FACT CHECK | ಮದರಸಾ ಮಕ್ಕಳಿಗೆ ಹಿಂದೂ ವಿರೋಧಿ ಪಾಠವನ್ನು ಹೇಳಿಕೊಡಲಾಗುತ್ತಿದೆಯೇ?
ಸಾಮಾಜಿಕ ಮಾಧ್ಯಮಗಳಲ್ಲಿಕೋಮು ದ್ವೇಷದ ನಿರೂಪಣೆಯೊಂದಿಗೆ ಫೋಟೋವೊಂದು ವೈರಲ್ ಆಗುತ್ತಿದೆ. “ಇದು ಮದರಸಾದ ಶಿಕ್ಷಣ ನೀತಿ, ಬಹುತೇಕ ಮದರಸಾಗಳಲ್ಲಿ ಇದನ್ನೇ ಕಲಿಸಲಾಗುತ್ತದೆ. ಈ ಫೋಟೋ ನೋಡಿ ಇದರಲ್ಲಿ ಹಿಂದೂ ವಿರೋಧಿಯ ವಿಷಯವನ್ನು ಕಪ್ಪು ಬೋರ್ಡ್ನಲ್ಲಿ ಕಲಿಸುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ, ಇದನ್ನು ಎಲ್ಲರಿಗೂ ಹಂಚಿಕೊಳ್ಳಿ” ಎಂದು ಬರೆದುಕೊಳ್ಳಲಾಗಿದೆ.

ವೈರಲ್ ಫೋಟೋದಲ್ಲಿ ಹಿಂದೂ ಮತ್ತು ಇಸ್ಲಾಂ ಎಂಬ ಎರಡು ಗುಂಪು ಹಾಗೂ ಅದರ ಅಂಶಗಳನ್ನು ಉಲ್ಲೇಖಿಸಿರುವುದು ಕಂಡುಬಂದಿದೆ. ಈ ಫೋಟೊವನ್ನು ಕೆಲವರು ಕೋಮು ನಿರೂಪಣೆಯುಳ್ಳ ಬರಹಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ಫೋಟೋದ ಅಸಲೀಯತ್ತೇನು ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲಿಸಲು ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಏಪ್ರಿಲ್ 9 2018 ರಂದು ANI UP ಮತ್ತು ಉತ್ತರಖಂಡ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಇದರಲ್ಲಿ ಮೂಲ ಫೋಟೋ ಯಾವುದಕ್ಕೆ ಸಂಬಂಧಿಸಿದೆ ಎಂಬುದನ್ನು ಉಲ್ಲೇಖಿಸಲಾಗಿದೆ. ಇದರ ಪ್ರಕಾರ ಗೋರಖ್ಪುರದಲ್ಲಿರುವ ದಾರುಲ್ ಉಲೂಮ್ ಹುಸೇನಿಯಾ ಮದರಸಾ ಸಂಸ್ಕೃತ ಮತ್ತು ಇತರ ವಿಷಯಗಳನ್ನು ಕಲಿಸಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಈ ಫೋಟೋದಲ್ಲಿ ಕಪ್ಪು ಹಲಗೆಯ ಮೇಲೆ ವಿಭಿನ್ನ ಬರಹಗಳನ್ನು ಬರೆದಿರುವುದು ಕಂಡುಬಂದಿದೆ. ಇದು ವೈರಲ್ ಫೋಟೋಗಿಂತಲೂ ಸಾಕಷ್ಟು ಭಿನ್ನವಾಗಿದೆ.
Goarakhpur: Sanskrit, among other subjects, being taught at Darul Uloom Husainia madrasa. Principal of the madrasa says ‘It’s a modern madrasa under UP Education board & subjects like English, Hindi, Science, Maths & Sanskrit are taught here. They are also taught Arabic’. pic.twitter.com/g2Lc6Hm6Pq
— ANI UP/Uttarakhand (@ANINewsUP) April 9, 2018
ವೈರಲ್ ಆಗಿರುವ ಫೋಟೋ ಮತ್ತು ಮೂಲ ಫೋಟೋವಿನ ಹೋಲಿಕೆಯು ಸಾಕಷ್ಟು ವ್ಯತ್ಯಾಸಗಳಿಂದ ಕೂಡಿರುವುದು ಕಂಡುಬಂದಿದೆ. ಮೂಲ ಫೋಟೋವನ್ನು ಎಡಿಟ್ ಮಾಡಿ ಕಪ್ಪು ಹಲಗೆಯ ಮೇಲಿರುವ ಬರಹಗಳನ್ನು ತಿರುಚಿ ವೈರಲ್ ಫೋಟೋವನ್ನು ಹಂಚಿಕೊಳ್ಳಲಾಗುತ್ತಿರುವುದು ನಾವು ಸ್ಪಷ್ಟವಾಗಿ ಕಂಡುಕೊಂಡಿದ್ದೇವೆ.

ಈ ಬಗ್ಗೆ ಇನ್ನಷ್ಟು ಸರ್ಚ್ ಮಾಡಿದಾಗ, ಏಪ್ರಿಲ್ 2018ರ ಹೊತ್ತಿನಲ್ಲಿ ಹಂಚಿಕೊಳ್ಳಲಾದ ಹಲವಾರು ವರದಿಗಳು ಕಂಡು ಬಂದಿವೆ. ಅವುಗಳಲ್ಲಿ ಕೆಲವು ವೈರಲ್ ಫೋಟೋವನ್ನು ಒಳಗೊಂಡಿದ್ದು, ಈ ವರದಿಗಳ ಪ್ರಕಾರ ಉತ್ತರ ಪ್ರದೇಶದ ಗೋರಖ್ಪುರದಲ್ಲಿರುವ ದಾರುಲ್ ಉಲೂಮ್ ಹುಸೇನಿಯಾ ಮದರಸಾದಲ್ಲಿ ವಿಜ್ಞಾನ, ಗಣಿತ, ಇಂಗ್ಲಿಷ್ ಮತ್ತು ಸಂಸ್ಕೃತ ದಂತಹ ವಿಷಯಗಳನ್ನು ಕಲಿಸಲಾಗುತ್ತದೆ. ಆಧುನಿಕ ಶಿಕ್ಷಣವನ್ನು ಪರಿಚಯಿಸುವ ಮೂಲಕ ಈ ಮದರಸಾ ಗಮನ ಸೆಳೆದಿದೆ. ಮದರಸಾ ಯುಪಿ ಶಿಕ್ಷಣ ಮಂಡಳಿಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಮತ್ತು ರಾಜ್ಯದ್ಯಂತ ಮದರಸಾ ಶಿಕ್ಷಣವನ್ನು ಆಧುನಿಕರಿಸುವ ವಿಶಾಲ ಪ್ರಯತ್ನದ ಭಾಗ ಇದಾಗಿದೆ ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮದರಸವೊಂದರಲ್ಲಿ ಸಂಸ್ಕೃತವನ್ನು ಕಲಿಸಲಾಗುತ್ತಿದ್ದ ಫೋಟೋವನ್ನು ಎಡಿಟ್ ಮಾಡಿ ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪೂರಿ ಜಗನ್ನಾಥ ರಥದ ಕೆಳಗೆ ಮುಸ್ಲಿಂ ಮಹಿಳೆಯೊಬ್ಬರು ನಮಾಜ್ ಮಾಡಿದ್ದಾರೆ ಎಂದು ಹಂಚಿಕೊಳ್ಳಲಾದ ವಿಡಿಯೋದ ಅಸಲೀಯತ್ತೇನು?

