FACT CHECK | ಬಾಲಿವುಡ್ ನಟಿ ಕತ್ರಿನಾ ಕೈಫ್ 5 ತಿಂಗಳ ಗರ್ಭಿಣಿ ಎಂದು ಎಡಿಟ್ ಮಾಡಿದ ಫೋಟೊ ಹಂಚಿಕೆ
ಬಾಲಿವುಡ್ ನಟಿ ಕತ್ರಿನಾ ಕೈಫ್ 5 ತಿಂಗಳ ಗರ್ಭಿಣಿ ಎಂದು ಪ್ರತಿಪಾದಿಸಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ಜೊತೆಯಿರುವ ಫೋಟೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

“5 ತಿಂಗಳ ಗರ್ಭಾವಸ್ಥೆಯ ನಂತರ ವಿಕ್ಕಿ ಕೌಶಲ್ ಜೊತೆಗೆ ಕತ್ರಿನಾ ಕೈಫ್ ತನ್ನ ಹೊಟ್ಟೆಯನ್ನು ತೋರಿಸುತ್ತಾ ಫೋಟೋಗೆ ಪೋಸ್ ನೀಡಿದ್ದಾರೆ. ಈ ಪೋಸ್ಟ್ನ ಚಿತ್ರದಲ್ಲಿ ಕತ್ರಿನಾ ತುಂಬು ಗರ್ಭಿಣಿಯಂತೆ ಕಾಣುತ್ತಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ಅನೇಕ ಬಳಕೆದಾರರು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಬಾಲಿವುಡ್ ಪವರ್ ಕಪಲ್ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾಳೆಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಈ ವೈರಲ್ ಫೋಟೊದಲ್ಲಿ ಹಂಚಿಕೊಂಡಂತೆ ಕತ್ರಿನಾ ಕೈಫ್ ನಿಜವಾಗಿಯೂ 5 ತಿಂಗಳ ಗರ್ಭಿಣಿ ಎಂಬ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಕತ್ರಿನಾ 5 ತಿಂಗಳ ಗರ್ಭಿಣಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ಅನ್ನು ಪರಿಶೀಲಿಸಲು ಕೆಲವು ಕೀವರ್ಡ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಕತ್ರಿನಾ ಕೈಫ್ ಗರ್ಭಿಣಿಯಾಗಿರುವ ಕುರಿತು ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಒಂದು ವೇಳೆ ಕತ್ರಿನಾ ಗರ್ಭಿಣಿಯಾಗಿದ್ದು ನಿಜವಾಗಿದ್ದರೆ ಅದು ದೊಡ್ಡ ಮಟ್ಟದ ಸುದ್ದಿಯಾಗುತ್ತಿತ್ತು.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಪ್ರೊಫೈಲ್ಗಳನ್ನು ಪರಿಶೀಸಿದಾಗ ಯಾವುದೇ ಅಪ್ಡೇಟ್ ಪೋಸ್ಟ್ಗಳು ಲಭ್ಯವಾಗಿಲ್ಲ.
ವೈರಲ್ ಚಿತ್ರದಲ್ಲಿನ ಎರಡೂ ಚಿತ್ರಗಳನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಕಲಾವಿದ ದಂಪತಿಗಳಾದ ವಿಕ್ರಾಂತ್ ಮಾಸ್ಸೆ ಮತ್ತು ಅವರ ಪತ್ನಿ ಶೀತಲ್ ಮಾಸ್ಸೆ ಅವರ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ2023ರ ಅಕ್ಟೋಬರ್ 11ರಂದು ಹಂಚಿಕೊಳ್ಳಲಾದ ಮೂಲ ಫೋಟೊ ಲಭ್ಯವಾಗಿದೆ.
Picture 1

ವೈರಲ್ ಚಿತ್ರವನ್ನು ಮೂಲ ಚಿತ್ರದೊಂದಿಗೆ ಹೋಲಿಸಿದಾಗ ಫೋಟೋ-ಎಡಿಟಿಂಗ್ ಸಾಫ್ಟ್ವೇರ್ ಅನ್ನು ಬಳಸಿಕೊಂಡು ಶೀತಲ್ ಅವರ ಮುಖದ ಮೇಲೆ ಕತ್ರಿನಾ ಅವರ ಮುಖವನ್ನು ಅಂಟಿಸಲಾಗಿದೆ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.

2023ರ ಮಾರ್ಚ್ 24ರಂದು ಅರ್ಮಾನ್ ಮಲಿಕ್ ಮತ್ತು ಕೃತಿಕಾ ಮಲಿಕ್ರವರು ಹಂಚಿಕೊಂಡ ಫೋಟೋ ದೊರೆತಿದೆ.
Picture 2

ಅದೇ ರೀತಿಯಾಗಿ, ಎಡಿಟಿಂಗ್ ಟೂಲ್ಗಳನ್ನು ಬಳಸಿಕೊಂಡು ಕತ್ರಿನಾ ಮತ್ತು ವಿಕ್ಕಿ ಇಬ್ಬರ ಮುಖಗಳನ್ನು ಮೂಲ ಫೋಟೋದ ಮೇಲೆ ಲಗತ್ತಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಲಿವುಡ್ ನಟಿ ಕತ್ರಿನಾ ಕೈಫ್ 5ತಿಂಗಳ ಗರ್ಭಿಣಿ ಎಂದು ಎಡಿಟ್ ಮಾಡಿದ ಚಿತ್ರವನ್ನು ಸುಳ್ಳು ಮತ್ತು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕಾಂಗ್ರೆಸ್ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಧರಿಸಿದ್ದ ‘ಶೂ’ನ ಬೆಲೆ 3ಲಕ್ಷ ರೂಪಾಯಂತೆ ಹೌದೆ?

