IPL 2020: ಪ್ರಯೋಕತ್ವದಿಂದ ಹಿಂದೆ ಸರಿದ ವಿವೋ; ಬಿಡ್‌ ಗೆದ್ದ ಡ್ರೀಮ್ 11

ಯುಎಇಯಲ್ಲಿ ನಡೆಯಲಿರುವ 2020ರ IPL ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವ ಡ್ರೀಮ್ 11 ಕಂಪನಿಯು ಪಡೆದುಕೊಂಡಿದೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಘೋಷಿಸಿದ್ದಾರೆ.

ಭಾರತ-ಚೀನಾ ಗಡಿ ಸಂಘರ್ಷದ ನಂತರ ಚೀನಾದ ವಿವೋ ಮೊಬೈಲ್‌ ಸಂಸ್ಥೆಯು ಐಪಿಎಲ್ ಪ್ರಾಯೋಕತ್ವದಿಂದ ಹಿಂದೆ ಸರಿದ ಕಾರಣ ಹೊಸ ಪ್ರಯೋಜಕರಿಗಾಗಿ ಬಿಡ್‌ ಕರೆಯಲಾಗಿತ್ತು. ಐಪಿಎಲ್‌ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಭಾರಿ ಪೈಪೋಟಿ ನಡೆದಿದ್ದು, ಬಾಬಾ ರಾಮ್ ದೇವ್ ನೇತೃತ್ವದ ಪತಂಜಲಿ ಸಂಸ್ಥೆ ಕೂಡ ಬಿಡ್ ಮಾಡುವುದುಕ್ಕಾಗಿ ಮುಂದೆ ಬಂದಿತ್ತು. ಅಂತಿಮವಾಗಿ ಡ್ರೀಮ್ 11 ಸಂಸ್ಥೆ ಐಪಿಎಲ್ 2020 ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದೆ.

‘ವಿವೋ ಈ ಬಾರಿಯ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದಕ್ಕೆ ಸರಿದಿದ್ದರಿಂದಾಗಿ ಹೊಸ ಪ್ರಾಯೊಜಕರನ್ನು ಹುಡುಕಬೇಕಾದ ಅನಿವಾರ್ಯತೆ ಬಿಸಿಸಿಐಗೆ ಬಂದಿತ್ತು. ಅದಕ್ಕಾಗಿ ಬಿಡ್ ಆಹ್ವಾನಿಸಲಾಗಿತ್ತು. ಸಾಕಷ್ಟು ಕಂಪನಿಗಳು ಮುಂದೆ ಬಂದಿತ್ತು. ಅವರಲ್ಲಿ  ಡ್ರೀಮ್ 11 ಈ ಬಾರಿಯ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದೆ ಎಂದುಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಅವರು ಮಾಹಿತಿ ನೀಡಿದ್ದಾರೆ.

ಮೂಲಗಳ ಪ್ರಕಾರ ‘ಡ್ರೀಮ್ 11 ಈ ಬಾರಿಯ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆಯಲು ದೊಡ್ಡ ಮೊತ್ತದ ಹಣ ಹೂಡಿದೆ. 222 ಕೋಟಿ ರೂಪಾಯಿ ಮೊತ್ತಕ್ಕೆ ಡ್ರೀಮ್ 11 ಈ ಬಾರಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಈ ಮೂಲಕ ಪ್ರಮುಖ ಕಂಪನಿಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ವಿವೋ ಕಂಪನಿ ಶೀರ್ಷಿಕೆ ಪ್ರಾಯೋಜಕತ್ವಕ್ಕೆ 440 ಕೋಟಿಯ ವಾರ್ಷಿಕ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಟೂರ್ನಿ ಆರಂಭಕ್ಕೆ 45 ದಿನಗಳಿರುವಾಗ ಅನಿವಾರ್ಯವಾಗಿ ಟೂರ್ನಿಯಿಂದ ವಿವೋ ಹೊರಗುಳಿಯುವ ನಿರ್ಧಾರಕ್ಕೆ ಬಂದಿತ್ತು. ಹೀಗಾಗಿ ಆ ಮೌಲ್ಯದ ಅರ್ಧದಷ್ಟು ಮೊತ್ತ ಲಭಿಸಿದರೂ ಬಿಸಿಸಿಐ ಪಾಲಿಗೆ ಲಾಭ ಎಂಬ ವಿಮರ್ಶೆಗಳು ನಡೆದಿತ್ತು. ಅಂದುಕೊಂಡಂತೆಯೇ ಆ ಮೊತ್ತವವನ್ನು ಬಿಸಿಸಿಐ ಡ್ರೀಮ್ 11 ಮೂಲಕ ಪಡೆದುಕೊಂಡಿದೆ.


ಇದನ್ನೂ ಓದಿ: Facebook-BJP ನಂಟು: ಫೇಸ್‌ಬುಕ್‌ನ ಭಾರತದ ನಿರ್ದೇಶಕಿ ಅಂಖಿದಾಸ್‌ ವಿರುದ್ಧ ಎಫ್‌ಐಆರ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love
Verified by MonsterInsights