Categories
Breaking News District State

ಮೈಸೂರಿನ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದಲ್ಲಿ 3 ಚಿರತೆ ಶವ ಪತ್ತೆ….

ಮೈಸೂರಿನ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದಲ್ಲಿ 3 ಚಿರತೆ ಶವ ಪತ್ತೆಯಾಗಿದೆ. ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಜಮೀನಿನಲ್ಲಿ 3 ಚಿರತೆ ಶವಗಳು ಸಿಕ್ಕಿವೆ.

ಹಲ್ಲರೆ ಗ್ರಾಮದ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದ ರೈತ ಚೆನ್ನಬಸಪ್ಪ ಜಮೀನಿನಲ್ಲಿ ಸುಮಾರು 10 ವರ್ಷದ ಹೆಣ್ಣು ಚಿರತೆ, 8 ತಿಂಗಳ 2 ಹೆಣ್ಣು ಚಿರತೆ ಮರಿಗಳು ಎಂದು ಗುರುತಿಸಲಾಗಿದೆ. ವಿಷದ ಆಹಾರ ಸೇವಿಸಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ನಂಜನಗೂಡು ಆರ್ ಎಫ್ಓ ಲೋಕೇಶ್ ಮೂರ್ತಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

ನಾಯಿಗಳ ಹಾವಳಿ ತಪ್ಪಿಸಲು ವಿಷಾಹಾರ ಇಟ್ಟಿರುವ ಶಂಕೆ ಇದ್ದು, ಈ ಬಗ್ಗೆ  ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ಅರಣ್ಯ ವಲಯದಿಂದ ಬಂದಿದ್ದ ಚಿರತೆಗಳು ಸಾವನಪ್ಪಿರುವ ಜಮೀನಿನ ಮಾಲೀಕ ಚೆನ್ನಬಸಪ್ಪ ಕೂಡ ನಾಪತ್ತೆಯಾಗಿದ್ದಾನೆ.

Categories
Breaking News National Political

ಮತ್ತೆ 3 ದಿನಗಳ ಕಾಲ ಪಿ.ಚಿದಂಬರಂ ಸಿಬಿಐ ವಶಕ್ಕೆ : ವಕೀಲರ ವಿರುದ್ಧ ಕಿಡಿ

ಮತ್ತೆ 3 ದಿನಗಳ ಕಾಲ ಪಿ.ಚಿದಂಬರಂ ಸಿಬಿಐ ವಶಕ್ಕೆ ಪಡೆದಿದ್ದಾರೆ.

ಹೌದು.. ಐಎನ್‌ಎಕ್ಸ್‌ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರನ್ನು ದೆಹಲಿ ನ್ಯಾಯಾಲಯ ಮತ್ತೆ 3 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ. ಆದರೆ ವಿಚಾರಣೆ ವೇಳೆ ಸಿಬಿಐ ವಕೀಲರ ವಿರುದ್ಧ ಕಿಡಿಕಾರಿದ ಸುಪ್ರೀಂಕೋರ್ಟ್‌, ಇನ್ನೂ ಎಷ್ಟುದಿನ ಅವರನ್ನು ವಿಚಾರಣೆಗೆ ಗುರಿಪಡಿಸಬೇಕು.

ಮೊದಲು 5 ದಿನ ಕೇಳಿದ್ದೀರಿ. ಮೊದಲ ಬಾರಿಯೇ 15 ದಿನಗಳ ವಶಕ್ಕೆ ನೀಡುವಂತೆ ಏಕೆ ಕೇಳಲಿಲ್ಲ? ಅವರನ್ನೇನು ಒಂದು ತಿಂಗಳ ಕಾಲ ವಿಚಾರಣೆಗೆ ಗುರಿಪಡಿಸುವಿರೇ ಎಂದು ಪ್ರಶ್ನಿಸಿತು. ಈ ವೇಳೆ ಸ್ಪಷ್ಟನೆ ನೀಡಿದ ಸಿಬಿಐ ಪರ ವಕೀಲರು, ಚಿದಂಬರಂ ಅವರನ್ನು ನಿತ್ಯವೂ 8-10 ತಾಸು ಪ್ರಶ್ನೆಗೆ ಗುರಿಪಡಿಸಲಾಗುತ್ತಿದೆ. ಆದರೆ ಅವರು ಸೂಕ್ತ ಉತ್ತರ ನೀಡದೇ ನುಣುಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಹೀಗಾಗಿ ಇನ್ನಷ್ಟು ವಿಚಾರಣೆಯ ಅವಶ್ಯಕತೆ ಇದೆ ಎಂದು ಹೇಳಿದರು.

ಕೊನೆಗೆ ಸೆ.2ರವರೆಗೆ ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಿ ಕೋರ್ಟ್‌ ಆದೇಶಿಸಿತು. ಇದೇ ವೇಳೆ ಸಿಬಿಐ ವಾದಕ್ಕೆ ತಮ್ಮ ಪರ ವಕೀಲರು ಸೂಕ್ತ ಪ್ರತ್ಯುತ್ತರ ನೀಡುತ್ತಿಲ್ಲ ಎಂದು ಅಸಮಾಧಾನಗೊಂಡ ಚಿದು, ಕಟಕಟೆಯಲ್ಲಿ ತಾವೇ ಎದ್ದುನಿಂತ ಕೆಲ ಕಾಲ ತಮ್ಮ ಪರ ವಾದ ಮಂಡಿಸಿದ ಘಟನೆಯೂ ಗುರುವಾರ ನಡೆಯಿತು.

Categories
Breaking News District State

ಮರಳು ದಿಬ್ಬ ಕುಸಿದು 3 ಮಕ್ಕಳ ಸಾವು ಪ್ರಕರಣ : ಜನ‌ ಸೇರುವ ಮುನ್ನ ಶವಗಳನ್ನ‌ ಸಾಗಿಸಿದ ದಂಧೆಕೋರರು

ಕೊಪ್ಪಳದಲ್ಲಿ ನಡೆದ  ಮರಳು ದಿಬ್ಬ ಕುಸಿದು 3 ಮಕ್ಕಳ ಸಾವು ಪ್ರಕರಣ ಸಾರ್ವಜನಿಕೆರ ಆಕ್ರೋಶಕ್ಕೆ  ಕಾರಣವಾಗಿದೆ.  ಮರಳು ಲೀಜ್ ಪಡೆದ ಮಾಫಿಯಾಕೋರರ ಅಮಾನವೀಯ ವರ್ತನೆಯಿಂದ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆನ್ನೆ ಮರಳು ದಿಬ್ಬ ಕುಸಿದು 3 ಮಕ್ಕಳ ಸಾವನ್ನಪ್ಪಿದ್ದರು.  ಘಟನೆ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಮೊದಲು ಬಂದ ದಂಧೆಕೋರರು,  ಮಕ್ಕಳ ಸಾವಿಗೆ ಪರಿಹಾರ ಕೊಡುತ್ತೇವೆ, ವಿಷಯ ಬಹಿರಂಗ ಮಾಡದಿರಲು ಪಾಲಕರಿಗೆ ತಾಕೀತು ಮಾಡಿದ್ದಾರೆ. ಜೊತೆಗೆ ಜನ‌ ಸೇರುವ ಮುನ್ನ ಶವಗಳನ್ನ‌ ಪಾಲಕರ ಮನೆಗೆ ಹೊತ್ತೊಯ್ದದಿದ್ದಾರೆ.

ಮೃತ ಮಕ್ಕಳ ಶವಗಳನ್ನು‌ ದೂರ ಸಾಗಿಸಲು ಯತ್ನಿಸಿ ಜನರಿಂದ ದಂಧೆಕೋರರಿಗೆ ಜನರಿಂದ ಛೀಮಾರಿ ಹಾಕಲಾಗಿದೆ. ಶವಗಳನ್ನ ಸಾಗಿಸುವುದನ್ನ ನೋಡಿದ ಸ್ಥಳೀಯರು, ಮರಳಿನ‌ ಗುಡ್ಡದ ಪಕ್ಕವೇ ಶವ ಇಡುವಂತೆ ಲೀಜ್ ದಾರರೊಂದಿಗೆ ಗ್ರಾಮಸ್ಥರ ವಾಗ್ವಾದಕ್ಕಿಳಿದಿದ್ದಾರೆ. ಘಟನೆ ಪರಿಶೀಲನೆಗೆ ಆಗಮಿಸಿದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.  ಈ ಮಧ್ಯೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದೆ. ಮರಳು ಅಕ್ರಮ‌ ದಂಧೆಗೆ ಇನ್ನೂ ಎಷ್ಟು ಜೀವ ಬಲಿ ಕೊಡಬೇಕು ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಲಾಠಿ‌ ಚಾರ್ಜ್ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದಾಗ, ಕೊನೆಗೆ ಅಧಿಕಾರಿಗಳ ಮನವರಿಕೆಗೆ ಗ್ರಾಮಸ್ಥರು ಮಣಿದಿದ್ದಾರೆ. ಶವಪರೀಕ್ಷೆಗೆ ಕೊನೆಗೂ ಪೊಲೀಸ್ ವಾಹನದಲ್ಲೇ ಮಕ್ಕಳ ಶವ ಸಾಗಣೆ ಮಾಡಲಾಗಿದೆ.  ಮಕ್ಕಳನ್ನ ಕಳೆದುಕೊಂಡು ದುಃಖದಲ್ಲಿ ಪಾಲಕರು ದಿಕ್ಕು ತೋಚದಂತಾಗಿದ್ದಾರೆ. ಮಕ್ಕಳ ಶವ ನೀಡದಿರಲು ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.

 

Categories
Breaking News District State

ಕರಾವಳಿಯ 3 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ…

ರಾಜ್ಯದ ಕೆಲ ಭಾಗಗಳಲ್ಲಿ ಮನೆಗಳಿಗೆ ಹೊಕ್ಕ ನೀರು ಇನ್ನೂ ಖಾಲಿ ಆಗಿಲ್ಲಾ. ಅದಾಗಲೇ ಕರಾವಳಿ ಭಾಗದ ಜನರಿಗೆ ಮೊತ್ತೊಂದು ಆತಂಕ ಎದುರಾಗಿದೆ.

ರಾಜ್ಯ ಹವಾಮಾನ ಇಲಾಖೆ ಕರಾವಳಿಯಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದ್ದು, ಕರಾವಳಿಯ 3 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಆಗಸ್ಟ್ 29ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಈ ಮೂರು ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಸದ್ಯ ಕೆಲವು ಗಂಟೆಗಳಿಂದ ನಿರಂತರವಾಗಿ ಮಂಗಳೂರಿನಲ್ಲಿ ಮಳೆಯಾಗುತ್ತಿದೆ. ಕಳೆದ ಮೂರು ದಿನಗಳು ಕೊಂಚ ಬಿಡುವ ಕೊಟ್ಟಿದ್ದ ಮಳೆರಾಯ ಮತ್ತೆ ಆರ್ಭಟ ಶುರು ಮಾಡಿಕೊಂಡಿದ್ದಾನೆ. ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ರಾಜ್ಯದ ಹಲವು ಜಿಲ್ಲೆಗಳು ಪ್ರವಾಹ ಪ್ರತಿಸ್ಥಿತಿ ಎದುರಿಸಿತ್ತು. ಈಗ ಮತ್ತೆ ಭಾರೀ ಮಳೆಯಾಗುವ ಮುನ್ಸುಚನೆ ಜನರಲ್ಲಿ ಆತಂಕ ಸೃಷ್ಟಿಸಿದೆ.

Categories
Breaking News National Political

ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ : 3 ಶಾಸಕರು ಬಿಜೆಪಿ ಸೇರ್ಪಡೆ..?

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೈಯಲ್ಲಿ ಭರ್ಜರಿ ಹೊಡೆತ ತಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಂದು ಆಘಾತ ಎದುರಿಸಬೇಕಾಗಿ ಬಂದಿದೆ.

ಪಕ್ಷದ ಇಬ್ಬರು ಶಾಸಕರಾದ ಶೀಲಭದ್ರ ದತ್ತಾ ಮತ್ತು ಸುನಿಲ್‌ ಸಿಂಗ್‌ ಸೋಮವಾರ ಸಂಜೆ ನವದೆಹಲಿಗೆ ಆಗಮಿಸಿದ್ದಾರೆ. ಅವರ ಜೊತೆಗೆ ಇತ್ತೀಚೆಗಷ್ಟೇ ಟಿಎಂಸಿಯಿಂದ ಅಮಾನತುಗೊಂಡ ಬಿಜೆಪಿ ನಾಯಕ ಮುಕುಲ್‌ ರಾಯ್‌ ಅವರ ಪುತ್ರ ಶಾಸಕ ಸುಭ್ರಾಂಶ್ಷು ರಾಯ್‌ ಕೂಡಾ ಇದ್ದಾರೆ.

ಈ ಮೂವರೂ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಟಿಎಂಸಿಯ 140ಕ್ಕೂ ಹೆಚ್ಚು ಬಂಡಾಯ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಮುಕುಲ್‌ ರಾಯ್‌ ಹೇಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Categories
Breaking News National

ಗುಜರಾತ್‌ನಲ್ಲಿ ನಡೆದ 17ರಲ್ಲಿ 3 ಎನ್‌ಕೌಂಟರ್‌ಗಳು ನಕಲಿ : ನ್ಯಾ.ಬೇಡಿ ಆಯೋಗ

2002-2006ರ ಅವಧಿಯಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಗುಜರಾತ್‌ನಲ್ಲಿ ನಡೆದಿದ್ದ ಎನ್‌ಕೌಂಟರ್‌ಗಳು ಮುಸ್ಲಿಂ ತೀವ್ರವಾದಿಗಳನ್ನು ಗುರಿಯಾಗಿಸಲಾಗಿತ್ತು ಎಂಬ ಆರೋಪವನ್ನು ನ್ಯಾ.ಎಚ್.ಎಸ್.ಬೇಡಿ ಆಯೋಗ ನಿರಾಕರಿಸಿದೆ. ಸುಪ್ರೀಂ ಕೋರ್ಟ್ ನೇಮಿಸಿದ ಈ ಆಯೋಗವು ತನ್ನ ಅಂತಿಮ ವರದಿ ನೀಡಿದೆ.

ನಕಲಿ ಎನ್‌ಕೌಂಟರ್‌ ಮೂಲಕ ಮುಸ್ಲಿಂ ತೀವ್ರವಾದಿಗಳನ್ನು ಆಯ್ಕೆ ಮಾಡಿಕೊಂಡು ಕೊಲ್ಲಲು ರಾಜ್ಯ ಸರ್ಕಾರ ಮೌಖಿಕ ಸೂಚನೆ ನೀಡಿತ್ತು ಎಂಬುದಾಗಿ ಗುಜರಾತ್‌ನ ಮಾಜಿ ಡಿಜಿಪಿ ಆರ್‌ಬಿ ಶ್ರೀಕುಮಾರ್ ಅವರು ಮಾಡಿದ್ದ ಆರೋಪವನ್ನು ಈ ವರದಿಯು ತಿರಸ್ಕರಿಸಿದೆ.
ಶ್ರೀಕುಮಾರ್ ಅವರು 2002ರ ಗೋಧ್ರಾ ಘಟನೆಯ ವೇಳೆ ಗುಜರಾತ್‌ನಲ್ಲಿ ಶಸ್ತ್ರಾಸ್ತ್ರ ಘಟಕದ ಹೆಚ್ಚುವರಿ ಡಿಜಿಪಿಯಾಗಿದ್ದರು. ಎರಡು ಬಾರಿ ಅವರು ಆಯೋಗದ ಮುಂದೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದರು.

ಮುಸ್ಲಿಮರನ್ನು ಕೊಲ್ಲುವಂತೆ ನನಗೆ ನೀಡಲಾದ ಮೌಖಿಕ ಆದೇಶವನ್ನು ನಾನು ಪಾಲಿಸಲಿಲ್ಲ. ಹಾಗಾಗಿ ನನಗೆ ಬಡ್ತಿ ನಿರಾಕರಿಸಿಲಾಯಿತು ಎಂದು ಶ್ರೀಕುಮಾರ್ ಹೇಳಿದ್ದರು. ಆದರೆ ಶ್ರೀಕುಮಾರ್ ಅವರ ಆರೋಪಗಳಿಗೆ ಪುಷ್ಟಿ ನೀಡುವ ಯಾವುದೇ ಪೂರಕ ಸಾಕ್ಷ್ಯಗಳಿಲ್ಲ ಎಂದು ಬೇಡಿ ಆಯೋಗ ಹೇಳಿದೆ.

ಆಯೋಗ ತನಿಖೆ ನಡೆಸಿದ 17 ಎನ್‌ಕೌಂಟರ್‌ಗಳ ಪೈಕಿ 14 ಪ್ರಕರಣಗಳಲ್ಲಿ ಗುಜರಾತ್ ಪೊಲಿಸರಿಗೆ ಕ್ಲೀನ್‌ಚಿಟ್ ನೀಡಲಾಗಿದೆ. 3 ಎನ್‌ಕೌಂಟರ್ ನಕಲಿಯಾಗಿದ್ದು ಕೊಲೆ ಆರೋಪ ಎದುರಿಸುತ್ತಿರುವ ಪೊಲೀಸರ ವಿಚಾರಣೆಗೆ ಶಿಫಾರಸು ಮಾಡಿದೆ. ಈ ಎನ್‌ಕೌಂಟರ್‌ಗಳಲ್ಲಿ ಕಾಸಿಮ್ ಜಾಫರ್, ಸಮೀರ್‌ ಖಾನ್ ಹಾಗೂ ಹಾಜಿ ಇಸ್ಮಾಯಿಲ್ ಮೃತರಾಗಿದ್ದರು.

Categories
Breaking News State

ಅಂಬರೀಶ್ ನಿಧನ ಹಿನ್ನೆಲೆ : ರಾಜ್ಯದಲ್ಲಿ 3 ದಿನಗಳ ಕಾಲ ಶೋಕಾಚರಣೆ – ಸಿಎಂ ಘೋಷಣೆ

ಬೆಂಗಳೂರು, ನ.25- ಇಹಲೋಕ ತ್ಯಜಿಸಿರುವ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನ ಕಾಲ ಶೋಕಾಚರಣೆಯನ್ನು‌ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ವಿಕ್ರಂ ಆಸ್ಪತ್ರೆಯಲ್ಲಿ ಸುಧೀರ್ಘ ಸಮಯ ಇದ್ದು ಅಂಬರೀಶ್ ನಿಧನದ ನಂತರದ ಬೆಳವಣಿಗೆಗಳನ್ನು ಖುದ್ದು ಪರಿಶೀಲಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ನಾಳೆ ಬೆಳಗ್ಗೆ ಅಂಬರೀಶ್ ಅವರ ಅಂತಿಮ‌ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗುವುದು. ಅಂಬರೀಶ್ ಅವರ ಸ್ಮರ್ಣಾರ್ಥ ಸ್ಮರಕವನ್ನು ನಿರ್ಮಿಸಬೇಕಿರುವುದರಿಂದ ಬೆಂಗಳೂರಿನಲ್ಲೆ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಹೇಳಿದ್ದಾರೆ.
ಇಂದಿನಿಂದ ಮೂರು ದಿನ ಕಾಲ ರಾಜ್ಯದಲ್ಲಿ ಶೋಕಾಚರಣೆ ಆಚರಿಸಲಾಗುವುದು ಎಂದು ಹೇಳಿದರು.
ಅಂಬರೀಶ್ ಅವರು ನನಗೆ ಆತ್ಮೀಯರಾಗಿದ್ದರು.‌ ಚಿತ್ರರಂಗದ ಉತ್ತಮ‌ಕಲಾವಿದ ಇಂದು ನಿಧನರಾಗಿದ್ದಾರೆ. ಅನೇಕ ಬಾರಿ‌ ಕ್ಲಿಷ್ಠ ಸಂದರ್ಭದಲ್ಲಿ ಜೀವ ಉಳಿಸಿಕೊಂಡಿದ್ದರು. ಆದರೆ ಇಂದು ಅವರು ಸಾವನ್ನು ಜಯಿಸಲಾಗಿಲ್ಲ. ಅಂಬರೀಶ್ ವಿಷಯದಲ್ಲಿ ನಮಗೆ ದೇವರ ಕರುಣೆ ಇಲ್ಲವಾಗಿದೆ ಎಂದು ಶೋಕ ವ್ಯಕ್ತ ಪಡಿಸಿದರು.
ಭಾನುವಾರ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ‌ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಅಭಿಮಾನಿಗಳು ತಾಳ್ಮೆ ಕಳೆದುಕೊಳ್ಳದೆ, ಶಾಂತಿಯುತವಾಗಿರಬೇಕು. ಅಂಬರೀಶ್ ಅಂಯ್ಯಕ್ರಿಯೆಗೆ ತಾಳ್ಮೆಯಿಂದ ಸಹಕರಿಸಿ.‌ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಹಕಾರ ನೀಡಿ ಎಂದು ಮನವಿ ಮಾಡಿದರು.
ಕುಟುಂಬದ ಕ್ರಿಯಾವಿಧಿಗಳು ಪೂರ್ಣಗೊಂಡ ನಂತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.
ಮಂಡ್ಯಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಿ ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು ಎಂಬುದು ಅಂಬರೀಶ್ ಅವರ ಪುತ್ರ ಅಭಿಷೇಕ ಅವರ ಆಸೆ. ಆದರೆ ಬೆಂಗಳೂರಿನಿಂದ ಮಂಡ್ಯಕ್ಕೆ ತೆಗೆದುಕೊಂಡು ಹೋಗಿ ಮತ್ತೆ ವಾಪಾಸ್ ತರುವುದು ಕಷ್ಟವಾಗುವುದೆ. ಅಭಿಷೇಕ್ ನನ್ನ ಮಗನ ಸಮಾನ ಆತನ ಆಸೆ ನನಗೆ ಅರ್ಥವಾಗುತ್ತದೆ. ಆದರೆ ವಾಸ್ತವವಾಗಿ ಆ ರೀತಿ ಮಾಡುವುದು ಕಷ್ಟವಾಗಲಿದೆ. ಮಂಡ್ಯದ ಜನ ಬೆಂಗಳೂರಿಗೆ ಬಂದು ಅಂತಿಮ ದರ್ಶನ ಪಡೆಯಲು ಮಂಡ್ಯ, ಮೈಸೂರು ಭಾಗದ ಜನರಿಗೆ ಕೆಎಸ್ ಆರ್ ಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡುವುದಾಗಿ ಹೇಳಿದರು.

Categories
Breaking News National

ಅಮೃತಸರದ ನಿರಂಕಾರಿ ಭವನದ ಮೇಲೆ ಗ್ರೆನೇಡ್ ದಾಳಿ – ಮೂವರ ಸಾವು, ಹಲವರಿಗೆ ಗಾಯ

ಪಂಜಾಬ್ ಅಮೃತಸರ ಜಿಲ್ಲೆಯ ರಾಜಾಸಂಸಿ ಹಳ್ಳಿಯ ಪ್ರಾರ್ಥನಾಲಯ ನಿರಂಕಾರಿ ಭವನದ ಮೇಲೆ ಗ್ರೆನೇಡ್ ದಾಳಿ ನಡೆಸಲಾಗಿದ್ದು, ಮೂವರು ದುರ್ಮರಣ ಹೊಂದಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ರವಿವಾರ ನಡೆದಿದೆ.

‘ ಮುಖಗಳನ್ನು ಮುಚ್ಚಿಕೊಂಡು ಬಂದ ಬೈಕ್ ಸವಾರರಿಬ್ಬರು ನಿರಂಕಾರಿ ಭವನದೆಡೆಗೆ ಗ್ರೆನೇಡ್ ಅನ್ನು ಎಸೆದರು ‘ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನಿರಂಕಾರಿ ಭವನದಲ್ಲಿ ಸುಮಾರು 250ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಗ್ರೆನೇಡ್ ಎಸೆಯಲಾಗಿದೆ.

‘ ಗ್ರೆನೇಡ್ ದಾಳಿಯಲ್ಲಿ ಮೃತಪಟ್ಟವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ ‘ ಎಂದು ಹಿರಿಯ ಅಧಿಕಾರಿ ಸುರಿಂದರ್ ಪಾಲ್ ಸಿಂಗ್ ಪರ್ಮಾರ್ ತಿಳಿಸಿದ್ದಾರೆ.

Categories
Breaking News State

ಅನಂತ್ ಕುಮಾರ್ ನಿಧನ ಹಿನ್ನೆಲೆ : ಶಾಲಾ, ಕಾಲೇಜುಗಳಿಗೆ ರಜೆ – ರಾಜ್ಯದಲ್ಲಿ 3 ದಿನಗಳ ಶೋಕಾಚರಣೆ

ಬಿಜೆಪಿ ಹಿರಿಯ ಮುಖಂಡ, ಕೇಂದ್ರ ಸಚಿವ ಅನಂತ್ ಕುಮಾರ್ ನಿಧನರಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 3 ದಿನಗಳ ಶೋಕಾಚರಣೆ ಇರಲಿದ್ದು, ಎಲ್ಲಾ ಶಾಲೆ, ಕಾಲೇಜುಗಳಿಗೆ ಒಂದು ದಿನದ ರಜೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ.

ತೀವ್ರ ಅನಾರೋಗ್ಯದಿಂದ ಇಂದು ಬೆಳಗಿನ ಜಾವ ವಿಧಿವಶರಾದ ಅನಂತ್ ಕುಮಾರ್ ಬೆಂಗಳೂರಿನ ಚಾಮರಾಜಪೇಟೆಯ ಶಂಕರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಳಿಗ್ಗೆ 9 ಗಂಟೆಯ ನಂತರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅನಂತ್ ಕುಮಾರ್ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Categories
Breaking News State

ಮೂರು ದಿನ ವಿಶ್ರಾಂತಿ ಪಡೆಯಲಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ವೈದ್ಯರ ಸಲಹೆಯ ಮೇರೆಗೆ ಇಂದಿನಿಂದ ನವೆಂಬರ್ 11 ರ ವರೆಗೆ ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.

‘ ಈ ಮೂರು ದಿನಗಳ ಕಾಲ ಸಿಎಂ ಎಚ್,ಡಿ ಕುಮಾರಸ್ವಾಮಿ ಅವರು ತಮ್ಮ ಕುಟುಂಬದವರೊಂದಿಗೆ ಕಾಲ ಕಳೆಯಲಿದ್ದಾರೆ. ಈ ಅವಧಿಯಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮಗಳು ಇರುವುದಿಲ್ಲ ‘ ಎಂಬುದಾಗಿ ತಿಳಿದು ಬಂದಿದೆ.

ನಾಳೆ ವಿವಾದಿತ ಟಿಪ್ಪು ಜಯಂತಿ ವಿಧಾನಸೌಧದಲ್ಲಿ ಸರ್ಕಾರದ ವತಿಯಿಂದ ನಡೆಸಲು ನವಂಬರ್ 3 ರಂದೇ ನಿರ್ಧರಿಸಲಾಗಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ನನ್ನ ಹೆಸರು ಹಾಕಬೇಡಿ ಎಂದು ಸಿಎಂ ಮೊದಲೇ ಸೂಚಿಸಿದ್ದರು.