FACT CHECK | 40 ಮುಸ್ಲಿಂ ಡಾಭಾಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂಬುದು ನಿಜವೇ?

ರಾಜಸ್ಥಾನ-ಗುಜರಾತ್-ಮಹಾರಾಷ್ಟ್ರ ಹೆದ್ದಾರಿಯಲ್ಲಿರುವ 40ಕ್ಕೂ ಹೆಚ್ಚು ಮುಸ್ಲಿಂ ಡಾಭಾಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಯುವಕನೊಬ್ಬ ಹೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.  ಮುಸ್ಲಿಂ ಆಹಾರದಲ್ಲಿ ನಪುಂಸಕ ಔಷಧಿಗಳನ್ನು ಮತ್ತು ಮಾಂಸಾಹಾರಿ ವಸ್ತುಗಳನ್ನು ಬೆರೆಸಿ ಹಿಂದೂ ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ಯುವಕ ಆರೋಪಿಸಿದ್ದಾನೆ.

ಈ ವಿಡಿಯೋವನ್ನು ಅನೇಕ ಬಿಜೆಪಿ ಬೆಂಬಲಿಗರು ಹಂಚಿಕೊಂಡಿದ್ದು, ಅವುಗಳನ್ನು ಇಲ್ಲಿ ಮತ್ತು ಇಲ್ಲಿ  ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ, “40 ಮುಸ್ಲಿಂ ಹೋಟೆಲ್‌ಗಳ ಮೇಲೆ ಪೊಲೀಸ್ ದಾಳಿ”ಯ ಕುರಿತು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಘಟನೆ ನಡೆದಿರುವ ಕುರಿತು ಯಾವುದೇ ಪತ್ರಿಕಾ ವರದಿಗಳು ಲಭ್ಯವಾಗಿಲ್ಲ. ಇದಲ್ಲದೆ, ವೈರಲ್ ವಿಡಿಯೋದ 32 ಸೆಕೆಂಡುಗಳಲ್ಲಿ ನಾಲ್ಕು ಫೋಟೊಗಳನ್ನು ನೀಡಲಾಗಿದೆ. ಈ ಫೋಟೋಗಳ ಕುರಿತು ಸರ್ಚ್ ಮಾಡಿದಾಗ, ಮೊದಲ ಫೋಟೋವನ್ನು ಜುಲೈ 11, 2019 ರಂದು ಬಿಜ್ನೋರ್ ಪೊಲೀಸರ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. “ಶೇರ್ಕೋಟ್ ಪೊಲೀಸ್ ಠಾಣೆಯಿಂದ ಮದರಸಾಕ್ಕೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರು ಆರೋಪಿಗಳನ್ನು ಪೊಲೀಸರು 01 ಪಿಸ್ತೂಲ್, 04 ಗನ್ನುಗಳು ಮತ್ತು ಭಾರಿ ಪ್ರಮಾಣದ ಕಾರ್ಟ್ರಿಜ್‌ಗಳೊಂದಿಗೆ @bijnorpolice  ಬಂಧಿಸಿದ್ದಾರೆ.”

 

 

 

 

 

 

 

 

 

 

 

 

 

 

ಬಿರಿಯಾನಿಯ ಎರಡನೇ ಫೋಟೋವನ್ನು ಜುಲೈ 1, 2016 ರಂದು ಯೂಟ್ಯೂಬ್ ಚಾನೆಲ್ ‘ವಿಡಿಯೋ ಸ್ಮೈಲೈವ್ – ಹೌ ಟು’ ನಲ್ಲಿ ಲಭ್ಯವಾಗಿದೆ. ಈ ವಿಡಿಯೋದದ ಶೀರ್ಷಿಕೆ ಹೀಗಿದೆ, ಭಾರತೀಯ ಮುಸ್ಲಿಂ ಹಬ್ಬದ ದಮ್ ಬಿರಿಯಾನಿ 30 ಜನರಿಗೆ ತಯಾರಿಸುವುದು ಹೇಗೆ- ಬೀದಿ ಆಹಾರ“. ಬಿರಿಯಾನಿ ತಯಾರಿಸುವ ವಿಡಿಯೋದ ಕವರ್ ಚಿತ್ರವನ್ನು ಆಹಾರ ಜಿಹಾದಿ ಎಂದು ಆರೋಪಿಸಲು ಬಳಸಿಕೊಂಡಿದ್ದಾರೆ.

ಮೇ 2, 2019 ರಂದು dailymirror.lk ನಲ್ಲಿ ಪ್ರಕಟವಾದ ಸುದ್ದಿ ಲೇಖನದಲ್ಲಿ ವೈರಲ್ ವಿಡಿಯೋದಲ್ಲಿ ತೋರಿಸಲಾಗಿರುವ ಮೂರನೇ ಮತ್ತು ನಾಲ್ಕನೇ ಫೋಟೋಗಳು, ಕೊಲಂಬೊದ ವೂಲ್ಫೆಂಡಾಲ್ ರಸ್ತೆಯಲ್ಲಿರುವ ವ್ಯಕ್ತಿ ಮತ್ತು ಅವರ ಮಗನ ಮನೆಯ ಮೇಲೆ ಎಸ್‌ಟಿಎಫ್ ದಾಳಿ ನಡೆಸಿದ ಸಂದರ್ಭದ್ದು ಎಂದು ಹೇಳಲಾಗಿದೆ. ಪಾಕಿಸ್ತಾನದಲ್ಲಿ ತಯಾರಿಸಿದ ಮತ್ತು ಶ್ರೀಲಂಕಾದಲ್ಲಿ ಮಾರಾಟಕ್ಕಾಗಿ ನಿಷೇಧಿಸಲಾದ ಟ್ರಾಮಾಡೋಲ್ ಮತ್ತು ಹಲವಾರು ಅಕ್ರಮ ಮಾದಕವಸ್ತುಗಳನ್ನು ಎಸ್‌ಟಿಎಫ್ ವಶಪಡಿಸಿಕೊಂಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ಸುಳ್ಳು. ಈ ವಿಡಿಯೋದಲ್ಲಿ ಬಳಸಲಾಗಿರುವ ಹಲವು ಫೂಟೇಜ್‌ಗಳು ಕಳೆದ 4 ವರ್ಷದಿಂದ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ. 40 ಮುಸ್ಲಿಂ ಹೋಟೆಲ್‌ (ಡಾಭಾ)ಗಳ ಮೇಲೆ ದಾಳಿ ನಡೆಸಲಾಗಿದೆ ಎಂಬ ವೈರಲ್ ಹೇಳಿಕೆ ಸುಳ್ಳು.  ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಲುಲು ಮಾಲ್‌ಗಳನ್ನು ಗುರಿಯಾಗಿಸಿಕೊಂಡು ಲವ್ ಜಿಹಾದ್ ಎಂದು ಸುಳ್ಳು ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights