ಕ್ವಾರಂಟೈನಲ್ಲೇ ವಲಸೆ ಕಾರ್ಮಿಕರಿಂದ ಸಾಮೂಹಿಕ ಅತ್ಯಾಚಾರ : ಇಬ್ಬರ ಬಂಧನ!

ಹದಿಹರೆಯದ ಬಾಲಕಿಯನ್ನು ಬಿಹಾರದ ಕ್ಯಾರೆಂಟೈನ್ ಸೌಲಭ್ಯದಲ್ಲಿ ಇರಿಸಲಾಗಿರುವ ಇಬ್ಬರು ವಲಸೆ ಕಾರ್ಮಿಕರು ಸೇರಿದಂತೆ 6 ಪುರುಷರು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಕೊರೊನಾ ಲಾಕ್ ಡೌನ್ ನಡುವೆಯೂ ಸಾಮೂಹಿಕ ಅತ್ಯಾಚಾರ ಬೆಳಕಿಗೆ ಬಂದಿದ್ದು 18 ವರ್ಷದ ಹುಡುಗಿಯ ಮೇಲೆ ವಲಸೆ ಕಾರ್ಮಿಕರು ಕ್ವಾರಂಟೈನ್ ನಲ್ಲೇ ಅತ್ಯಾಚಾರ ಎಸಗಿದ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ. ಕಟ್ಟುನಿಟ್ಟಾದ ಕಾನೂನು ಕ್ರಮದ ಹೊರತಾಗಿಯೂ ಇಬ್ಬರು ವಲಸೆ ಕಾರ್ಮಿಕರು ಮತ್ತು ಇತರ ನಾಲ್ವರು ಪುರುಷರಿಂದ ಅತ್ಯಾಚಾರ ನಡೆದಿದೆ.

ಈ ಘಟನೆ ದಾವತ್ ಪೊಲೀಸ್ ಠಾಣೆಯ ಪ್ರಾದೇಶಿಕ ವ್ಯಾಪ್ತಿಯಲ್ಲಿ ನಡೆದಿದೆ. ರಾಜಕೀಯ ಒತ್ತಡದಿಂದಾಗಿ, ಪೊಲೀಸರು ಈ ವಿಷಯವನ್ನು ನಿಗ್ರಹಿಸಲು ಪ್ರಯತ್ನಿಸಿದರು. ಆದರೆ ಪೊಲೀಸ್ ನಿಷ್ಕ್ರಿಯತೆಯ ಬಗ್ಗೆ ಬದುಕುಳಿದ ಹುಡುಗಿಯ ಕುಟುಂಬ ಆರೋಪಿಸಿದ ನಂತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಗುರುವಾರ ಆರು ಮಂದಿ ಆರೋಪಿಗಳಾದ ವಿಜಯ್ ಯಾದವ್ (20), ಸುರೇಶ್ ಯಾದವ್ (22), ಮುಖೇಶ್ ಯಾದವ್ (21), ಚಂಚಲ್ ಯಾದವ್ (22), ಅಮಿತ್ ಪಾಸ್ವಾನ್ (18), ಮತ್ತು ಚುಲ್ಲಿ ಪಾಸ್ವಾನ್ (18) ಎಂದು ಗುರುತಿಸಲಾಗಿದೆ. ಶುಕ್ರವಾರ, ಸಂತ್ರಸ್ಥ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸಸಾರಂ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡುವಾಗ ರೋಹ್ತಾಸ್ ಪೊಲೀಸ್ ವರಿಷ್ಠಾಧಿಕಾರಿ ಸತ್ಯವೀರ್ ಸಿಂಗ್ ಅವರು ಆರು ಆರೋಪಿಗಳಲ್ಲಿ ಚಂಚಲ್ ಮತ್ತು ಸುರೇಶ್ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದರು. ಇಬ್ಬರು ಕ್ವಾರಂಟೈನ್‌ ಕೇಂದ್ರದಲ್ಲಿ ತಂಗಿದ್ದರು. ಅವರು ಇತರ ನಾಲ್ವರು ಆರೋಪಿಗಳಿಗೆ ಕರೆ ಮಾಡಿ ಗ್ರಾಮದಿಂದ ಕರೆಸಿಕೊಂಡಿದ್ದರು.

ರಾತ್ರಿ 9: 30 ರ ಸುಮಾರಿಗೆ ಕ್ವಾರಂಟೈನ್ ಸೌಲಭ್ಯದ ಹೊರಗೆ ಈ ಘಟನೆ ನಡೆದಿದೆ ಎಂದು ಸಿಂಗ್ ಹೇಳಿದರು. ಸಂತ್ರಸ್ಥ ಹುಡುಗಿ ತನ್ನ ಮನೆಯಲ್ಲಿ ಶೌಚಾಲಯವಿಲ್ಲದ ಕಾರಣ ಬರಿರ್ದೆಸೆಗೆ ಪಕ್ಕದಲ್ಲಿದ್ದ ಕೃಷಿ ಜಮೀನಿಗೆ ಹೋಗಿದ್ದಳು. ಈ ವೇಳೆ ಇಬ್ಬರು ವಲಸೆ ಕಾರ್ಮಿಕರು ಕೇಂದ್ರದ ಗಡಿಯ ಮೈದಾನದಲ್ಲಿ ಬಾಲಕಿಯನ್ನು ತಡೆದು, ಮತ್ತೆ ನಾಲ್ವರನ್ನು ಅಲ್ಲಿಗೆ ಕರೆದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights