FACT CHECK : ಮಸಾಜ್ ಪಾರ್ಲರ್ನಲ್ಲಿ ಫೇಶಿಯಲ್ ಮಾಡಿಸಿಕೊಳ್ಳುತ್ತಿರುವುದು ಪ್ರಧಾನಿ ಮೋದಿ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಮಹಿಳೆಯೊಬ್ಬರು ವ್ಯಕ್ತಿಗೆ ಫೇಶಿಯಲ್ ಮಸಾಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದು ಹೇಳಿಕೊಂಡು ಹಲವರು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
BREAKING:
Maharaj’s Massage
LEAKED video of Narendra Modi massage , reports coming that Intel agencies of US has ton of videos of him in compromising Positions. pic.twitter.com/FkPGByJCvT
— Israr Ahmed Rajpoot (@ia_rajpoot) April 18, 2026
ವೈರಲ್ ವಿಡಿಯೋದಲ್ಲಿ ಬಿಳಿ ಗಡ್ಡವಿರುವ ವ್ಯಕ್ತಿಯೊಬ್ಬರಿಗೆ ಮಹಿಳೆಯೊಬ್ಬರು ಫೇಶಿಯಲ್ ಮಸಾಜ್ ಮಾಡುತ್ತಿರುವ ದೃಶ್ಯಗಳನ್ನು ಕಾಣಬಹುದು. ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವವರು, “ನರೇಂದ್ರ ಮೋದಿಯವರ ಮಸಾಜ್ ವಿಡಿಯೋ ಸೋರಿಕೆಯಾಗಿದೆ, ಅಮೆರಿಕದ ಗುಪ್ತಚರ ಸಂಸ್ಥೆಗಳ ಬಳಿ ಅವರ ಇಂತಹ ಹಲವಾರು ವಿಡಿಯೋಗಳಿವೆ” ಎಂಬ ಅರ್ಥದ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡುತ್ತಿದ್ದಾರೆ. X (ಹಿಂದಿನ ಟ್ವಿಟರ್) ನಲ್ಲಿ ಮಾಡಲಾದ ಈ ಪೋಸ್ಟ್ 16 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.
ಹಾಗಿದ್ದರೆ ಪೋಸ್ಟ್ನಲ್ಲಿ ಹೇಳುತ್ತಿರುವಂತೆ ಬಿಳಿ ಗಡ್ಡದ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಎಂಬುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಏಪ್ರಿಲ್ 12 ರಂದು ‘ಪರ್ದೀಪ್ ಕೌರ್ ಧಿಲ್ಲೋನ್’ (Pardeep Kaur Dhillon) ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಪೋಸ್ಟ್ ಮಾಡಿದ ವಿಡಿಯೋ ಲಭ್ಯವಾಗಿದೆ. ವೈರಲ್ ವಿಡಿಯೋದಲ್ಲಿರುವ ವ್ಯಕ್ತಿ ಪ್ರಧಾನಿ ಮೋದಿ ಅಲ್ಲ, ಆತನ ಹೆಸರು ಜಸ್ಪಾಲ್ ಸಿಂಗ್ ಸರೈ ಎಂದು ಗುರುತಿಸಲಾಗಿದೆ.

ನಂತರ, ನಾವು ಅದೇ ಇನ್ಸ್ಟಾಗ್ರಾಮ್ ಖಾತೆಯನ್ನು ಪರಿಶೀಲಿಸಿದಾಗ, ಮಾರ್ಚ್ 28 ರಂದು ಪೋಸ್ಟ್ ಮಾಡಲಾದ ಮತ್ತೊಂದು ವಿಡಿಯೋ ಕಂಡುಬಂದಿದೆ. ಅದರಲ್ಲಿ ಇದೇ ಗಡ್ಡಧಾರಿ ವ್ಯಕ್ತಿ ಫೇಶಿಯಲ್ ಮಸಾಜ್ ಮಾಡಿಸಿಕೊಳ್ಳುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು.
ವ್ಯಕ್ತಿಯ ಅಸಲಿ ಗುರುತು ಏನು?
ಮಾರ್ಚ್ 16 ರಂದು ಹಂಚಿಕೊಳ್ಳಲಾದ ತನ್ನ ಹಳೆಯ ಪೋಸ್ಟ್ವೊಂದರಲ್ಲಿ, ಖಾತೆದಾರರಾದ ಮಹಿಳೆ ಆ ಗಡ್ಡಧಾರಿ ವ್ಯಕ್ತಿಯನ್ನು ‘ತನ್ನ ಪತಿ’ ಎಂದು ಗುರುತಿಸಿದ್ದಾರೆ. ಆ ಪೋಸ್ಟ್ನ ಶೀರ್ಷಿಕೆಯಲ್ಲಿ, “ಇಸ್ತಾನ್ಬುಲ್ನಲ್ಲಿ, ಅನೇಕರು ನನ್ನ ಪತಿಯ ಪೇಟವನ್ನು (ಟರ್ಬನ್) ಗಮನಿಸುತ್ತಾರೆ. ಆದರೆ ನಮಗೆ, ಪೇಟವು ಕೇವಲ ನಾವು ಧರಿಸುವ ವಸ್ತುವಲ್ಲ – ಇದು ನಮ್ಮ ನಂಬಿಕೆ, ಸಂಸ್ಕೃತಿ ಮತ್ತು ಗುರುತನ್ನು ಪ್ರತಿನಿಧಿಸುತ್ತದೆ…” ಎಂದು ಬರೆಯಲಾಗಿತ್ತು.

ಹೆಚ್ಚಿನ ಪರಿಶೀಲನೆಗಾಗಿ ನಾವು ಧಿಲ್ಲೋನ್ ಅವರ ಫೇಸ್ಬುಕ್ ಖಾತೆಯನ್ನು ಪರಿಶೀಲಿಸಿದಾಗ. ಅವರು ಮೂಲತಃ ಪಂಜಾಬ್ನ ಅಮೃತಸರದವರಾಗಿದ್ದು, ಪ್ರಸ್ತುತ ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸಿಸುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. ದಂಪತಿಗಳ ಫೋಟೋವನ್ನು ಒಳಗೊಂಡಿರುವ ಅವರ ಫೇಸ್ಬುಕ್ ಖಾತೆಯ ಏಪ್ರಿಲ್ 14ರ ಇತ್ತೀಚಿನ ಪೋಸ್ಟ್ನಲ್ಲಿ, ಆ ವ್ಯಕ್ತಿಯನ್ನು ಜಸ್ಪಾಲ್ ಸಿಂಗ್ ಸರೈ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ವೈರಲ್ ವಿಡಿಯೋದಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವ್ಯಕ್ತಿ ‘ಜಸ್ಪಾಲ್ ಸಿಂಗ್ ಸರೈ’. ಆತನನ್ನು ಪ್ರಧಾನಿ ನರೇಂದ್ರ ಮೋದಿ ಎಂದು ತಪ್ಪಾಗಿ ಬಿಂಬಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂಬುದು ನಮ್ಮ ಫ್ಯಾಕ್ಟ್ ಚೆಕ್ನಿಂದ ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ಇದನ್ನು ಓದಿರಿ : FACT CHECK : ಪ್ರಧಾನಿ ಮೋದಿಗೆ ಜಲ್ ಮುರಿ ಮಾಡಿಕೊಟ್ಟ ಅಂಗಡಿ ವ್ಯಾಪಾರಿ NSG ಕಮಾಂಡೋ ಅಲ್ಲಾ!
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

