವ್ಯಕ್ತಪಡಿಸಿರುವ ಆತಂಕ ನಿಜವೇ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ,  ದೈನಿಕ ಭಾಸ್ಕರ್ ಸುದ್ದಿ ತಾಣದಲ್ಲಿ ಆರು ವರ್ಷಗಳ ಹಿಂದೆ ಪ್ರಕಟಗೊಂಡ ವರದಿಯೊಂದು ಕಂಡು ಬಂದಿದೆ. ಈ ವರದಿಯಲ್ಲಿ ದೇಶದಲ್ಲಿ 68.7 ರಷ್ಟು ಹಾಲು ಮತ್ತು ಅದರಿಂದ ತಯಾರಿಸಿದ ಉತ್ಪನ್ನಗಳಲ್ಲಿ ಕಲಬೆರಕೆ ಇದೆ. 89 ರಷ್ಟು ಉತ್ಪನ್ನಗಳಲ್ಲಿ ಒಂದು ಅಥವಾ ಎರಡು ರೀತಿಯ ಕಲಬೆರಕೆ ಇರುತ್ತದೆ ಎಂದು ಅನಿಮಲ್ ವೆಲ್ಫೇರ್ ಬಾರ್ಡ್ ಸದಸ್ಯ ಮೋಹನ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ. 2025 ರ ವೇಳೆಗೆ ದೇಶದ ಜನಸಂಖ್ಯೆಯ 87 ಪ್ರತಿಶತದಷ್ಟು ಜನರು ಕಲಬೆರಕೆಯಿಂದ ಕ್ಯಾನ್ಸರ್‌ಗೆ ಬಲಿಯಾಗುತ್ತಾರೆ ಎಂದು WHO ಭಾರತ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಕಂಡುಬಂದಿದೆ.

ಮೇಲಿನ ಪತ್ರಿಕಾ ಪ್ರಕಟಣೆಯನ್ನು ಮಾಧ್ಯಮ ಸಂಸ್ಥೆ ದೈನಿಕ್ ಭಾಸ್ಕರ್ ಬಿಟ್ಟರೆ ಬೇರೆ ಯಾವುದೇ ಮಾಧ್ಯಮಗಳು ಇಂತಹ ವರದಿಯನ್ನು ಪ್ರಕಟಿಸಿಲ್ಲ. ಆದ್ದರಿಂದ ಇದರ ಆಳ ಅಗಲ ಏನು? ಇಂತಹ ಗಂಭೀರ ವಿಷಯದ ಮೇಲೆ ಏಕೆ ಯಾವುದೇ ಮಾಧ್ಯಮಗಳು ಸರಿಯಾದ ಚರ್ಚೆಯನ್ನು ಮಾಡಿಲ್ಲ ಎಂದು ಪರಿಶೀಲಿಸಿದಾಗ, WHO ನ ಸಲಹೆಗೆ ಸಂಬಂಧಿಸಿದ ವೈರಲ್ ಆಗಿರುವ ವರದಿಗಳಿಗೆ ಸಂಬಂಧಿಸಿದಂತೆ WHO ಸಂಸ್ಥೆಯು ಸ್ಪಷ್ಟೀಕರಣ ನೀಡಿ  ಪತ್ರಿಕಾ ಟಿಪ್ಪಣಿ ಬಿಡುಗಡೆ ಮಾಡಿದೆ.

ಹಾಲು/ಹಾಲಿನ ಉತ್ಪನ್ನಗಳ ಕಲಬೆರಕೆ ವಿಷಯದ ಬಗ್ಗೆ ಭಾರತ ಸರ್ಕಾರಕ್ಕೆ WHO ಯಾವುದೇ ಸಲಹೆಯನ್ನು ನೀಡಿಲ್ಲ ಎಂದು ಬಿಡುಗಡೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.

ಏತನ್ಮಧ್ಯೆ, ಸಂಸತ್ತಿನಲ್ಲಿ ಹಕ್ಕು ಪ್ರತಿಧ್ವನಿಸಿದಾಗ ನಾವು ನವೆಂಬರ್ 2019 ರ ಲೋಕಸಭೆಯ ಕಲಾಪಗಳ PDF ಫೈಲ್ ಅನ್ನು ನೋಡಿದ್ದೇವೆ. ಕಲಬೆರಕೆ ಹಾಲಿನ ಕುರಿತು WHO ಎಚ್ಚರಿಕೆಯ ವರದಿಗಳ ಕುರಿತು ಸಂಸತ್ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಆಗಿನ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್, ಜಾಗತಿಕ ಸಂಸ್ಥೆ ಭಾರತ ಸರ್ಕಾರಕ್ಕೆ ಅಂತಹ ಯಾವುದೇ ಸಲಹೆಯನ್ನು ನೀಡಿಲ್ಲ ಎಂದು ಹೇಳಿದರು.

PIB  18 ಅಕ್ಟೋಬರ್‌ 2022 ರಂದು ತನ್ನ X ಹ್ಯಾಂಡಲ್‌ನಲ್ಲಿ ವೈರಲ್‌ ಆಗುತ್ತಿರುವ ಪ್ರತಿಪಾದನೆ ಸುಳ್ಳು ಎಂದು  ಪೋಸ್ಟ್ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಲಬೆರಕೆ ಹಾಲಿನ ಸೇವನೆಯಿಂದ 2025 ರ ವೇಳೆಗೆ ದೇಶದಲ್ಲಿ 87% ಜನರು ಕ್ಯಾನ್ಸರ್‌ಗೆ ಒಳಗಾಗುವ ಅಪಾಯವಿದೆ ಎಂದು WHO ಸಲಹೆ ನೀಡಿದೆ ಎಂಬುದು ಸುಳ್ಳು. WHO ನಿಂದ ಅಂತಹ ಯಾವುದೇ ಸಲಹೆಯನ್ನು ನೀಡಲಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಸ್ಪಷ್ಟಪಡಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ದೋಣಿ ದುರಂತದ ವೈರಲ್ ವಿಡಿಯೋ ಗೋವಾಗೆ ಸಂಬಂಧಿಸಿದ್ದಲ್ಲ! ಮತ್ತೆಲ್ಲಿಯದ್ದು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights