ಕೊರೊನಾ ನೆಪದಲ್ಲಿ 10 ಸಾವಿರ ಕೋಟಿ ಹಗರಣ: ಎಎಪಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ

ಕೊರೊನಾ ನೆಪದಲ್ಲಿ ಸುಮಾರು 10 ಸಾವಿರ ಕೋಟಿಗಳಷ್ಟು ಬೃಹತ್ ಹಗರಣವನ್ನು ರಾಜ್ಯ ಬಿಜೆಪಿ ಸರ್ಕಾರ ನಡೆಸಿದೆ. ಅಲ್ಲದೇ ಹೋಮ್ ಐಸೋಲೇಷನ್ ಇರುವವರಿಗೆ ಕಿಟ್ ನೀಡಲಾಗುವುದು ಎಂದು ಹೇಳಿ ಯಾವುದೇ ಕಿಟ್ ನೀಡಿಲ್ಲ ಆದರೆ ಕಿಟ್ ನೀಡಲಾಗಿದೆ ಎಂದು ಸುಮಾರು ₹150 ಕೋಟಿ ಹಣ ದೋಚಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆರೋಪಿಸಿದರು.

ಗುರುವಾರ ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕಾಲ್ ಸೆಂಟರ್‌ಗಳ ಮೂಲಕ ಸೋಂಕಿತರಿಗೆ ಕರೆ ಮಾಡಲು ಸರ್ಕಾರವೇ ತಿಳಿಸಿರುವಂತೆ ₹69 ನೀಡಲಾಗುತ್ತಿದೆ. ಸುಮ್ಮನೆ ಅಂದಾಜು ಲೆಕ್ಕ ಹಾಕಿದರೂ 8 ಲಕ್ಷ ಜನರಿಗೆ 5 ಬಾರಿ ಕರೆ ಮಾಡಲು ನೂರಾರು ಕೋಟಿ ವ್ಯಯಿಸಲಾಗಿದೆ. ಹೆಚ್ಚುವರಿಯಾಗಿ 50 ರೂ ನೀಡಿ ಹಣ ದೋಚಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಪ್ರವಾಹ: ತೆಲಂಗಾಣ ರಾಜ್ಯಕ್ಕೆ 15 ಕೋಟಿ ನೆರವು ಘೋಷಿಸಿದ ದೆಹಲಿ ಸರ್ಕಾರ!

ದೀಪಾವಳಿ ಮತ್ತು ದಸರಾ ಹಬ್ಬಕ್ಕೆ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಂಪರ್ ಕೊಡುಗೆ ನೀಡುತ್ತಿದ್ದು 3 ನೇ ಸ್ಥಾನದಿಂದ 2 ನೇ ಸ್ಥಾನಕ್ಕೆ ಕೊಂಡೊಯ್ಯಲಿದ್ದಾರೆ ಎಂದು ವ್ಯಂಗ್ಯವಾಡಿದರು.

ದೆಹಲಿ ಮಾದರಿಯನ್ನು ಅನುಸರಿಸಿ ಎಂದು ಸ್ವತಃ ಪ್ರಧಾನಿಗಳೇ ಹೇಳಿದ್ದರೂ ನಮ್ಮ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿತು. ವೈಯಕ್ತಿಕವಾಗಿ ನಾನೇ ನಮ್ಮ ರಾಜ್ಯದ ಆರೋಗ್ಯ ಮಂತ್ರಿಗಳಿಗೆ ಕರೆ ಮಾಡಿ, ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದರು ಸ್ಪಂದಿಸಲಿಲ್ಲ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ, ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಮುಖ್ಯ ವಕ್ತಾರ ಶರತ್ ಖಾದ್ರಿ ಇದ್ದರು.


ಇದನ್ನೂ ಓದಿ: ಹೊಸ ಬೆಂಗಳೂರು ಚಲನಚಿತ್ರ ಮತ್ತು ಜನ ಸಂವಾದದ ಮೂಲಕ ಮನೆ ಮನೆಗೂ ಆಮ್ ಆದ್ಮಿ ಅಭಿಯಾನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights