ಉಗ್ರರ ದಾಳಿಗೆ ಎದೆ ಕೊಟ್ಟು ಬಲಿಯಾದ ವೀರ ಯೋಧನ ಕಥೆ ಇದು….

ಆತ ದೇಶ ಕಾಯೋಕೂ ಸೈ ಕ್ರೀಡೆಗೂ ಸೈ ಎಂಬಂತಿದ್ದ ವೀರ ಯೋಧ. ದೇಶದ ಗಡಿ ಭಾಗದಲ್ಲಿ ಉಗ್ರರ ಗುಂಡಿಗೆ ತಕ್ಕ ಪಾಠ ಕಲಿಸಲು ಮುಂದಾದ ವೀರ ಯೋಧ.. ಉಗ್ರರ ಗುಂಡಿಗೆ ಎದೆ ಕೊಟ್ಟು ನಿಂತು ಹೋರಾಡಿದ ಭಾರತ ಮಾತೆ ಹೆಮ್ಮೆಯ ಪುತ್ರ. ಆತ ಉಗ್ರರನ್ನ ಸೇದೆ ಬಡೆಯೋದು ಅಷ್ಟೇ ಅಲ್ಲ, ದೇಶ ವಿದೇಶದಲ್ಲಿ ಕ್ರೀಡೆಯಲ್ಲಿ ಫೇಮಸ್ ಆಗಿದ್ದ ಆ ವೀರ ಯೋಧ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೀಕ್ ಬಾಕ್ಸಿಂಗ್ ನಲ್ಲಿ ಮಿಂಚಿದ ಆತ ಡಿಸೆಂಬರ್ ೨೫ ರಂದು ಜಮ್ಮು ಕಾಶ್ಮೀರದ ಉರಿ ಪ್ರದೇಶದಲ್ಲಿ ಉಗ್ರರ ದಾಳಿಗೆ ಬಲಿಯಾಗಿದ್ದಾನೆ.. ಆ ವೀರ ಯೋಧನ ಕುರಿತು ಒಂದು ಸ್ಪೇಷಲ್ ಸ್ಟೋರಿ ಇಲ್ಲಿದೆ..

ನಾವೀಗ ಹೇಳಲು ಹೊರಟಿರೋದು ಗದಗ ಜಿಲ್ಲೆಯ ರೋಣ ತಾಲೂಕಿನ ಕರಮುಡಿ ಗ್ರಾಮದ ವೀರೇಶ ಕುರಹಟ್ಟಿ ಸೈನಿಕನ ಬಗ್ಗೆ. ವೀರೇಶ ತಮ್ಮ ೧೮ ನೇ ವಯಸ್ಸಿನಲ್ಲಿ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಸೇರಿದ್ರು. ಭಾರತೀಯ ಸೇನೆಗಾಗಿ ಈಗಾಗಲೇ ವೀರೇಶ್ ೨೯ ವರ್ಷ ೯ ತಿಂಗಳ ಸೇವೆ ಸಲ್ಲಿಸಿ ವೀರ ಮರಣ ಹೊಂದಿದ್ರು. ಇನ್ನು ಭಾರತೀಯ ಸೇನೆಯಲ್ಲಿ ಮೂರು ತಿಂಗಳು ಮಾತ್ರ ಸೇವೆ ಬಾಕಿ ಇತ್ತು. ಅಷ್ಟರಲ್ಲೆ ನರಿ ಬುದ್ಧಿ ಪಾಕ್ತಿಸ್ಥಾನದ ಉಗ್ರರ ಧಾಳಿಗೆ ಬಲಿಯಾದ್ರು.

ಅವರು ಸೈನಿಕರಾಗಿ ಅಷ್ಟೇ ಅಲ್ಲ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿಯೂ ಸಹ ಹೆಸರು ಮಾಡಿದ್ರು ವೀರೇಶ್. ಆತನಿಗೆ ಕ್ರೀಡೆಯಲ್ಲಿ ಕಿಕ್ ಬಾಕ್ಸಿಂಗ್ ಅಂದ್ರೇ ತುಂಬಾನೆ ಇಷ್ಟಾದ ಕ್ರೀಡೆಯಾಗಿತ್ತು. ಕಿಕ್ ಬಾಕ್ಸಿಂಗ್ ನಲ್ಲಿ ಭಾರತ ದೇಶದಲ್ಲಿ ಹಲವಾರು ರಾಜ್ಯದ ಪಂದ್ಯಗಳಲ್ಲಿ ಗೆದ್ದು ಪ್ರಶಸ್ತಿಗಳನ್ನು ಮುಡಿಗೇಸಿಕೊಂಡಿದ್ರು. ಅಷ್ಟೇ ಅಲ್ದೇ ಭಾರತೀಯ ಸೇನೆಯ ವತಿಯಿಂದ ಯುಎಸ್ ಎ ಯಲ್ಲಿಯೂ ಸಹ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗಹಿಸಿದ್ರಂತೆ. ಹೀಗಾಗಿ ವೀರೇಶ್ ಒಬ್ಬ ಅತ್ಯುತ್ತಮ ಪ್ರತಿಭೆಯಾಗಿ ಹೊರಹೊಮ್ಮಿದ.. ಆದ್ರೇ ವೀರೇಶ ಅವರ ಬಾಳಲ್ಲಿ ಡಿಸೆಂಬರ್ ೨೫ ಕರಾಳ ದಿನವಾಗಿ ಮಾರ್ಪಟ್ಟಿತು. ಉಗ್ರರನ್ನ ಸೇದೆ ಬಡೆಯಲು ಹೋಗಿ ತಾನು ದೇಶದ ರಕ್ಷಣೆಗೋಸ್ಕರ ಬಲಿಯಾದ್ರು.. ವೀರ ಯೋಧನ ಕಳೆದುಕೊಂಡ ಹೆತ್ತ ಕರಳು ಅಳಲು ಹೇಳತ್ತಿರದ್ದಾಗಿದೆ..

 

ವೀರ ಯೋಧನ ಸುಪುತ್ರ ಮನೋಜ್ ಸಹ ನಾನು ಡಾಕ್ಟರ್ , ಇಂಜಿನಿಯರ್ ಆಗುವ ಕನಸು ಕಂಡಿದ್ದೆ, ಆದ್ರೆ ನನ್ನ ತಂದೆ ಯವರ ವೀರ ಮರಣ ನೋಡಿ ನಾನು ಸಹ ಆರ್ಮಿಗೆ ಸೇರಿ ದೇಶ ಸೇವೆ ಮಾಡುತ್ತೇನೆ, ನಮ್ಮ ತಂದೆಯ ಸಾವಿಗೆ ಕಾರಣರಾದ ಉಗ್ರರನ್ನ ಸೇದೆ ಬಡೆಯುತ್ತೇನೆ ಎಂದದ್ದು ಎಂತಹವರಲ್ಲಿಯೂ ದೇಶ ಪ್ರೇಮವನ್ನ ಹೆಚ್ಚಿಸುತ್ತದೆ. ಇನ್ನು ವೀರೇಶ ಅವರ ಮನೆಗೆ ಭೇಟಿ ನೀಡಿದ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ವೀರ ಯೋಧನ ಕುಟುಂಬಕ್ಕೆ ಸಂತಾಪ ಸೂಚಿಸಿದ್ರು. ಸಚಿವರು ಸಹ ವೀರ ಯೋಧರ ಕುಟುಂಬಸ್ಥರ ಆಕ್ರಂದಣ ನೋಡಿ ದುಃಖಿತರಾದ್ರು.

ವೀರ ಯೋಧನ ಕುಟುಂಬದ ಎರಡು ಮಕ್ಕಳಿಗೆ ಸ್ವತಹ ಸಚಿವರೇ ತಮ್ಮ ಸ್ವಂತ ಒಂದುವರೆ ಲಕ್ಷ ರೂಪಾಯಿ ಹಣವನ್ನ ನೀಡಿದ್ದಾರೆ. ಅಷ್ಟೇ ಅಲ್ದೇ ದೇಶದ ರಕ್ಷಣೆಗಾಗಿ ಪ್ರಾಣ ತಾಗ್ಯ ಮಾಡಿದ ಯೋಧನ ಕುಟುಂಬದ ಜವಾಬ್ದಾರಿ ಸರ್ಕಾರದ್ದಾಗಿದೆ ಹೀಗಾಗಿ ಯೋಧನ ಮಕ್ಕಳ ವಿದ್ಯಾಭ್ಯಾಸ ಖರ್ಚು ಸರ್ಕಾರ ನೋಡಿಕೊಳ್ಳತ್ತದೆ ಎಂದ್ರು. ಅಷ್ಟೇ ಅಲ್ದೇ ಗದಗ ಜಿಲ್ಲಾಡಳಿತ ಯೋಧನ ಅಂತ್ಯಕ್ರಿಯೆಗೆ ಸಕ್ಕಲ ಸಿದ್ದತೆ ಮಾಡಿಕೊಂಡಿದೆ. ಇಂದು ಮಧ್ಯಾಹ್ನದವರೆಗೆ ಯೋಧನ ತವರೂರಿಗೆ ಪಾರ್ಥಿವ ಶರೀರ ಬರಲಿದೆ. ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.

ತಾಯ್ನಾಡನ್ನ ಉಳಿಸುವ ನಿಟ್ಟಿನಲ್ಲಿ ಜಮ್ಮು ಕಾಶ್ಮೀರದ ಉರಿ ಪ್ರದೇಶದಲ್ಲಿ ನಡೆದಂತಹ ಉಗ್ರರ ಗುಂಡಿನ ದಾಳಿಗೆ ಎದೆಯೊಡ್ಡಿದ ಹೆಮ್ಮೆಯ ವೀರ ಯೋಧ ವೀರೇಶ ಕುರಹಟ್ಟಿ ಮತ್ತೆ ಹುಟ್ಟಿ ಬರಲಿ ಎಂದು ದೇವರಲ್ಲಿ ಹಾರೈಸೋಣ.. ಜೈ ಹಿಂದ್…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights