‘ನನ್ನ ಪ್ರಕಾರ ನೆರೆ ನಿರ್ವಹಣೆಗೆ ಹಣಕಾಸಿನ ಕೊರತೆ ಇಲ್ಲ’ ಸಚಿವ ಆರ್ ಅಶೋಕ್

ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಅನ್ನೊ ಸಿ ಎಂ ಹೇಳಿಕೆ ವಿಚಾರಕ್ಕೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್ ಅಶೋಕ್ ತ್ಯಾಪೆ ಹಚ್ಚೋ ಕೆಲಸ ಮಾಡಿದಂತೆ ಕಾಣುತ್ತದೆ.

ಸಿ ಎಂ ಯಡಿಯೂರಪ್ಪ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೊ ಗೊತ್ತಿಲ್ಲ. ನೆರೆ ನಿರ್ವಹಣೆ ಅನ್ನೋದು ಕಂದಾಯ ಇಲಾಖೆಯ ನಿರ್ವಹಣೆಯಲ್ಲೇ ಬರುತ್ತೆ. ನನ್ನ ಪ್ರಕಾರ ನೆರೆ ನಿರ್ವಹಣೆಗೆ ಹಣಕಾಸಿನ ಕೊರತೆ ಇಲ್ಲ. ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ.

ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ವರದಿ ತಿರಸ್ಕರಿಸಿಲ್ಲ. ಬದಲಾಗಿ ಕೆಲವು ಬದಲಾವಣೆ ಬಯಸಿದ್ದಾರೆ. ರಾಜ್ಯ ಸರ್ಕಾರದ ವರದಿ ಮತ್ತು ಕೇಂದ್ರ ಸರ್ಕಾರದ ವರದಿಗಳಲ್ಲಿ ಸಾಮ್ಯತೆ ಇದೆ. ನಮ್ಮ ರಾಜ್ಯಕ್ಕೆ ಪರಿಹಾರ ನೀಡಿದರೆ ಬೇರೆ ರಾಜ್ಯಗಳು ಕೇಳ್ತಾರೆ.

ಬೇರೆ ರಾಜ್ಯಗಳಲ್ಲೂ ನೆರೆ ಉಂಟಾಗಿರುವುದರಿಂದ ಎಲ್ಲಾ ರಾಜ್ಯಗಳಿಗೂ ಒಟ್ಟಿಗೆ ನೀಡಲು ನಿರ್ಧರಿಸಿದಂತೆ ಕಾಣುತ್ತದೆ. ಮೂರ್ನಾಲ್ಕು ದಿನಗಳಲ್ಲಿ ಕೇಂದ್ರ ನೆರೆ ಪರಿಹಾರ ನೀಡುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply