FACT CHECK | 2024ರಲ್ಲಿ ಉಚಿತ ಲ್ಯಾಪ್‌ಟಾಪ್ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆಯೇ?

ದೇಶದ ಬಡ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅದರಲ್ಲೂ ಡಿಜಿಟಲ್‌ ಶಿಕ್ಷಣ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಲ್ಯಾಪ್‌ಟಾಪ್ ಯೋಜನೆ 2024 ಕ್ಕಾಗಿ ಅಪ್ಲಿಕೇಶನ್‌ಗಳು ಲಭ್ಯವಿದೆ. ಆರ್ಥಿಕ ಕಾರಣಗಳಿಗಾಗಿ ತಮ್ಮದೇ ಆದ ಲ್ಯಾಪ್‌ಟಾಪ್ ಖರೀದಿಸುವ ಸ್ಥಿತಿಯಲ್ಲಿಲ್ಲದ ಮತ್ತು ಅವರ ಶಿಕ್ಷಣದ ಮಟ್ಟದಲ್ಲಿ ಲ್ಯಾಪ್‌ಟಾಪ್ ಅಗತ್ಯವಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ಯೋಜನೆಯು ಆರಂಭಿಸಲಾಗಿದೆ. ಈ ಲಿಂಕ್‌ ಕ್ಲಿಕ್‌ ಮಾಡಿ, ಯೋಜನೆಯ ಲಾಭ ಪಡೆಯಿರಿ”  ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತು ವಾಟ್ಸ್‌ಆಪ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಉಚಿತ ಲ್ಯಾಪ್‌ಟಾಪ್‌ ವಿತರಣೆ ಎಂದು ಕೇಂದ್ರ ಸರ್ಕಾರದ್ದೇ ವೆಬ್‌ಸೈಟ್‌ ಎಂಬಂತೆ ವೆಬ್‌ಪೇಜ್‌ ನಿರ್ಮಿಸಿರುವ ಕಿಡಿಗೇಡಿಗಳು
ಉಚಿತ ಲ್ಯಾಪ್‌ಟಾಪ್‌ ವಿತರಣೆ ಎಂದು ಕೇಂದ್ರ ಸರ್ಕಾರದ್ದೇ ವೆಬ್‌ಸೈಟ್‌ ಎಂಬಂತೆ ವೆಬ್‌ಪೇಜ್‌ ನಿರ್ಮಿಸಿರುವ ಕಿಡಿಗೇಡಿಗಳು

ಈ ಲಿಂಕ್‌ ಕ್ಲಿಕ್‌ ಮಾಡಿದ ತಕ್ಷಣ ಲ್ಯಾಪ್‌ಟಾಪ್‌ ಬೇಕಾದವರ ಹೆಸರು, ಅವರ ವಯಸ್ಸು, ವಿದ್ಯಾರ್ಹತೆಯನ್ನು ಮೊದಲು ಕೇಳುತ್ತದೆ, ತದ ನಂತರ ಯಾವ ಬ್ರ್ಯಾಂಡಿನ ಲ್ಯಾಪ್‌ಟಾಪ್‌ ಬೇಕು ಎಂದು ಕೇಳುತ್ತದೆ. ಇದಕ್ಕೆ ಉತ್ತರಿಸಿದ ನಂತರ ” ನೀವು ಉಚಿತ ಲಾಪ್‌ಟಾಪ್‌ ಪಡೆಯಲು ಅರ್ಹರಾಗಿದ್ದೀರಿ, ಈ ಸಂದೇಶವನ್ನು ಎಲ್ಲರಿಗೂ ಶೇರ್‌ ಮಾಡಿ ಮತ್ತು ಲ್ಯಾಪ್‌ಟಾಪ್‌ ಪಡೆಯಿರಿ” ಎಂಬ ಸೂಚನೆ ಕಂಡು ಬರುತ್ತದೆ. ಇದನ್ನು ಗಮನಿಸಿದ ಹಲವು ಮಂದಿ ತಮ್ಮ ಸಾಮಾಜಿಕ ಜಾಲಾತಣದಲ್ಲಿ ವೈರಲ್‌ ಪೋಸ್ಟ್‌ ಅನ್ನು ಶೇರ್‌ ಮಾಡುತ್ತಿದ್ದಾರೆ. 

ಇದರಲ್ಲಿ ಸುಳ್ಳು ಕಮೆಂಟ್‌ಗಳನ್ನು ಸೇರಿಸಲಾಗಿದೆ. ಇದನ್ನೇ ನಂಬಿ ಸಾಕಷ್ಟು ಮಂದಿ ಈ ಪೇಜ್‌ನಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ.
ಇದರಲ್ಲಿ ಸುಳ್ಳು ಕಮೆಂಟ್‌ಗಳನ್ನು ಸೇರಿಸಲಾಗಿದೆ. ಇದನ್ನೇ ನಂಬಿ ಸಾಕಷ್ಟು ಮಂದಿ ಈ ಪೇಜ್‌ನಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ.

 

 

 

 

 

 

 

 

 

“ನೀವು ಉಚಿತ ಲ್ಯಾಪ್‌ಟಾಪ್‌ ಪಡೆಯಲು ಅರ್ಹರಾಗಿದ್ದೀರಿ, ಈ ಮಾಹಿತಿಯನ್ನು ಎಲ್ಲರಿಗೂ ಹಂಚಿಕೊಂಡ ಬಳಿಕ ಲ್ಯಾಪ್‌ಟಾಪ್‌ ಪಡೆಯುತ್ತಿರಿ” ಎಂದು ಸುಳ್ಳು ಭರವಸೆಯನ್ನು ನೀಡುವ ಪುಟ
“ನೀವು ಉಚಿತ ಲ್ಯಾಪ್‌ಟಾಪ್‌ ಪಡೆಯಲು ಅರ್ಹರಾಗಿದ್ದೀರಿ, ಈ ಮಾಹಿತಿಯನ್ನು ಎಲ್ಲರಿಗೂ ಹಂಚಿಕೊಂಡ ಬಳಿಕ ಲ್ಯಾಪ್‌ಟಾಪ್‌ ಪಡೆಯುತ್ತಿರಿ” ಎಂದು ಸುಳ್ಳು ಭರವಸೆಯನ್ನು ನೀಡುವ ಪುಟ “ನೀವು ಉಚಿತ ಲ್ಯಾಪ್‌ಟಾಪ್‌ ಪಡೆಯಲು ಅರ್ಹರಾಗಿದ್ದೀರಿ, ಈ ಮಾಹಿತಿಯನ್ನು ಎಲ್ಲರಿಗೂ ಹಂಚಿಕೊಂಡ ಬಳಿಕ ಲ್ಯಾಪ್‌ಟಾಪ್‌ ಪಡೆಯುತ್ತಿರಿ” ಎಂದು ಸುಳ್ಳು ಭರವಸೆಯನ್ನು ನೀಡುವ ಪುಟ

ಆದರೆ ನೆನಪಿಡಿ ನೀವು ಲಿಂಕ್‌ನ ಪೇಜ್‌ಗಳನ್ನು ಫಾಲೋಡುತ್ತಾ ಅಲ್ಲಿ ನೀಡಿರುವ ಆಯ್ಕೆಗಳನ್ನು ಪೂರ್ಣಗೊಳಿಸಿ ಮುಂದುವರೆಯುತ್ತಿದ್ದರೆ ನಿಮ್ಮ ಎಲ್ಲಾ ಗೌಪ್ಯ ಮಾಹಿತಿಗಳನ್ನು (ನಿಮ್ಮ ಬ್ಯಾಂಕ್‌ ಖಾತೆ, ಆಧಾರ್‌ ಕಾರ್ಡ್‌ ಸಂಖ್ಯೆ ಸೇರಿದಂತೆ ಇನ್ನೀತರೆ ಖಾಸಗಿ ಮಾಹಿತಿಯನ್ನು) ಹಂಚಿಕೊಳ್ಳುತ್ತಿದ್ದೀರಿ ಎಂದರ್ಥ. ಆಗಾಗಿ ಲೇಖನದ್ಲಿ ಲಿಂಕ್‌ಅನ್ನು ಎಲ್ಲಿಯೂ ಹಂಚಿಕೊಳ್ಳಲಾಗಿಲ್ಲ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ಅನ್ನು ಪರಿಶೀಲಿಸಲು ಕೆಲವು ಕೀವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, 10ನೇ ಜುಲೈ 2022 ರಂದು  PIB ಫ್ಯಾಕ್ಟ್ ಚೆಕ್ ತಂಡವು ಪೋಸ್ಟ್ ಮಾಡಿದ ಟ್ವೀಟ್ ಲಭ್ಯವಾಗಿದೆ. ಇದರಲ್ಲಿ  “ವೆಬ್‌ಸೈಟ್ ಲಿಂಕ್‌ನೊಂದಿಗೆ ಪಠ್ಯ ಸಂದೇಶವೊಂದು ಭಾರತ ಸರ್ಕಾರವು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ ಎಂಬ ಹೇಳಿಕೆಯೊಂದಿಗೆ ಪ್ರಸಾರವಾಗುತ್ತಿದೆ. ಇದು ಸುಳ್ಳು ಸುದ್ದಿಯಾಗಿದೆ” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಈ ಬಗ್ಗೆ ಇನ್ನಷ್ಟು ಸರ್ಚ್ ನಡೆಸಿದಾಗ 11ನೇ ಜುಲೈ 2022 ರಂದು ಮತ್ತೊಂದು ಟ್ವಿಟ್‌ ಅನ್ನು PIB  ಫ್ಯಾಕ್ಟ್ ಚೆಕ್ ಹಂಚಿಕೊಂಡಿದೆ. ಇದರಲ್ಲಿ ಅದು “ಎಲ್ಲಾ ವಿದ್ಯಾರ್ಥಿಗಳಿಗೆ 500,000 ಉಚಿತ ಲ್ಯಾಪ್‌ಟಾಪ್‌ಗಳನ್ನು EduMinOfIndia ನೀಡುತ್ತಿದೆ ಎಂಬುದು ಸುಳ್ಳು ಸುದ್ದಿಯಾಗಿದೆ” ಎಂದು ಟ್ವಿಟ್‌ ಮಾಡಿದೆ. ಈ ಟ್ವಿಟ್‌ನಲ್ಲಿ ಕೂಡ ಲ್ಯಾಪ್‌ಟಾಪ್‌ ಹಂಚಿಕೆಯ ಸುಳ್ಳು ಸುದ್ದಿಯನ್ನು ಬಹಿರಂಗ ಪಡಿಸಿದೆ.

ಇನ್ನು ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೇಂದ್ರ ಸರ್ಕಾರ ಯಾವುದಾದರೂ ಉಚಿತ ಲ್ಯಾಪ್‌ಟಾಪ್‌ ಅನ್ನು ನೀಡುವ ಬಗ್ಗೆ ಪ್ರಕಟಣೆ ಹೊರಡಿಸಿದೆಯೇ  ಎಂದು ಹಲವು ಸುದ್ದಿ ತಾಣಗಳನ್ನು ಪರಿಶೀಲಿಸಿದಾಗಲೂ, ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರ ಈ ಯೋಜನೆ ಘೋಷಿಸಿದ್ದು ನಿಜವೇ ಆಗಿದ್ದರೆ ಆ ಕುರಿತು ಬಹುತೇಖ ಸುದ್ದಿ ಮಾಧ್ಯಮಗಳು ವರದಿ ಮಾಡಿರುತ್ತಿದ್ದವು. ಆದರೆ ಆ ರೀತಿಯ ಯಾವುದೇ ವರದಿಗಳು  ಲಭ್ಯವಾಗಿಲ್ಲ. ಹಾಗಾಗಿ ಇದೊಂದು ವಂಚನೆಯ ಜಾಲ ಎಂಬುದು ಸ್ಪಷ್ಟವಾಗಿದೆ.

 

 

 

 

 

 

 

 

 

 

 

ಒಟ್ಟಾರೆಯಾಗಿ ಹೇಳುವುದಾದರೆ, ಕೇಂದ್ರ ಸರ್ಕಾರ ಉಚಿತ ಲ್ಯಾಪ್‌ಟಾಪ್‌ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ ಮತ್ತು ಲಿಂಕ್ ವಂಚನೆಯ ಜಾಲದ ಭಾಗವಾಗಿದ್ದು, ಜನರನ್ನು ಮೋಸಗೊಳಿಸುವ ಉದ್ದೇಶದಿಂದ ಹಂಚಿಕೊಳ್ಳಲಾಗುತ್ತಿದೆ. ಇಂತಹ ಉಚಿತ ಯೋಜನೆ ಎಂಬ ಲಿಂಕ್‌ಗಳ ಬಗ್ಗೆ ಎಚ್ಚರವಿರಲಿ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 2022ರಲ್ಲಿ ಬೆಂಗಳೂರಿನಲ್ಲಿ ಸುರಿದ ಮಳೆಯ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights