FACT CHECK | ಪಹಲ್ಗಾಮ್ ದಾಳಿಯ ನಂತರ ಪಶ್ಚಿಮ ಬಂಗಾಳದ ವೈದ್ಯರೊಬ್ಬರು ಮುಸ್ಲಿಂ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ರಾ?
ಏಪ್ರಿಲ್ 22 ರಂದು, ಪಹಲ್ಗಾಮ್‌ನ ಹುಲ್ಲುಗಾವಲುಗಳಲ್ಲಿ, ಪಾಕಿಸ್ತಾನಿ ಭಯೋತ್ಪಾದಕರು ಕ್ರೂರ ಹತ್ಯಾಕಾಂಡವನ್ನು ನಡೆಸಿ, 26 ಹಿಂದೂ ಪ್ರವಾಸಿಗರನ್ನು ಅವರ ಧರ್ಮದಿಂದ ಗುರುತಿಸಿದ ನಂತರ ಕೊಂದರು. ಈ ಘಟನೆ ರಾಷ್ಟ್ರವನ್ನು ತೀವ್ರವಾಗಿ ಆಘಾತಗೊಳಿಸಿತು. ಕೆಲವೇ ದಿನಗಳ ನಂತರ, ಪಶ್ಚಿಮ ಬಂಗಾಳದ ಮಹಿಳಾ ಸ್ತ್ರೀರೋಗ ತಜ್ಞೆ ಡಾ. ಸಿ.ಕೆ. ಸರ್ಕಾರ್ ಧಾರ್ಮಿಕ ಪಕ್ಷಪಾತದಿಂದಾಗಿ ಮುಸ್ಲಿಂ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂದು ಹೇಳಿಕೊಂಡು ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಈ ಘಟನೆಯು ವ್ಯಾಪಕ ಆಕ್ರೋಶ, ಹತಾಶೆಯನ್ನು ಹುಟ್ಟುಹಾಕಿದೆ ಮತ್ತು ವೈದ್ಯಕೀಯ ವೃತ್ತಿಪರರ ನಿಷ್ಪಕ್ಷಪಾತ ಮತ್ತು ನೈತಿಕತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ.
This is Doctor C.K. Sarkar, a gynecologist
She refused to treat a pregnant Muslim woman because of Pahalgam terrorist att@ck
This is unethical and must not be ignored.
Requesting IMA/WB govt to cancel her license immediately.
She doesn’t deserve to be a doctor. pic.twitter.com/aX2kjMPtiU
— Tarun Gautam (@TARUNspeakss) April 26, 2025
ತರುಣ್ ಗೌತಮ್ ಎಂಬ ಎಕ್ಸ್ ಬಳಕೆದಾರರು ಈ ಕುರಿತು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ‘ಇದು ವೈದ್ಯ ಸಿ.ಕೆ. ಸರ್ಕಾರ್, ಸ್ತ್ರೀರೋಗತಜ್ಞ. ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದಾಗಿ ಅವರು ಗರ್ಭಿಣಿ ಮುಸ್ಲಿಂ ಮಹಿಳೆಗೆ ಚಿಕಿತ್ಸೆ ನೀಡಲು ನಿರಾಕರಿಸಿದರು. ಇದು ಅನೈತಿಕ ಮತ್ತು ಇದನ್ನು ಸರ್ಕಾರವು ನಿರ್ಲಕ್ಷಿಸಬಾರದು. ಐಎಂಎ/ಡಬ್ಲ್ಯೂಬಿ ವೈದ್ಯೆಯ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸುವಂತೆ ವಿನಂತಿಸುತ್ತಿದೆ.
“तुम्हारे धर्म के लोग मेरे धर्म के लोगों को मार रहे हैं, तुम लोग हत्यारे हो।”
तुम्हारे पति को हिंदुओं द्वारा मार दिया जाना चाहिए, ताकि तुम हिंदुओं के दर्द को महसूस कर सको…
तुम लोगों को अपने इलाज के लिए केवल मदरसों और मस्जिदों में जाना चाहिए, जहां मुसलमानों को आतंकवादी बनना… pic.twitter.com/WQ8XbrsVqU
— Kavish Aziz (@azizkavish) April 27, 2025
ಚಿಕಿತ್ಸೆಗಾಗಿ ಮದರಸಾ ಮತ್ತು ಮಸೀದಿಗಳಿಗೆ ಮಾತ್ರ ಹೋಗಬೇಕು, ಅಲ್ಲಿ ಮುಸ್ಲಿಮರನ್ನು ಭಯೋತ್ಪಾದಕರಾಗಲು ಕಲಿಸಲಾಗುತ್ತದೆ.” ಕೋಲ್ಕತ್ತಾದ ಗರ್ಭಿಣಿ ಮುಸ್ಲಿಂ ಮಹಿಳೆ ಮಹ್ಫೂಜಾ ಖಾತುನ್ ಅವರು ದೀರ್ಘಕಾಲದವರೆಗೆ ಸ್ತ್ರೀರೋಗತಜ್ಞ ಡಾ. ಸಿ.ಕೆ. ಸರ್ಕಾರ್ ಅವರಿಂದ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಪಹಲ್ಗಾಮ್ ಘಟನೆಯ ನಂತರ ಮಹಿಳಾ ವೈದ್ಯರು ಅವರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರು. “ಕಾಶ್ಮೀರ ಘಟನೆಯ ನಂತರ, ನಾನು ಯಾವುದೇ ಮುಸ್ಲಿಂ ರೋಗಿಗಳನ್ನು ನೋಡಲು ಹೋಗುವುದಿಲ್ಲ” ಎಂದು ವೈದ್ಯರು ಹೇಳಿದರು. ಎಂದು ಕವಿಶ್ ಅಜೀಜ್ ಎಂಬ ಎಕ್ಸ್ ಬಳಕೆದಾರರು ಬರೆದಿದ್ದಾರೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲಿ ಗೂಗಲ್ ಸರ್ಚ್ ಮಾಡಿದಾಗ, ಏಪ್ರಿಲ್ 27, 2025 ರಂದು ಪ್ರಕಟವಾದ ಇಂಡಿಯಾ ಟುಡೇ ವರದಿ ಲಭ್ಯವಾಗಿದೆ. ವರದಿಯ ಪ್ರಕಾರ, ಕೊಂಕಣ ಖಾತುನ್ ಎಂಬ ಗರ್ಭಿಣಿ ಮಹಿಳೆ ಡಾ. ಚಂಪಾಕಲಿ ಸರ್ಕಾರ್, ಮಹಿಳಾ ಸ್ತ್ರೀರೋಗತಜ್ಞೆ ಧಾರ್ಮಿಕ ಪಕ್ಷಪಾತದಿಂದಾಗಿ ತನ್ನ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಖತುನ್, ತನ್ನ ಪತಿ ಶೇಖ್ ಜೊತೆ ವಾಸಿಸುತ್ತಿದ್ದಾರೆ. ಘಟನೆಯ ನಂತರ ಪೊಲೀಸ್ ದೂರು ದಾಖಲಿಸಿದ್ದಾರೆ.
ಡಾ. ಸರ್ಕಾರ್ ಅವರು ಮುಸ್ಲಿಂ ಎಂಬ ಕಾರಣಕ್ಕೆ ಖಾತುನ್‌ಗೆ ಚಿಕಿತ್ಸೆ ನಿರಾಕರಿಸಿದ್ದಾರೆ ಎಂದು ಹೇಳುವ ಫೋಟೋ ಮತ್ತು ಆಡಿಯೋ ಸಂದೇಶ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿವಾದ ಆರಂಭವಾಯಿತು. ಈ ಸಂದೇಶವು ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಈ ಘಟನೆಯನ್ನು ಲಿಂಕ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಈ ಗಂಭೀರ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಡಾ. ಸರ್ಕಾರ್ ಈ ಆರೋಪಗಳನ್ನು ನಿರಾಕರಿಸಿದರು. ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ತಮ್ಮ 30 ವರ್ಷಗಳ ವೈದ್ಯಕೀಯ ಸೇವೆಯಲ್ಲಿ ಯಾವುದೇ ರೋಗಿಯ ವಿರುದ್ಧ ತಾನು ಎಂದಿಗೂ ತಾರತಮ್ಯ ಮಾಡಿಲ್ಲ ಎಂದು ಅವರು ಹೇಳಿದರು. ಸುಳ್ಳು ಸಂದೇಶದ ಹಿಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಯೋಜಿಸುತ್ತಿರುವುದಾಗಿ ಡಾ. ಸರ್ಕಾರ್ ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಲಿಂ ಎಂಬ ಕಾರಣಕ್ಕೆ ಖಾತುನ್ ಎಂಬ ವ್ಯಕ್ತಿಗೆ ಡಾ. ಚಂಪಾಕಲಿ ಸರ್ಕಾರ್ ಅವರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂಬ ಹೇಳಿಕೆ ಸುಳ್ಳು. ವಿಡಿಯೋವನ್ನು ಎಡಿಟ್ ಮಾಡಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಭಾರತೀಯ ಸೇನೆಯು ಉಗ್ರನನ್ನು ಸೆರೆ ಹಿಡಿದಿದೆ ಸಂಬಂಧವಿಲ್ಲದ ವಿಡಿಯೋ ಹಂಚಿಕೆ

